ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಲಹಂಕ ವಲಯದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಆಟದ ಮೈದಾನದಲ್ಲಿ ನಿನ್ನೆ ಮತ್ತು ಇಂದು 2 ದಿನಗಳ ಕಾಲ ಏರ್ಪಡಿಸಿದ್ದ “ಬೃಹತ್ ಇ-ಖಾತಾ ಮೇಳ” ಕಾರ್ಯಕ್ರಮದಲ್ಲಿ ಸುಮಾರು 4,300 ಜನರು ಪಾಲ್ಗೊಂಡಿದ್ದರು.
ಬ್ಯಾಟರಾಯಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 7 ವಾರ್ಡ್ ಗಳ ಜೊತೆಗೆ ಯಲಹಂಕ ವಿಧಾನಸಭಾ ಕ್ಷೇತ್ರ ಹಾಗೂ ಇತರೆ ವಲಯಗಳಿಂದಲೂ ಖಾತಾ ಮೇಳಕ್ಕೆ ಆಗಮಿಸಿ ಇ-ಖಾತಾಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಎರಡು ದಿನ ನಡೆದ ಇ-ಖಾತಾ ಮೇಳದಲ್ಲಿ ಒಟ್ಟು 4,300 ಜನರಿಗೆ ಟೋಕನ್ ನೀಲಡಾಗಿದೆ. ಈ ಪೈಕಿ 1,694 ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗಿದ್ದು, 1,259 ಅರ್ಜಿಗಳನ್ನು ಅನುಮೋದಿಸಿ ಸ್ಥಳದಲ್ಲಿಯೇ ಅಂತಿಮ ಇ-ಖಾತಾ ನೀಡಲಾಗಿದೆ.
ಬೃಹತ್ ಇ-ಖಾತಾ ಮೇಳದಲ್ಲಿ ಬಂದಿರುವಂತಹ 1,694 ಅರ್ಜಿಗಳ ಪೈಕಿ 435 ಅರ್ಜಿಗಳು ಬೇರೆ ವಲಯಗಳಿಂದ ಬಂದಿರುವ ಅರ್ಜಿಗಳಾಗಿವೆ.ಸದರಿ ಅರ್ಜಿಗಳನ್ನು ಪರಿಶೀಲಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಂಬಂಧಪಟ್ಟ ಆಯಾ ವಲಗಳಿಗೆ ವರ್ಗಾಯಿಸಲಾಗಿರುತ್ತದೆ.
ಯಲಹಂಕ ವಲಯ ವ್ಯಾಪ್ತಿಯಲ್ಲಿ ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಅಪಾರ್ಟ್ ಮೆಂಟ್‌ಗಳ ಜೊತೆ ಸಮನ್ವಯ ಸಾಧಿಸಿ, ಇದೇ ಮಾದರಿಯಲ್ಲಿ ಇ-ಖಾತಾ ಮೇಳಗಳನ್ನು ಆಯೋಜಿಸಿ ತ್ವರಿತಗತಿಯಲ್ಲಿ ಇ-ಖಾತಾ ಸಿಗುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುವುದು ಎಂದು ಯಲಹಂಲ ವಲಯ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್ ರವರು ತಿಳಿಸಿದರು.
Kshetra Samachara
30/06/2025 10:46 pm