ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಾಲೆಯ ತರಗತಿಯಲ್ಲೇ ಕುಸಿದು ಬಿದ್ದ 9 ವರ್ಷದ ಬಾಲಕಿ ಸಾವು

ನವದೆಹಲಿ: ದೆಹಲಿಯ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುತ್ತಿದ್ದ ಒಂಬತ್ತು ವರ್ಷದ ಬಾಲಕಿ ತರಗತಿಯಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಬಾಲಕಿಯ ಸಾವಿಗೆ ಹೃದಯಾಘಾತ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬಾಲಕಿ ಕುಸಿದು ಬೀಳುತ್ತಿರುವ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೂರ್ವ ದೆಹಲಿಯ ಮಯೂರ್ ವಿಹಾರ್ ಪ್ರದೇಶದಲ್ಲಿರುವ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪಿಟಿ ಅವಧಿ ಮುಗಿದ ಬಳಿಕ ತರಗತಿಗೆ ಮರಳಿದ ಬಾಲಕಿ, ಇದ್ದಕ್ಕಿದ್ದಂತೆ ಮುಖ ಕೆಳಗೆ ಮಾಡಿ ಕುಸಿದು ಬಿದ್ದಿದ್ದಾಳೆ.

ಬಾಲಕಿ ಕುಸಿದು ಬೀಳುತ್ತಿದ್ದಂತೆ ತರಗತಿಯಲ್ಲಿದ್ದ ಶಿಕ್ಷಕಿ ತಕ್ಷಣ ಆಕೆಯ ನೆರವಿಗೆ ಧಾವಿಸಿದ್ದಾರೆ. ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

Edited By :
PublicNext

PublicNext

04/11/2026 09:33 pm

Cinque Terre

3.05 K

Cinque Terre

0

ಸಂಬಂಧಿತ ಸುದ್ದಿ