", "articleSection": "Politics,Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1750673376-7.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ : ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ಲಂಚ ಪಡೆದ ವಿಚಾರ ಸದ್ಯ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರ ಮಧ್ಯೆ ಸಾಬ್ರ ಹೆಸ್ರರ...Read more" } ", "keywords": "Mandya MLA controversy, land dispute, threat to officials, Karnataka politics, land issues, politician's ultimatum.", "url": "https://dashboard.publicnext.com/node" }
ಮಂಡ್ಯ : ವಸತಿ ಯೋಜನೆ ಅಡಿಯಲ್ಲಿ ಮನೆ ಹಂಚಿಕೆಯಲ್ಲಿ ಲಂಚ ಪಡೆದ ವಿಚಾರ ಸದ್ಯ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದರ ಮಧ್ಯೆ ಸಾಬ್ರ ಹೆಸ್ರರಿಗೆ ಏನಾದ್ರು ಪರಭಾರೆ ಮಾಡಿದ್ರೆ ನೇಣಿಗೆ ಹಾಕುವುದಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಶಾಸಕರಾದಂತಹ ರಮೇಶ್ ಬಂಡಿಸಿದ್ದೇಗೌಡ ಅಧಿಕಾರಿಗಳಿಗೆ ಧಮ್ಕಿ ಹಾಕಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಶಾಸಕ ಬಾಬುಬಂಡೀ ಸಿದ್ದೇಗೌಡ ಮುಸಲ್ಮಾನರ ಹೆಸರಿಗೆ ಜಮೀನು ನೋಂದಣಿ ಮಾಡದಂತೆ ಜನರ ಮುಂದೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಇದುವರೆಗೂ ಮುಸ್ಲಿಂರ ಪರ ಇದ್ದ ಶಾಸಕ ಇದೀಗ ಸಾಬ್ರು ಎಂದು ಉಲ್ಟಾ ಹೊಡೆದಿದ್ದಾರೆ. ಕಾರ್ಯಕ್ರಮದ ಬಳಿಕ ಅಧಿಕಾರಿಗಳಿಗೆ ಬಹಿರಂಗವಾಗಿ ಧಮ್ಮಿ ಹಾಕಿದ್ದಾರೆ. ಬಗರ್ ಹುಕುಂನಲ್ಲಿ ಅರ್ಜಿ ಹಾಕಿರೋ ಮುಸ್ಲಿಂ ಜನಾಂಗದವರಿಗೆ ಖಾತೆ ಮಾಡದಂತೆ ತಾಕೀತು ಮಾಡಿದ್ದಾರೆ. ಸರ್ಕಾರಿ ಜಮೀನು ಸರ್ಕಾರಕ್ಕೆ ಇರಬೇಕು. ಯಾರಾದ್ರು ಅದನ್ನ ಸಾಬ್ರು ಹೆಸ್ರಿಗೆ ಮಾಡಿದ್ರೆ ನೇಣಾಕೋದು ಗ್ಯಾರಂಟಿ ಎಂದು ಎಚ್ಚರಿಕೆ ನೀಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
23/06/2025 03:39 pm