ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

WATCH: : ಕಾಡಿನ ಗುಹೆಯಲ್ಲಿ ಮಕ್ಕಳೊಂದಿಗೆ ನೆಮ್ಮದಿಯಾಗಿದ್ದೆ - ರಷ್ಯನ್ ಮಹಿಳೆಯ ಮನದಾಳದ ಮಾತು

ಕಾರವಾರ: ನಾನು ನನ್ನ ಮಕ್ಕಳೊಂದಿಗೆ ದಟ್ಟ ಕಾಡಿನ ಗುಹೆಯಲ್ಲಿ ನೆಮ್ಮದಿಯಾಗಿದ್ದೆ. ಅಲ್ಲಿ ವಾಸಿಸಲು ನಮಗೆ ಯಾವುದೇ ತೊಂದರೆ ಇರಲಿಲ್ಲ. ನಾನು ಅಥವಾ ನನ್ನ ಮಕ್ಕಳು ಎಂದೂ ಹಸಿವಿನಿಂದ ಇರಲಿಲ್ಲ. ಅಲ್ಲಿಯೇ ಅಡುಗೆ ಮಾಡಿಕೊಳ್ಳುತ್ತಿದ್ದೆವು. ಪಕ್ಕದ ನದಿಯಲ್ಲಿ ನನ್ನ ಮಕ್ಕಳು ಈಜುತ್ತಿದ್ದರು. ಜಲಪಾತದಲ್ಲಿ ಆಡುತ್ತಿದ್ದರು..

ಉತ್ತರ ಕನ್ನಡ ಜಿಲ್ಲೆಯ ಕುಮುಟಾ ತಾಲೂಕಿನ ರಾಮತೀರ್ಥ ಬೆಟ್ಟದ ನೈಸರ್ಗಿಕ ಗುಹೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ರಷ್ಯಾ ಮೂಲದ ಮಹಿಳೆ ಮಾಧ್ಯಮದ ಮುಂದೆ ಹೇಳಿದ ಮಾತುಗಳಿವು. ಸ್ಥಳೀಯರು ಕೊಟ್ಟ ಸುಳಿವಿನ ಮೇಲೆ ಪೊಲೀಸರು ಅರಣ್ಯಾಧಿಕಾರಿಗಳು ಸೇರಿ ಮಹಿಳೆ ಹಾಗೂ ಮಕ್ಕಳನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕಳುಹಿಸಿದ್ದಾರೆ. ಎನ್‌ಜಿಒ ಸಂಸ್ಥೆ ಮೂಲಕ ಆಕೆಯನ್ನು ವಾಪಸ್ ರಷ್ಯಾ ದೇಶಕ್ಕೆ ಕಳುಹಿಸಲು ತಯಾರಿ ನಡೆಸಿದ್ದಾರೆ.

ಈ ವೇಳೆ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ 40 ವರ್ಷ ವಯಸ್ಸಿನ ಮೋಹಿ ತನ್ನ 6 ವರ್ಷದ ಪ್ರೇಯಾ ಹಾಗೂ 4 ವರ್ಷದ ಅಮಾ ಎಂಬ ಇಬ್ಬರು ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದೆ. ನನ್ನ ಹಿರಿಯ ಮಗ ಸಾವನ್ನಪ್ಪಿದ್ದರಿಂದ ವೀಸಾ ಪಡೆಯಲು ಸಾಧ್ಯವಾಗಿರಲಿಲ್ಲ. ಭಾರತದ ವೀಸಾ ಅವಧಿ ಮುಗಿದಿತ್ತು. ಅದಕ್ಕಾಗಿ ನಾನು 20 ದೇಶದಲ್ಲಿ ಇದೇ ರೀತಿ ಕಾಡಿನಲ್ಲಿ ವಾಸವಿದ್ದೆ. ಪ್ರಕೃತಿಯ ಜೊತೆಗಿದ್ದರೆ ಅಪಾರವಾದ ಅನುಭವ ಸಿಗುತ್ತದೆ. ಬದುಕಿನಲ್ಲಿ ಚಂದದ ಅನುಭವ ಸಿಗಬೇಕು ಎನ್ನುವ ಕಾರಣಕ್ಕೆ ಪ್ರಕೃತಿಯ ಮಧ್ಯೆ ವಾಸವಾಗಿದ್ದೆ ಎಂದರು.

