ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಎರಡು ವರ್ಷ ಪೂರೈಸಿದೆ ಇದಕ್ಕಾಗಿ ಇಂದು ಹೊಸಪೇಟೆಯಲ್ಲಿ ಬೃಹತ್ ಸಾಧನ ಸಮಾವೇಶ ಸಹ ಮಾಡಿದೆ. ಇದ್ರ ಬೆನ್ನಲ್ಲೇ ಇದೀಗ ಸಂಪುಟ ಪುನರಚನೆಯ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಲ್ಲರಿಗೂ ಅಧಿಕಾರ ಸಿಗಬೇಕು ಎಂಬ ಒತ್ತಡ ಪಕ್ಷದೊಳಗೆ ಚರ್ಚೆಯಾಗುತ್ತಿದೆ.
ಈ ಹಿಂದೆಯೂ ಹೈಕಮಾಂಡ್ ಸಹ ಹೊಸಬರಿಗೆ ಅವಕಾಶ ಕಲ್ಪಿಸುವ ಬಗ್ಗೆ ಕೆಲವರಿಗೆ ಭರವಸೆ ಸಹ ನೀಡಿದೆ ಇದ್ರ ಬೆನ್ನಲ್ಲೇ ಇದೀಗ ಮತ್ತೆ ಸಂಪುಟ ಪುನರಚನೆ ಸದ್ದು ಕೇಳಿ ಬರ್ತಿದೆ. ಈಗಾಗಲೇ ಹೈಕಮಾಂಡ್ ಸಹ ಎಲ್ಲಾ ಸಚಿವರ ರಿಪೋರ್ಟ್ ಕಾರ್ಡ್ ಸಹ ಪಡೆದುಕೊಂಡು ಪರಾಮರ್ಶೆಯಲ್ಲಿ ತೊಡಗಿದಂತೆ. ಇದ್ರ ಆಧಾರದಲ್ಲಿ ಸಂಪುಟ ಪುನರಚನೆಯಾಗಲಿದೆ ಅಂತಿದೆ ಪಕ್ಷದ ಮೂಲಗಳು..
ಪಕ್ಷದೊಳಗೆ ಸಂಪುಟ ಪುನರಚನೆ ಚರ್ಚೆ ಮತ್ತೆ ಮುನ್ನೆಲೆಗೆ ಬರ್ತಿದೆ ಈಗಾಗಲೇ ಆಕಾಂಕ್ಷಿಗಳು
ಸಿಎಂ ಡಿಸಿಎಂ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಹಾಗಿದ್ರೆ ಸಂಪುಟದಿಂದ ಯಾರನ್ನ ಕೈಬಿಡಬೇಕು ಯಾರನ್ನು ತಗೆದುಕೊಳ್ಳಬೇಕು ಎಂಬುದರ ಕುರಿತು ಈಗಾಗಲೇ ಹೈಕಮಾಂಡ್ ಒಂದು ಸುತ್ತಿನ ಮಾತುಕತೆ ಸಹ ನಡೆಸಿದೆಂತೆ.
ಶೀಘ್ರದಲ್ಲೇ ಹೈಕಮಾಂಡ್ ಸಿಎಂ ಡಿಸಿಎಂರನ್ನ ದೆಹಲಿಗೆ ಕರೆಸಿಕೊಂಡು ಚರ್ಚೆ ನಡೆಸುವ ಸಾಧ್ಯತೆ. ಪ್ರಮುಖವಾಗಿ ಭ್ರಷ್ಟಾಚಾರ ಆರೋಪ, ಇಲಾಖೆ ಕಳಪೆ ಸಾಧನೆ, ಪಕ್ಷದ ಕೆಲಸದಲ್ಲಿ ಅವರ ಕಾರ್ಯವೈಖರಿ ಮತ್ತು ಜಾತಿ ಇವೆಲ್ಲವನ್ನೂ ಹೈಕಮಾಂಡ್ ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಯಾರನ್ನ ಸಂಪುಟದಿಂದ ಕೈಬಿಡಬೇಕು ಯಾರನ್ನ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತಾರೆ ಎನ್ನಲಾಗಿದೆ.
ಒಂದು ವೇಳೆ ಸಂಪುಟ ಪುನರಚನೆಯಾಗಿದ್ದೆಯಾದರೆ 10ಕ್ಕೂ ಹೆಚ್ಚು ಸಚಿವರನ್ನ ಬದಲಾವಣೆ ಮಾಡ್ತಾರೆ ಎನ್ನಲಾಗಿದೆ ಆದ್ರೆ ಇಷ್ಟು ದೊಡ್ಡ ಪುನರಚನೆಯಾಗಬೇಕು ಅಂದ್ರೆ ಇನ್ನೂ ಎರಡ್ಮೂರು ಸಭೆಗಳು ನಡೆಯಬೇಕಿದೆ ಇದಕ್ಕಾಗಿ ಶೀಘ್ರದಲ್ಲಿ ಈ ಕುರಿತು ಚರ್ಚೆಗೆ ಸಿಎಂ ಮತ್ತು ಡಿಸಿಎಂ ದೆಹಲಿಗೆ ತೆರಳ್ತಾರೆ ಎನ್ನಲಾಗಿದೆ.
ಇದ್ರ ನಡುವೆ ಸಂಪುಟಕ್ಕೆ ಸೇರ್ಪಡೆಯಾಗುವವರು ಮತ್ತು ಸಂಪುಟದಲ್ಲೇ ಉಳಿದುಕೊಳ್ಳಲು ಸಿಎಂ ಮತ್ತು ಡಿಸಿಎಂ ಬಣದ ಸಚಿವರು ಅವರರವರ ಹಂತದಲ್ಲಿ ಪೈಪೋಟಿ ಸಹ ನಡೆಸುತ್ತಿದ್ದಾರೆ. ಈಗಷ್ಟೇ 2 ವರ್ಷ ಪುರೈಸುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯಗೆ ಸಂಪುಟ ಪುನರಚನೆಯ ದೊಡ್ಡ ಸವಾಲ್ ಎದುರಾಗುತ್ತಿದೆ. ಇದಕ್ಕೆ ಹೈಕಮಾಂಡ್ ಏನ್ ಹೇಳಲಿದೆ ಯಾರು ಇನ್ ಯಾರು ಔಟ್ ಅನ್ನೋದಕ್ಕೆ ಸ್ಪಷ್ಟ ಉತ್ತರ ಕೆಲವೇ ದಿನಗಳಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ.
ಶರತ್ ಕಪ್ಪನಹಳ್ಳಿ, ಪೊಲಿಟಿಕಲ್ ಬ್ಯೂರೋ , ಪಬ್ಲಿಕ್ ನೆಕ್ಸ್ಟ್ ,ಬೆಂಗಳೂರು
PublicNext
21/05/2025 02:49 pm