ನವದೆಹಲಿ: HDFC ಬ್ಯಾಂಕ್ ಸಿಇಒ ಮತ್ತು ಎಂಡಿ ಶಶಿಧರ್ ಜಗದೀಶನ್ ಅವರು ಆರ್ಥಿಕ ವರ್ಷ 2025 (FY25)ರಲ್ಲಿ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಬ್ಯಾಂಕರ್ ಆಗಿದ್ದಾರೆ.
12.08 ಕೋಟಿ ರೂಪಾಯಿ ಸಂಬಳ ಮತ್ತು ಸುಮಾರು 42 ಕೋಟಿ ರೂಪಾಯಿ ಮೌಲ್ಯದ ಉದ್ಯೋಗಿ ಷೇರು ಮಾಲೀಕತ್ವ ಯೋಜನೆ (ESOP)ಗಳನ್ನು ಹೊಂದಿದ್ದಾರೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅವರ ನಂತರ ಆಕ್ಸಿಸ್ ಬ್ಯಾಂಕ್ ಸಿಇಒ ಮತ್ತು ಎಂಡಿ ಅಮಿತಾಭ್ ಚೌಧರಿ 9.11 ಕೋಟಿ ರೂಪಾಯಿ ಸಂಬಳ ಮತ್ತು 30 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ESOP ಗಳನ್ನು ಪಡೆದಿದ್ದಾರೆ. ಇನ್ನು ನಂತರದ ಸ್ಥಾನದಲ್ಲಿ ಕೋಟಕ್ ಮಹೀಂದ್ರಾ ಸಿಇಒ ಮತ್ತು ಎಂಡಿ ಅಶೋಕ್ ವಾಸ್ವಾನಿ ಇದ್ದಾರೆ.
ಅಶೋಕ್ ವಾಸ್ವಾನಿ ಒಟ್ಟು 13 ಕೋಟಿ ರೂ. ಸಂಬಳ ಪಡೆಯುತ್ತಾರೆ. ಅವರ ಸಂಬಳದಲ್ಲಿ ನಿಗದಿತ ಸಂಬಳ, ಕಾರ್ಯಕ್ಷಮತೆ, ಪ್ರೋತ್ಸಾಹ ಧನ, ಭತ್ಯೆಗಳು ಮತ್ತು ಇತರ ಎಲ್ಲಾ ಪ್ರಯೋಜನಗಳು ಸೇರಿವೆ. ಇದರ ಜೊತೆಗೆ, ಅವರಿಗೆ 18,580 ESOP ಗಳನ್ನು ಸಹ ನೀಡಲಾಗುತ್ತದೆ. ಅವುಗಳ ಮೌಲ್ಯ ಪ್ರಸ್ತುತ ಮಾರುಕಟ್ಟೆ ಬೆಲೆಗಳ ಪ್ರಕಾರ 4 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ.
PublicNext
17/07/2025 05:49 pm