ಬೆಂಗಳೂರು : ಬರ ಪರಿಸ್ಥಿತಿಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಸಿಗಲಿದೆ. ರೈತರಿಗೆ ಘೋಷಿಸಲಾಗಿದ್ದ ಮಧ್ಯಂತರ ಬೆಳೆ ಪರಿಹಾರದ ಮೊತ್ತವನ್ನು ಇಂದು (ನ.5) ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಇಂದು ಮಧ್ಯಾಹ್ನ 12:30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳೆ ಪರಿಹಾರ ವಿತರಣೆಗೆ ಚಾಲನೆ ನೀಡಲಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಬರ ಪರಿಹಾರದ ಮೊದಲ ಹಂತವಾಗಿ ಅರ್ಹ ರೈತರಿಗೆ ತಲಾ ₹2,500 ನೀಡುವುದಾಗಿ ಘೋಷಿಸಿತ್ತು.
ಇದೀಗ ಪರಿಹಾರ ವಿತರಣೆಗೆ ದಿನಾಂಕ ಮತ್ತು ಸಮಯ ನಿಗದಿಯಾಗಿದ್ದು, ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗುವ ನಿರೀಕ್ಷೆಯಿದೆ. ಬರದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಈ ನೆರವು ಸ್ವಲ್ಪಮಟ್ಟಿನ ಆಸರೆಯಾಗಲಿದೆ.
PublicNext
05/11/2026 07:45 am