", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/235762-1751211768-Untitled-design---2025-06-29T194938.580.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vishwanath" }, "editor": { "@type": "Person", "name": "nagaraj.talugeri" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮಂಗಳೂರು: ಸೈಬರ್ ಅಪರಾಧಿಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದ ಆಮಿಷವೊಡ್ಡಿ ನಕಲಿ ಹೂಡಿಕೆ ಮಾಡಿಸುವ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ. ...Read more" } ", "keywords": "Mangaluru, cybercrime, online scams, investment fraud, quick profit schemes, financial fraud, cyber fraud alert, Karnataka police warning, online safety, phishing, cybercrime prevention ", "url": "https://dashboard.publicnext.com/node" } ಮಂಗಳೂರು: ಕಡಿಮೆ ಅವಧಿಯಲ್ಲಿ ಅಧಿಕ ಲಾಭದ ಆಮಿಷವೊಡ್ಡಿ ಹಣ ವಂಚನೆ - ಸೈಬರ್ ವಂಚನೆ ಜಾಲದ ಬಗ್ಗೆ ಎಚ್ಚರ ವಹಿಸಲು ಖಾಕಿ ಸೂಚನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕಡಿಮೆ ಅವಧಿಯಲ್ಲಿ ಅಧಿಕ ಲಾಭದ ಆಮಿಷವೊಡ್ಡಿ ಹಣ ವಂಚನೆ - ಸೈಬರ್ ವಂಚನೆ ಜಾಲದ ಬಗ್ಗೆ ಎಚ್ಚರ ವಹಿಸಲು ಖಾಕಿ ಸೂಚನೆ

ಮಂಗಳೂರು: ಸೈಬರ್ ಅಪರಾಧಿಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದ ಆಮಿಷವೊಡ್ಡಿ ನಕಲಿ ಹೂಡಿಕೆ ಮಾಡಿಸುವ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ. ಬಳಿಕ ಹೂಡಿಕೆ ಮಾಡುವ ಹಣವನ್ನು ದೋಚುವ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

ಮೊದಲಿಗೆ ಇದು ಬಹುತೇಕ ನೈಜವಾಗಿಯೇ ಕಾಣಿಸುತ್ತವೆ. ಆದರೆ ಎಲ್ಲವೂ ವಂಚನೆಗೆ ಮಾಡಿರುವ ಜಾಲಗಳಾಗಿವೆ. ವಂಚಕರು ನಕಲಿ ವೆಬ್‌ಸೈಟ್‌ಗಳು, ವಾಟ್ಸ್ ಆ್ಯಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗಳು, ಸಿನೆಮಾ ತಾರೆಯರು ಮತ್ತು ಹೆಸರಾಂತ ವ್ಯಕ್ತಿಗಳ ನಕಲಿ ಪ್ರಮಾಣಪತ್ರಗಳು, ನಕಲಿ ಆ್ಯಪ್‌ಗಳು, ಸೋಶಿಯಲ್ ಮೀಡಿಯಾ ಜಾಹೀರಾತುಗಳು ಮೂಲಕ ಜನರನ್ನು ಆಕರ್ಷಿಸುತ್ತಾರೆ. ಖಚಿತ ಹೆಚ್ಚುವರಿ ಲಾಭದ ಆಮಿಷ, ತತ್‌ಕ್ಷಣ ಹೂಡಿಕೆಗೆ ಒತ್ತಡ, ಹಣದ ದ್ವಿಗುಣ ಅಥವಾ ತ್ರಿಗುಣಗೊಳಿಸಿ ಕೊಡುವ ಭರವಸೆ ಇತ್ಯಾದಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು.

ವಾಟ್ಸ್‌ಆ್ಯಪ್ ಗ್ರೂಪ್‌ಗಳ ಮೂಲಕ ಕ್ರಿಸ್ಟೋ ಕರೆನ್ಸಿ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಸುರತ್ಕಲ್‌ನ ವ್ಯಕ್ತಿಯೊಬ್ಬರಿಗೆ 1.57 ಕೋ.ರೂ.ವಂಚನೆ. ಷೇರು ಮಾರುಕಟ್ಟೆಯಲ್ಲಿ ಲಾಭದ ಆಮಿಷವೊಡ್ಡಿ, ವಾಟ್ಸ್ಆ್ಯಪ್ ಗ್ರೂಪ್ ಮೂಲಕ ತರಬೇತಿ ಬಳಿಕ 37.49 ಲಕ್ಷ ರೂ. ಹೂಡಿಕೆ ಮಾಡಿಸಿ ವಂಚನೆ. ಇನ್‌ಸ್ಟಾಗ್ರಾಂನಲ್ಲಿ ವರ್ಕ್ ಫ್ರಮ್ ಹೋಮ್ ಜಾಹೀರಾತು ನೆಪದಲ್ಲಿ 27.01 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಸಿ ಪಂಜಿಮೊಗರಿನ ವ್ಯಕ್ತಿಗೆ ಮೋಸ. ಟೆಲಿಗ್ರಾಂ ಮೂಲಕ ಕ್ರಿಸ್ಟೋ ಕರೆನ್ಸಿ ಟ್ರೇಡಿಂಗ್ ಸಲಹೆ ನೀಡಿ 13.57 ಲಕ್ಷ ರೂ. ಹೂಡಿಕೆ ಮಾಡಿಸಿ ಲಾಭದ ಹಣ ನೀಡದೆ ಉರ್ವದ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿದ್ದಾರೆ.

ಆದ್ದರಿಂದ ನೋಂದಾಯಿಸದ ಕಂಪೆನಿಗಳು ಅಥವಾ ಏಜೆಂಟ್‌ಗಳು, ಯುಪಿಐ/ಕ್ರಿಸ್ಟೋ ಪಾವತಿ ಕೇಳುವುದು, ನಕಲಿ ಲಾಭತೋರಿಸುವ ನಕಲಿ ಸ್ಟ್ರೀನ್‌ಶಾಟ್‌ಗಳು ಮೊದಲಾದವುಗಳ ಮೂಲಕ ವಂಚಿಸುತ್ತಾರೆ. ಈ ಬಗ್ಗೆ ಸರಿಯಾಗಿ ಪರಿಶೀಲನೆ ತೋರಿಸುವ ನಕಲಿ ಸ್ಕ್ರೀನ್‌ಶಾಟ್‌ಗಳ ಮೂಲಕ ವಂಚಿಸುತ್ತಾರೆ. ಈ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡುವುದರಿಂದ ಖಾತೆಯಲ್ಲಿರುವ ಹಣವನ್ನು ಕಳೆದುಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

Edited By : Nagaraj Tulugeri
Kshetra Samachara

Kshetra Samachara

29/06/2025 07:39 pm

Cinque Terre

5.61 K

Cinque Terre

0