", "articleSection": "News", "image": { "@type": "ImageObject", "url": "https://prod.cdn.publicnext.com/s3fs-public/378325-1751097699-3.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಒಬ್ಬ ಸದಸ್ಯ ತಿನಿಸು ಕಟ್ಟೆ ಮಳಿಗೆಗಳನ್ನು ಅಕ್ರಮವಾಗಿ ಪಡೆದ ಆರೋಪದ ಮೇಲೆ ಇಬ್ಬರು ಸದಸ್ಯರ ...Read more" } ", "keywords": "Belagavi mayoral crisis, council member disqualification, Belagavi City Corporation news, municipal politics, Karnataka local governance. ", "url": "https://dashboard.publicnext.com/node" }
ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಒಬ್ಬ ಸದಸ್ಯ ತಿನಿಸು ಕಟ್ಟೆ ಮಳಿಗೆಗಳನ್ನು ಅಕ್ರಮವಾಗಿ ಪಡೆದ ಆರೋಪದ ಮೇಲೆ ಇಬ್ಬರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ವಾರ್ಡ್ ನಂ.41 ರ ಸದಸ್ಯ ಮೇಯರ್ ಮಂಗೇಶ ಪವಾರ್ ಹಾಗೂ 23 ರ ಸದಸ್ಯ ಜಯಂತ್ ಜಾಧವ್ ಮೇಲೆ ಆರೋಪ ಕೇಳಿ ಬಂದಿತ್ತು. ಇದೀಗ ಅನರ್ಹತೆ ಖಾಯಂ ಮಾಡಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.
ಇಬ್ಬರು ಅಧಿಕಾರ ದುರುಪಯೋಗ ಮಾಡಿಕೊಂಡ ಕುರಿತು ಸಾಮಾಜಿಕ ಹೋರಾಟಗಾರ ಸುಜೀತ್ ಮುಳುಗುಂದ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಮಹಾನಗರ ಪಾಲಿಕೆ ಅಧಿನಿಯಮ 1976 ಸೆಕ್ಷನ್ 26 ರ ಅಡಿಯಲ್ಲಿ ಅದೇಶ ಹೊರಡಿಸಿದ್ದು ಅಲ್ಲದೇ ವಾರ್ಡ್ ನಂಬರ್ 41 ಮತ್ತು 23 ಎರಡೂ ಸದಸ್ಯತ್ವ ಸ್ಥಾನಗಳು ತೆರವಾಗಿವೆ. ಆದರೆ ವಾರ್ಡ್ ನಂಬರ್ 41ರ ಪಾಲಿಕೆ ಸದಸ್ಯ ಮೇಯರ್ ಸ್ಥಾನದಲ್ಲಿದ್ದು, ಅವರಿಗೆ ಈಗ ಸಂಕಷ್ಟ ಎದುರಾಗಿದೆ.
PublicNext
28/06/2025 01:37 pm