ಹುಬ್ಬಳ್ಳಿ: ಡಿಜೆ ಹಾಡಿಗೆ ಡ್ಯಾನ್ಸ್ ಮಾಡುತ್ತಿರುವಾಗ, ಅಪರಿಚಿತ ಗುಂಪೊಂದು ಬಂದು ಯುವಕನೊಬ್ಬನಿಗೆ ಚಾಕು ಹಾಕಿದ ಘಟನೆ ಹಳೇ ಹುಬ್ಬಳ್ಳಿ ಸರ್ಕಲ್ ಹತ್ತಿರ ಪವಾರ್ ಹೌಸ್ ಜಿಮ್ ಬಳಿ ನಡೆದಿದೆ.
ಹುಬ್ಬಳ್ಳಿಯ ಪತೇಶಾವಲಿ ದರ್ಗಾದಲ್ಲಿ ಸಂದಲ್ ಡಿಜೆ ಹಚ್ಚಲಾಗಿತ್ತು. ಅಶ್ರಫ್ ಅದೋನಿ ಎಂಬಾತ ಡಿಜೆ ಸೌಂಡ್‌ಗೆ ಡ್ಯಾನ್ಸ್ ಮಾಡುತ್ತಿದ್ದ. ಈ ಸಂದರ್ಭದಲ್ಲಿ, ಅಪರಿಚಿತ ಗುಂಪೊಂದು ಅಶ್ರಫ್ ಅದೋನಿ ಎದೆಗೆ ಚಾಕು ಇರಿದು ಎಸ್ಕೇಪ್ ಆಗಿದೆ. ಪರಿಣಾಮ ಅಶ್ರಫ್‌ನ ಸ್ಥಿತಿ ಈಗ ಗಂಭೀರವಾಗಿದೆ. ಆತನನ್ನು ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ. ಇನ್ನೂ ಈತನಿಗೆ ಚಾಕು ಹಾಕಿದ್ದು ಯಾರು ಎಂಬುದು ಇನ್ನೂ ಮಾಹಿತಿ ಲಭ್ಯವಾಗಬೇಕಿದೆ. ಇನ್ನೂ ಘಟನೆ ತಿಳಿದ ಬಳಿಕ ಕಸಬಾಪೇಟ್ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2025 10:40 pm