", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/463655-1750915300-manjunath---2025-06-26T105127.232.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯದ 38 ವರ್ಷದ ಗೃಹಣಿ ಪ್ರೀತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಕೆಲವು ದಿನಗಳ ಹಿಂದಷ್ಟೇ ಇನ್‌ಸ್...Read more" } ", "keywords": ""Instagram love affair, Crime news, Live-in partner murder, Bengaluru crime, Love triangle murder case, Woman killed by boyfriend" ", "url": "https://dashboard.publicnext.com/node" }
ಮಂಡ್ಯದ 38 ವರ್ಷದ ಗೃಹಣಿ ಪ್ರೀತಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ. ಕೆಲವು ದಿನಗಳ ಹಿಂದಷ್ಟೇ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಪುನೀತ್ ಎಂಬ ಯುವಕನ ಕೈಯಲ್ಲಿ ಕೊಲೆಯಾಗಿದ್ದಾಳೆ.
ಪ್ರೀತಿ ಮೂಲತಃ ಹಾಸನ ಜಿಲ್ಲೆಯ ಹೊಸಕೊಪ್ಪಲು ಗ್ರಾಮದವಳಾಗಿದ್ದು, ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆ ತಾಲೂಕಿನ ಕರೋಟಿ ಗ್ರಾಮದ ಪುನೀತ್ ಎಂಬಾತನೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ವರದಿಗಳ ಪ್ರಕಾರ, ಇಬ್ಬರೂ ಲಾಡ್ಜ್‌ವೊಂದರಲ್ಲಿ ಭೇಟಿಯಾಗಿ, ನಂತರ ಪುನೀತ್ ಪ್ರೀತಿಯನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಲೈಂಗಿಕ ಸಂಬಂಧದ ಹಿನ್ನೆಲೆ ಇರಬಹುದೆಂದು ಶಂಕೆ ವ್ಯಕ್ತವಾಗಿದೆ.
ಘಟನೆಯ ನಂತರ ಪ್ರೀತಿ ಕಾಣೆಯಾಗಿದ್ದಾಗಿ ಆಕೆಯ ಗಂಡ ಸುಂದರೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ ಪೊಲೀಸರು, ಕರೋಟಿ ಗ್ರಾಮದ ಬಳಿ ಪುನೀತ್‌ನ ಜಮೀನಿನಲ್ಲಿ ಪ್ರೀತಿಯ ಶವ ಪತ್ತೆ ಹಚ್ಚಿದರು. ಪುನೀತ್ ನಿಂದ ವಿಚಾರಣೆ ನಡೆಸಿದಾಗ ಆತನು ಪ್ರೀತಿ Sex ( ಲೈಂಗಿಕ) ಗಾಗಿ ಪೀಡಿಸುತ್ತಿದ್ದರಿಂದ ಆಕೆಯನ್ನು ಹತ್ಯೆ ಮಾಡಿದ್ದಾಗಿ ಪುನೀತ್ ಹೇಳಿದ್ದಾನೆ.
ಭಾನುವಾರದಂದು ಇಬ್ಬರೂ ಮಂಡ್ಯ ಮತ್ತು ಮೈಸೂರು ಪ್ರವಾಸ ಮಾಡಿ ನಂತರ ಕತ್ತರಘಟ್ಟ ಅರಣ್ಯ ಪ್ರದೇಶದಲ್ಲಿ ಜಗಳದಲ್ಲಿ ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಪುನೀತ್ ಪ್ರೀತಿಯ ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರೀತಿಯ ಮೈ ಮೇಲಿದ್ದ ಚಿನ್ನಾಭರಣವನ್ನು ಎತ್ತಿಕೊಂಡು ಶವವನ್ನು ತನ್ನ ಜಮೀನಿನಲ್ಲಿ ಹೂತು ಹಾಕಿದ್ದನೆಂಬುದು ತನಿಖೆಯಿಂದ ಬಹಿರಂಗವಾಗಿದೆ.
PublicNext
26/06/2025 10:52 am