", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/463655-1752233597-manjunath-(24).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಂಡೀಗಢ : ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಶಾಲಾ ಪ್ರಾಂಶುಪಾಲರನ್ನೇ ಇಬ್ಬರು ವಿದ್ಯಾರ್ಥಿಗಳು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕರ್ತಾರ್ ಮ...Read more" } ", "keywords": ""Students murder principal, Guru Purnima murder, Principal advising students, Student principal conflict, School violence incident" ", "url": "https://dashboard.publicnext.com/node" } ಬುದ್ದಿ ಹೇಳಿದ ಪ್ರಾಂಶುಪಾಲರನ್ನ ಗುರುಪೂರ್ಣಿಮೆಯ ದಿನವೇ ಕೊಲೆ ಮಾಡಿದ ವಿದ್ಯಾರ್ಥಿಗಳು!
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬುದ್ದಿ ಹೇಳಿದ ಪ್ರಾಂಶುಪಾಲರನ್ನ ಗುರುಪೂರ್ಣಿಮೆಯ ದಿನವೇ ಕೊಲೆ ಮಾಡಿದ ವಿದ್ಯಾರ್ಥಿಗಳು!

ಚಂಡೀಗಢ : ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಶಾಲಾ ಪ್ರಾಂಶುಪಾಲರನ್ನೇ ಇಬ್ಬರು ವಿದ್ಯಾರ್ಥಿಗಳು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕರ್ತಾರ್ ಮೆಮೋರಿಯಲ್ ಸೀನಿಯರ್ ಸೆಕೆಂಡರಿ ಶಾಲೆಯ ಮುಖ್ಯಸ್ಥ ಜಗಬೀರ್ ಸಿಂಗ್ ಅವರನ್ನು 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದಾರೆ.

ಹೌದು, ಶಿಕ್ಷಕರನ್ನು ಗೌರವಿಸುವ ಗುರುಪೂರ್ಣಿಮೆ ದಿನವೇ ಈ ಭೀಕರ ಘಟನೆ ನಡೆದಿದೆ. ಪ್ರಾಂಶುಪಾಲರು ವಿದ್ಯಾರ್ಥಿಗಳ ಕೂದಲು ಕತ್ತರಿಸಿ, ಶಿಸ್ತುಪಾಲನೆ ಮಾಡಬೇಕು ಎಂದು ಸೂಚನೆ ನೀಡಿದ್ದಕ್ಕೆ ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಇಬ್ಬರು ವಿದ್ಯಾರ್ಥಿಗಳು ಈ ಹಿಂದೆ ಸಹ ಜಗಬೀರ್ ಸಿಂಗ್ ಅವರ ಮಗನನ್ನು ಕೊಲೆ ಮಾಡುವ ಬೆದರಿಕೆ ಹಾಕಿ 10 ಲಕ್ಷ ರೂ. ಗೆ ಬೆಲೆ ಕಟ್ಟಿದ್ದರು. ಈ ಬೆದರಿಕೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, “10 ಲಕ್ಷ ರೂ. ದೊಡ್ಡ ಮೊತ್ತವಲ್ಲ ನಿನ್ ಮಗನಿಗೆ ಅಪಾಯ ಇದೆ” ಎಂಬಂತ ಮಾತುಗಳೂ ಕೇಳಿ ಬಂದಿವೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ವಿದ್ಯಾರ್ಥಿಗಳು ಕೊಲೆ ಮಾಡಿ ಚಾಕು ಎಸೆದು ಓಡಿಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಜಗಬೀರ್ ಸಿಂಗ್‌ರನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ದರೂ, ಅವರು ರಕ್ತಸ್ರಾವದಿಂದಲೇ ಸಾವನ್ನಪ್ಪಿದ್ದಾರೆ. ಪೊಲೀಸರಿಂದ ಚಾಕು ಹಾಗೂ ದೃಶ್ಯಾವಳಿ ವಶಪಡಿಸಿಕೊಂಡು ಇಬ್ಬರು ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

ಈ ಕೃತ್ಯದಿಂದ ಹಿಸಾರ್‌ನ ಬಾಸ್ ಬಾದ್‌ಶಾಪುರ್ ಗ್ರಾಮದಲ್ಲಿ ಆತಂಕ ವಾತಾವರಣ ಉಂಟಾಗಿದೆ. ಶಾಲಾ ಶಿಸ್ತಿನ ನಿಟ್ಟಿನಲ್ಲಿ ಈ ಘಟನೆಯು ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಭದ್ರತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗುತ್ತಿದೆ.

Edited By :
PublicNext

PublicNext

11/07/2025 05:03 pm

Cinque Terre

78.78 K

Cinque Terre

0