", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1750513393-Canva---2025-06-21T191303.581.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಉಡುಪಿ/ ಕಾರ್ಕಳ: ಕಾರ್ಕಳ ತಾಲೂಕು ಮುಡಾರು ಗ್ರಾಮದ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ನಿಂದ ಮೂರು ದನ ಕಳ್ಳತನಗೈದಿದ್ದ ಆರೋಪಿಯನ್ನು ಪೊಲೀಸರ...Read more" } ", "keywords": "Udupi police operation, cow smuggling, beef transportation, Karnataka police, crime news, Udupi district, law and order, police arrest, cow protection, illegal activities, ", "url": "https://dashboard.publicnext.com/node" }
ಉಡುಪಿ/ ಕಾರ್ಕಳ: ಕಾರ್ಕಳ ತಾಲೂಕು ಮುಡಾರು ಗ್ರಾಮದ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ನಿಂದ ಮೂರು ದನ ಕಳ್ಳತನಗೈದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಲೀಂ(38) ಬಂಧಿತ ಆರೋಪಿ. ಈತನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಗಂಗೊಳ್ಳಿ ಕಡೆಗೆ ತೆರಳುವ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ದನದ ಮಾಂಸ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರಹೀಮ್(35) ಬಂಧಿತ ಆರೋಪಿ. ಈತನಿಂದ ಸ್ಕೂಟರ್ ಮತ್ತು 25 ಕೆಜಿ ದನದ ಮಾಂಸ ವಶಪಡಿಸಿಕೊಳ್ಳಲಾಗಿದ್ದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಇನ್ನೊಂದು ಪ್ರಕರಣದಲ್ಲೂ ಇದೇ ಆರೋಪಿ ಭಾಗಿಯಾಗಿದ್ದು ಈತನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
PublicNext
21/06/2025 07:13 pm