", "articleSection": "Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/387839-1752648798-Untitled-design---2025-07-16T122712.625.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮುಂಬೈ: ಚಲಿಸುತ್ತಿದ್ದ ಬಸ್ಸ್‌ನಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿ, ಬಳಿಕ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿರುವ ಘಟನೆ ಮಹಾರಾಷ್ಟ್ರದ ...Read more" } ", "keywords": "Bus birth, baby thrown out, couple arrested, shocking incident, police action. ", "url": "https://dashboard.publicnext.com/node" }
ಮುಂಬೈ: ಚಲಿಸುತ್ತಿದ್ದ ಬಸ್ಸ್‌ನಲ್ಲಿ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿ, ಬಳಿಕ ಮಗುವನ್ನು ಕಿಟಕಿಯಿಂದ ಹೊರಗೆ ಎಸೆದಿರುವ ಘಟನೆ ಮಹಾರಾಷ್ಟ್ರದ ಪರ್ಭಾನಿಯ ಪತ್ರಿ-ಸೇಲು ರಸ್ತೆಯಲ್ಲಿ ನಡೆದಿದೆ.
ಈ ಅಮಾನವೀಯ ಕೃತ್ಯವೆಸಗಿದ ಮಹಿಳೆಯನ್ನು ಋತಿಕಾ ಧೇರೆ (19) ಎಂದು ಗುರುತಿಸಲಾಗಿದ್ದು, ಆಕೆ ಜೊತೆಗಿದ್ದ ವ್ಯಕ್ತಿ ತನ್ನನ್ನು ಪತಿ ಎಂದು ಹೇಳಿಕೊಂಡಿದ್ದು, ಆತನ ಹೆಸರು ಅಲ್ತಾಫ್ ಶೇಖ್ ಎಂದು ತಿಳಿದುಬಂದಿದೆ.
ಅವರಿಬ್ಬರೂ ಪುಣೆಯಿಂದ ಪರ್ಭಾನಿಗೆ ಖಾಸಗಿ ಟ್ರಾವೆಲ್ಸ್‌ನ ಸ್ಲೀಪರ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಮಂಗಳವಾರ ಬೆಳಿಗ್ಗೆ 6:30ರ ಸುಮಾರಿಗೆ ಮಹಿಳೆಗೆ ಹೆರಿಗೆ ನೋವು ಶುರುವಾಗಿದ್ದು, ಚಲಿಸುತ್ತಿದ್ದ ಬಸ್ಸ್‌ನಲ್ಲಿಯೇ ಗಂಡು ಮಗುವಿಗೆ ಜನ್ಮನೀಡಿದಳು. ಬಳಿಕ ಆ ಇಬ್ಬರು ಪಾಪಿಗಳು ನವಜಾತ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ, ಕಿಟಕಿಯಿಂದ ಹೊರಗೆ ಎಸೆದಿದ್ದಾರೆ.
ಈ ವೇಳೆ ಚಾಲಕ, ಕಿಟಕಿಯಿಂದ ಏನನ್ನೋ ಎಸೆದಿರುವುದನ್ನು ಗಮನಿಸಿ ಪ್ರಶ್ನೆ ಮಾಡಿದಾಗ, ಆಕೆಯ ಪತಿ, ನನ್ನ ಹೆಂಡತಿ ವಾಂತಿ ಮಾಡಿಕೊಂಡಿದ್ದಾಳೆ ಎಂದು ತಿಳಿಸಿದ್ದಾನೆ. ಇದೇ ಸಮಯದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬಸ್ಸ್‌ನಿಂದ ಏನೋ ಹೊರಗೆ ಬಿದ್ದದ್ದನ್ನು ಗಮನಿಸಿದರು. ಬಳಿಕ ಸ್ಥಳಕ್ಕೆ ಹೋಗಿ ನೋಡಿದಾಗ ಗಂಡು ಮಗುವೊಂದು ಪತ್ತೆಯಾಗಿದೆ.
ಕೂಡಲೇ ವ್ಯಕ್ತಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳೀಯ ಪೊಲೀಸರ ತಂಡವೊಂದು ಬಸ್ ಅನ್ನು ತಡೆದರು. ವಾಹನವನ್ನು ಪರಿಶೀಲಿಸಿದ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ಮಹಿಳೆ ಹಾಗೂ ಶೇಖ್‌ನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ, ನಮಗೆ ಮಗುವನ್ನು ಬೆಳೆಸಲು ಸಾಧ್ಯವಾಗುವುದಿಲ್ಲ, ಹೀಗಾಗಿ ಎಸೆದಿದ್ದೇವೆ. ರಸ್ತೆಗೆ ಎಸೆದ ಬಳಿಕ ಅದು ಸಾವನ್ನಪ್ಪಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಋತಿಕಾ ಧೇರೆ ಹಾಗೂ ಶೇಖ್ ಇಬ್ಬರು ಮೂಲತಃ ಪರ್ಭಾನಿಯವರು. ಕಳೆದ ಒಂದೂವರೆ ವರ್ಷದಿಂದ ಪುಣೆಯಲ್ಲಿ ವಾಸಿಸುತ್ತಿದ್ದಾರೆ. ಸದ್ಯ ಅವರಿಬ್ಬರು ದಂಪತಿ ಎಂದು ಹೇಳಿಕೊಂಡಿದ್ದು, ಆದರೆ ಯಾವುದೇ ದಾಖಲೆಗಳಿಲ್ಲ. ಪೊಲೀಸರು ಮಹಿಳೆಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಸಂಬಂಧ ಪರ್ಭಾನಿಯ ಪತ್ರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 94 (3) ಮತ್ತು (5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
PublicNext
16/07/2025 12:23 pm