", "articleSection": "Infrastructure,Nature,Accident,News,Agriculture", "image": { "@type": "ImageObject", "url": "https://prod.cdn.publicnext.com/s3fs-public/421698-1751270477-Youtube-HD.00_20_18_09.Still2527~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಪಶ್ಚಿಮಘಟ ಹಾಗೂ ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಈಗಾಗಲೆ ಅವಾಂತರ ಸೃಷ್ಠಿಯಾಗಿದೆ. ಬೆಳಗಾವಿಯಲ್ಲಿ ಇರುವ ಬಳ್ಳಾರಿ ನಾ...Read more" } ", "keywords": "Navalgund Shalavadi Nagalingeshwara Jatre, Nagalingeshwara fair Shalavadi, grand festival Navalgund, Shalavadi temple festival, Nagalingeshwara Jatre celebration, Navalgund religious event, Shalavadi fair news, Nagalingeshwara festival Karnataka, Navalgund temple fair, Shalavadi spiritual event", "url": "https://dashboard.publicnext.com/node" } ಬೆಳಗಾವಿ: ಸಾವಿರಾರು ಎಕರೆಗೆ ನುಗ್ಗಿದ ಬಳ್ಳಾರಿ ನಾಲಾ ನೀರು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಾವಿರಾರು ಎಕರೆಗೆ ನುಗ್ಗಿದ ಬಳ್ಳಾರಿ ನಾಲಾ ನೀರು

ಬೆಳಗಾವಿ: ಪಶ್ಚಿಮಘಟ ಹಾಗೂ ಬೆಳಗಾವಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಈಗಾಗಲೆ ಅವಾಂತರ ಸೃಷ್ಠಿಯಾಗಿದೆ. ಬೆಳಗಾವಿಯಲ್ಲಿ ಇರುವ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಸರ್ವನಾಶವಾಗಿದೆ.

ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಬಳ್ಳಾರಿ ನಾಲಾ ಹತ್ತಾರು ಅವಾಂತರಗಳು ಸೃಷ್ಠಿ ಮಾಡುತ್ತೆ. ಆದರೆ ಅದನ್ನು ಹೂಳೆತ್ತುವ ಕೆಲಸ ಮಾತ್ರ ಆಗುತ್ತಿಲ್ಲ. ಇದರ ಪರಿಣಾಮ ಸಾವಿರಾರು ಎಕರೆ ಪ್ರದೇಶದಲ್ಲಿ ನಾಲಾ ನೀರು ನುಗ್ಗುತ್ತಿದೆ. ಬೆಳಗಾವಿ ಯಳ್ಳುರು, ಶಾಹಾಪುರ, ವಡಗಾವಿ ಸೇರಿದಂತೆ ಅನೇಕ ಭಾಗದ ರೈತರಿಗೆ ಈ ಬಳ್ಳಾರಿ ನಾಲಾ ಶಾಪವಾಗಿ ಪರಿಣಮಿಸಿದೆ.

ಈ ವರ್ಷ ಬಳ್ಳಾರಿ ನಾಲೆಯ ನೀರು ಜಮೀನುಗಳಿಗೆ ನುಗ್ಗಿದ ಪರಿಣಾಮ ಗೆಣಸು, ಭತ್ತ, ತರಕಾರಿ ಸೇರಿ ವಿವಿಧ ಬೆಳೆಗಳು ಹಾಳಾಗುವ ಭೀತಿ ಎದುರಾಗಿದೆ. ಈ ಮೊದಲು ಈ ಬಳ್ಳಾರಿ ನಾಲಾ ವರದಾನವಾಗಿತ್ತು. ಈಗ ಶಾಪ ಆಗಿದೆ. ಇದರ ಜೊತೆಗೆ ಬೈಪಾಸ್ ರಸ್ತೆ ನಿರ್ಮಾಣ ಕೂಡ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಜಮೀನು ಜಲಾವೃತವಾಗಿ ಬೆಳೆ ಹಾಳಾದರೆ ನಾವು ಬದುಕುವುದಾದರೂ ಹೇಗೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಬೆಳಗಾವಿ ನಗರದ ಹೊರ ವಲಯದಲ್ಲಿ ಹರಿಯುವ ಬಳ್ಳಾರಿ ನಾಲಾ ಇಲ್ಲಿನ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಆರಂಭದಲ್ಲಿ ಈ ಭಾಗದ ರೈತರಿಗೆ ಇದು ವರದಾನವಾಗಿತ್ತು. ಕಳೆದ ಹತ್ತು ವರ್ಷಗಳಿಂದ ಹೂಳು ತುಂಬಿಕೊಂಡು ಪ್ರತಿ ವರ್ಷ ಮಳೆಗಾಲದಲ್ಲಿ ಅವಾಂತರವನ್ನೆ ಸೃಷ್ಟಿಸುತ್ತಿದೆ.

ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By : Suman K
Kshetra Samachara

Kshetra Samachara

30/06/2025 01:31 pm

Cinque Terre

6.28 K

Cinque Terre

0

ಸಂಬಂಧಿತ ಸುದ್ದಿ