ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

‘ಹಳ್ಳಿಗರೆಂದರೆ ಗುಗ್ಗುಗಳಲ್ಲ’: ಪ್ರಿಯಾಂಕ್ ಖರ್ಗೆ ‘ಹಳ್ಳಿ ಗುಗ್ಗು’ ಹೇಳಿಕೆಗೆ ಎಚ್‌ಡಿಕೆ ಕೆಂಡಾಮಂಡಲ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ಈಗ ‘ಹಳ್ಳಿ vs ಪಟ್ಟಣ’ದ ಪ್ರತಿಷ್ಠೆಯ ಕದನವಾಗಿ ಮಾರ್ಪಟ್ಟಿದೆ. "ಹಳ್ಳಿಗರೆಂದರೆ ಗುಗ್ಗುಗಳಲ್ಲ" ಎಂದು ಗುಡುಗುವ ಮೂಲಕ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗೆ ಖಡಕ್ ತಿರುಗೇಟು ನೀಡಿದ್ದಾರೆ.

ಇತ್ತೀಚೆಗೆ ನಡೆದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿದ್ದ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, "ಕುಮಾರಸ್ವಾಮಿ ಅವರೇನು ಹಳ್ಳಿ ಗುಗ್ಗುನಾ? ತನಿಖೆ ಲೈವ್ ಸ್ಟ್ರೀಮ್ ಮಾಡಲು ನಾವಿಲ್ಲಿ ಬಿಗ್ ಬಾಸ್ ನಡೆಸುತ್ತಿದ್ದೀವಾ? ತನಿಖೆ ಎನ್ನುವುದು ಮಕ್ಕಳ ಆಟವಲ್ಲ. ಅವರಿಂದ ಪ್ರಮಾಣಪತ್ರ ಪಡೆಯುವ ಅಥವಾ ಕಲಿಯುವ ಅಗತ್ಯ ನನಗಿಲ್ಲ" ಎಂದು ವ್ಯಂಗ್ಯವಾಡಿದ್ದರು.

ಪ್ರಿಯಾಂಕ್ ಖರ್ಗೆ ಅವರ ‘ಹಳ್ಳಿ ಗುಗ್ಗು’ ಪದಪ್ರಯೋಗಕ್ಕೆ ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ಮೂಲಕ ಗರಂ ಆಗಿಯೇ ಉತ್ತರಿಸಿರುವ ಕುಮಾರಸ್ವಾಮಿ, "ಭಾರತದ ಆತ್ಮ ಹಳ್ಳಿಗಳಲ್ಲಿದೆ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರೇ ಹೇಳಿದ್ದಾರೆ. ಹೌದು, ನಾನು ಹಳ್ಳಿಯವನು. ಹಳ್ಳಿಯಲ್ಲೇ ಹುಟ್ಟಿ, ಹಟ್ಟಿಯಲ್ಲಿ ಆಡಿ ಬೆಳೆದವನು. ಹಳ್ಳಿಯವನೆಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ" ಎಂದು ತಿರುಗೇಟು ನೀಡಿದ್ದಾರೆ. ಅಷ್ಟೇ ಅಲ್ಲದೆ, #ಹಳ್ಳಿಗರೆಂದರೆಗುಗ್ಗುಗಳಲ್ಲ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಆಕ್ರೋಶ ಹೊರಹಾಕಿದ್ದಾರೆ.

‘ಹೌದು ಗುರು ನಾವು ಹಳ್ಳಿಯವರು, ಏನಿವಾಗ?’: ಜೆಡಿಎಸ್ ಬೃಹತ್ ಅಭಿಯಾನ

ಕುಮಾರಸ್ವಾಮಿ ಅವರ ಮೇಲಿನ ಪ್ರಿಯಾಂಕ್ ಖರ್ಗೆ ಅವರ ಟೀಕೆಯನ್ನು ಇಡೀ ಗ್ರಾಮೀಣ ಜನತೆಗೆ ಮಾಡಿದ ಅವಮಾನವೆಂದು ಪರಿಗಣಿಸಿರುವ ಜೆಡಿಎಸ್, ರಾಜ್ಯಾದ್ಯಂತ ಪ್ರತಿಭಟನೆಯ ರೂಪದಲ್ಲಿ ಹೊಸ ಅಭಿಯಾನವನ್ನೇ ಆರಂಭಿಸಿದೆ. ‘ಹೌದು ಗುರು ನಾವು ಹಳ್ಳಿಯವರು ಏನಿವಾಗ?’ ಎಂಬ ಶೀರ್ಷಿಕೆಯಡಿ ಹಳ್ಳಿಹಳ್ಳಿಗಳಲ್ಲಿ ಕಾರ್ಯಕರ್ತರು ಮತ್ತು ಮುಖಂಡರ ಮೂಲಕ ಜನಾಭಿಪ್ರಾಯ ರೂಪಿಸಲು ಜೆಡಿಎಸ್ ಕಣಕ್ಕಿಳಿದಿದ್ದು, ಈ ವಾಕ್ಸಮರ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Edited By : Nirmala Aralikatti
PublicNext

PublicNext

05/11/2026 12:06 pm

Cinque Terre

6.21 K

Cinque Terre

1

ಸಂಬಂಧಿತ ಸುದ್ದಿ