", "articleSection": "Infrastructure,Government", "image": { "@type": "ImageObject", "url": "https://prod.cdn.publicnext.com/s3fs-public/229640-1751273948-baki.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ರಾಜ್ಯದಲ್ಲಿ ಗ್ಯಾರಂಟಿ ಎಫೆಕ್ಟ್ ನಿಂದ ಗುತ್ತಿಗೆದಾರರು ಕಂಗಾಲಾಗಿದ್ದು, 2 ವರ್ಷಗಳಿಂದ ಬಾಕಿ ಹಣ ಪಾವತಿಯಾಗದೇ ಸಂಕಷ್ಟ ಅನುಭವಿಸುವಂತಾ...Read more" } ", "keywords": "Guarantee effect Belagavi, contractor issues, Belagavi infrastructure projects, government guarantee scheme, contractor problems Belagavi, Belagavi news updates.", "url": "https://dashboard.publicnext.com/node" } ಬೆಳಗಾವಿ: ಗ್ಯಾರಂಟಿ ಎಫೆಕ್ಟ್, ಗುತ್ತಿಗೆದಾರರಿಗೆ ಸಂಕಷ್ಟ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಗ್ಯಾರಂಟಿ ಎಫೆಕ್ಟ್, ಗುತ್ತಿಗೆದಾರರಿಗೆ ಸಂಕಷ್ಟ

ಬೆಳಗಾವಿ: ರಾಜ್ಯದಲ್ಲಿ ಗ್ಯಾರಂಟಿ ಎಫೆಕ್ಟ್ ನಿಂದ ಗುತ್ತಿಗೆದಾರರು ಕಂಗಾಲಾಗಿದ್ದು, 2 ವರ್ಷಗಳಿಂದ ಬಾಕಿ ಹಣ ಪಾವತಿಯಾಗದೇ ಸಂಕಷ್ಟ ಅನುಭವಿಸುವಂತಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ 200 ಗುತ್ತಿಗೆದಾರರಿಗೆ 1482 ಕೋಟಿ ರೂಪಾಯಿ ಬಾಕಿ ಹಣ ಹಾಗೂ 23 ಕೋಟಿ ರೂಪಾಯಿ ಭದ್ರತಾ ಠೇವಣಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ನೀರಾವರಿ ನಿಗಮದಲ್ಲಿ ಕೆಲಸ ಮಾಡಿರೋ ಗುತ್ತಿಗೆದಾರರು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿಯೇ ಬಾಕಿ ಹಣದ ಜೊತೆಗೆ ಭದ್ರತಾ ಠೇವಣಿ ಹಣವು ವಾಪಾಸ್ ಬಂದಿಲ್ಲ ಎಂದು ಗುತ್ತಿಗೆದಾರರು ಅಳಲು ತೋಡಿಕೊಂಡಿದ್ದಾರೆ. ನಿಗಮವು ಭದ್ರತಾ ಠೇವಣಿ ಎಂದು ಶೇ 6.5ರಷ್ಟು ಹಣ ಇಟ್ಟುಕೊಂಡಿದೆ. ನಿರ್ವಹಣಾ ಅವಧಿ ಮುಗಿದು ಮೂರ್ನಾಲ್ಕು ವರ್ಷ ಕಳೆದ್ರೂ ಗುತ್ತಿಗೆದಾರರಿಗೆ ಹಣ ಸಿಕ್ಕಿಲ್ಲ.

ನಮ್ಮ ಹಣವನ್ನು ಇಲಾಖೆ ದುರುಪಯೋಗ ಪಡೆಸಿಕೊಂಡಿದೆ. ಈ ಹಣವನ್ನು ಇತರೇ ಗುತ್ತಿಗೆದಾರರ ಬಿಲ್ ಪಾವತಿಗೆ ಬಳಕೆ ಮಾಡಿ ಆರ್ಥಿಕ ಶಿಸ್ತನ್ನು ನೀರಾವರಿ ಇಲಾಖೆ ಉಲ್ಲಂಘನೆ ಮಾಡಿದೆ.

Edited By : Manjunath H D
PublicNext

PublicNext

30/06/2025 02:29 pm

Cinque Terre

8.38 K

Cinque Terre

0

ಸಂಬಂಧಿತ ಸುದ್ದಿ