", "articleSection": "Crime", "image": { "@type": "ImageObject", "url": "https://prod.cdn.publicnext.com/s3fs-public/52563-1752651873-image-(17).png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗಾಂಧೀನಗರ : ಮಗಳನ್ನು ದೇವಸ್ಥಾನಕ್ಕೆಂದು ಕರೆದುಕೊಂಡು ಹೋಗಿ ತಂದೆಯೇ ಮಗಳನ್ನು ಹರಿಯುವ ನದಿಗೆ ತಳ್ಳಿ ಕೊಲೆ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆ...Read more" } ", "keywords": "father kills daughter, 7-year-old girl murdered, canal incident, gender-based violence, child abuse, domestic violence, father pushes daughter into canal, girl child murder", "url": "https://dashboard.publicnext.com/node" } ಹೆಣ್ಣು ಎನ್ನುವ ತಾತ್ಸಾರ 7 ವರ್ಷದ ಮಗಳನ್ನು ಕಾಲುವೆಗೆ ನೂಕಿ ಕೊಂದ ತಂದೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆಣ್ಣು ಎನ್ನುವ ತಾತ್ಸಾರ 7 ವರ್ಷದ ಮಗಳನ್ನು ಕಾಲುವೆಗೆ ನೂಕಿ ಕೊಂದ ತಂದೆ

ಗಾಂಧೀನಗರ : ಮಗಳನ್ನು ದೇವಸ್ಥಾನಕ್ಕೆಂದು ಕರೆದುಕೊಂಡು ಹೋಗಿ ತಂದೆಯೇ ಮಗಳನ್ನು ಹರಿಯುವ ನದಿಗೆ ತಳ್ಳಿ ಕೊಲೆ ಮಾಡಿರುವ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಭೂಮಿಕಾ ಮೃತ ದುರ್ದೈವಿ. ಖೇಡಾ ನಿವಾಸಿ ವಿಜಯ್‌ ಸೋಲಂಕಿ ತನ್ನ ಮಗಳನ್ನು ಹತ್ಯೆ ಮಾಡಿದ ತಂದೆ. ಪತಿ ವಿರುದ್ಧ ಅಂಜನಾ ನನ್ನ ಮಗಳು ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ ಪತಿ ಗುಜರಾತ್‌ನ ನರ್ಮದಾ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ.

ಸೋಲಂಕಿ ದಂಪತಿ ತಮ್ಮ ಮಗಳ ಜೊತೆ ಸ್ಥಳೀಯ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಸ್ಸಾಗುವಾಗ ಹೆಂಡತಿ ತವರು ಮನೆಗೆ ಹೋಗುವ ಬಯಕೆ ವ್ಯಕ್ತಪಡಿಸಿದ್ದಾಳೆ ಇದಕ್ಕೆ ಪತಿ ನಿರಾಕರಿಸಿ ‘ನನಗೆ ಗಂಡು ಮಗು ಬೇಕಿತ್ತು. ಆದರೆ, ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೀಯಾ’ ಎಂದು ನಿಂದಿಸಿದ್ದ.

ಕೆಲವು ನಿಮಿಷಗಳ ನಂತರ, ರಾತ್ರಿ 8 ಗಂಟೆ ಸುಮಾರಿಗೆ, ಆ ವ್ಯಕ್ತಿ ಕಪದ್ವಾಂಜ್‌ನ ವಾಘಾವತ್ ಸೇತುವೆಯ ಮೇಲೆ ಬೈಕ್ ನಿಲ್ಲಿಸಿ ತನ್ನ ಮಗಳನ್ನು ವೇಗವಾಗಿ ಹರಿಯುವ ನರ್ಮದಾ ಕಾಲುವೆಗೆ ತಳ್ಳಿದ್ದಾನೆ. ಈ ಘಟನೆಯನ್ನು ಯಾರಿಗಾದರೂ ತಿಳಿಸಿದರೆ ವಿಚ್ಛೇದನ ನೀಡುವುದಾಗಿ ಪತ್ನಿಗೆ ಹೆದರಿಸಿದ್ದ. ಇದರಿಂದ ಅಂಜನಾ ತುಂಬಾ ದುಃಖಿತಳಾಗಿದ್ದಳು. ಕೊನೆಗೆ ಆಕೆಯನ್ನು ತವರು ಮನೆಗೆ ಬಿಟ್ಟು ಬಂದಿದ್ದ. ಮಗಳನ್ನು ಕಳೆದುಕೊಂಡ ನೋವನ್ನು ತಾಳಲಾರದೇ ಪತ್ನಿ ಪೊಲೀಸ್‌ ಠಾಣೆಗೆ ದೂರು ನೀಡಿದ ಬಳಿಕ ತನಿಖೆ ಕೈಗೊಂಡಾಗ ಸತ್ಯ ಬಯಲಾಗಿದೆ.

Edited By : Nirmala Aralikatti
PublicNext

PublicNext

16/07/2025 01:14 pm

Cinque Terre

41.37 K

Cinque Terre

10

ಸಂಬಂಧಿತ ಸುದ್ದಿ