ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈಲ್ವೆ ನಿಲ್ದಾಣದಲ್ಲಿ ₹1.40 ಕೋಟಿ ನಗದು ಪತ್ತೆ; ಹಣದ ಕಂತೆ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು!

ಪಶ್ಚಿಮ ಬಂಗಾಳ : ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬನ ಬಳಿ ಕೋಟ್ಯಂತರ ರೂಪಾಯಿ ನಗದು ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ಖರಗ್‌ಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ಜನಶತಾಬ್ದಿ ರೈಲಿನಿಂದ ಇಳಿದು ಹೌರಾ ಕಡೆಗೆ ತೆರಳಲು ಸಿದ್ಧವಾಗಿದ್ದ ರಾಹುಲ್ ಸೋನಿ ಎಂಬ ಪ್ರಯಾಣಿಕನನ್ನು ರೈಲ್ವೆ ಪೊಲೀಸ್ ಪಡೆ (GRP) ತಡೆದು ಪರಿಶೀಲಿಸಿದೆ. ಈ ವೇಳೆ ಆತನ ಬ್ಯಾಗ್‌ನಲ್ಲಿ ಬರೋಬ್ಬರಿ ₹1.40 ಕೋಟಿ ನಗದು ಪತ್ತೆಯಾಗಿದೆ. ಬಳಿಕ ಅಧಿಕಾರಿಗಳು ಹಣದ ಕಂತೆಗಳನ್ನು ಹೊರತೆಗೆದು ಪರಿಶೀಲಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ನಿಲ್ದಾಣದಲ್ಲೇ ಹಣದ ಕಂತೆಗಳನ್ನು ಎಣಿಸುತ್ತಿರುವ ದೃಶ್ಯಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ. ಹಣದ ಮೂಲ ಮತ್ತು ಸಾಗಾಟದ ಉದ್ದೇಶವೇನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By :
PublicNext

PublicNext

05/11/2026 11:27 am

Cinque Terre

3.15 K

Cinque Terre

0

ಸಂಬಂಧಿತ ಸುದ್ದಿ