ಖುಷಿ ಜೀವನ ನಡೆಸುತ್ತಿದ್ದೆವು: ನನ್ನ ಮಕ್ಕಳು ಯಾವತ್ತೂ ಹಸಿವಿನಿಂದ ಬಳಲುತ್ತಿರಲಿಲ್ಲ. ಒಳ್ಳೊಳ್ಳೆ ಆಹಾರವನ್ನು ತಯಾರಿಸಿ ತಿನ್ನುತ್ತಿದ್ದೆವು. ನಾವು ಕಾಡಿನ ಮಧ್ಯೆ ಇದ್ದ ನದಿಯಲ್ಲಿ ಈಜುತ್ತಿದ್ದೆವು. ವಾಟರ್ ಫಾಲ್ಸ್‌ನಲ್ಲಿ ಮಕ್ಕಳು ಚೆನ್ನಾಗಿ ಆಟವಾಡುತ್ತಿದ್ದರು. ಚೆನ್ನಾಗಿ ನಿದ್ದೆ ಕೂಡ ಮಾಡುತ್ತಿದ್ದೆವು. ನಾವು ಮೂರು ಜನ ಪ್ರಕೃತಿಯ ಮಧ್ಯೆ ಖುಷಿ- ಖುಷಿಯಾಗಿ ಜೀವನ ಮಾಡುತ್ತಿದ್ದೆವು. ಹಳ್ಳಿಯ ಪಕ್ಕದಲ್ಲಿಯೇ ಈ ಗುಹೆ ಇತ್ತು. ಗುಹೆ ಅಂದ್ರೆ ತೀರಾ ಸಣ್ಣ ಇಕ್ಕಟ್ಟು ಗುಹೆ ಅಲ್ಲ, ವಾಸಕ್ಕೆ ಯೋಗ್ಯವಾಗಿದ್ದ ಗುಹೆಯಾಗಿತ್ತು ಎಂದು ತಿಳಿಸಿದರು.

ಗುಹೆಯೊಳಗೆ ಹಾವುಗಳ ಹರಿದಾಟ: ಗುಹೆಯೊಳಗೆ ಹಾವುಗಳು ಆಗಾಗ ಹರಿದಾಡುತ್ತಿದ್ದರೂ ಅವುಗಳಿಗೆ ನಾವು ಏನು ತೊಂದರೆ ಕೊಡುತ್ತಿರಲಿಲ್ಲ. ಹೀಗಾಗಿ ಅವುಗಳ ಪಾಡಿಗೆ ಬಂದು ಹೋಗುತ್ತಿದ್ದವು. ನಾನು ಯಾವತ್ತೂ ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿರಲಿಲ್ಲ. ಇಲ್ಲಿಗೆ ಬಂದ ಮೇಲೆ ವೈದ್ಯರ ಬಳಿ ಮಕ್ಕಳನ್ನು ಕರೆದುಕೊಂಡು ಹೋದರು. ಪ್ರಕೃತಿಯಮಧ್ಯೆ ಇದ್ದುದ್ದರಿಂದ ಆರೋಗ್ಯವಾಗಿಯೇ ಇರುತ್ತೇವೆ ಎಂದು ಹೇಳಿದರು.

ಬ್ಯುಸಿನೆಸ್‌ ವೀಸಾದಡಿ ಮೋಹಿ ರಷ್ಯಾದಿಂದ ಗೋವಾಕ್ಕೆ ಬಂದಿದ್ದರು. ಹಿಂದೂ ತತ್ವಶಾಸ್ತ್ರ ಮತ್ತು ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಿಂದ ಆಕರ್ಷಿತರಾದ ಮೋಹಿ ಗೋಕರ್ಣದತ್ತ ವಿಶೇಷವಾಗಿ ಆಕರ್ಷಿತರಾದರು. ಹೀಗಾಗಿ ಗೋವಾದಿಂದ ಗೋಕರ್ಣಕ್ಕೆ ಬಂದು ರಾಮತೀರ್ಥ ಬಳಿಯ ಗುಹೆಯಲ್ಲಿ ತನ್ನ ಮಕ್ಕಳೊಂದಿಗೆ ವಾಸವಿದ್ದರು. ಅಲ್ಲದೇ ಅಲ್ಲಿಯೇ ಚಿಕ್ಕ ರುದ್ರನ ಮೂರ್ತಿ ಇಟ್ಟುಕೊಂಡು ಪ್ರಾರ್ಥನೆ ಮತ್ತು ಧ್ಯಾನದಲ್ಲಿ ದಿನಗಳನ್ನು ಕಳೆಯುತ್ತಿದ್ದರು.

Edited By : Nagaraj Tulugeri
PublicNext

PublicNext

16/07/2025 01:20 pm

Cinque Terre

46.04 K

Cinque Terre

0

ಸಂಬಂಧಿತ ಸುದ್ದಿ