", "articleSection": "Business", "image": { "@type": "ImageObject", "url": "https://prod.cdn.publicnext.com/s3fs-public/387839-1753168789-Untitled-design---2025-07-22T125333.588.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದ್ದು, ಆಭರಣ ಖರೀದಿದಾರರಿಗೆ ಆಘಾತ ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಿನ್ನದ ಬೆಲೆ ದಿಢೀರ್ ಏರಿ...Read more" } ", "keywords": "Dollar fall, gold price surge, buyer burden, gold rate increase, currency fluctuation impact. ", "url": "https://dashboard.publicnext.com/node" }
ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದ್ದು, ಆಭರಣ ಖರೀದಿದಾರರಿಗೆ ಆಘಾತ ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲೂ ಚಿನ್ನದ ಬೆಲೆ ದಿಢೀರ್ ಏರಿಕೆಯಾಗಿದೆ. ಇದು ದೇಶೀಯ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ.
ಅಮೆರಿಕದ ಪ್ರತೀಕಾರದ ಸುಂಕಗಳ ಆಗಸ್ಟ್ 1ರ ಗಡುವು ಸಮೀಪಿಸುತ್ತಿರುವಾಗ, ಅಮೆರಿಕವು ತನ್ನ ವ್ಯಾಪಾರ ಪಾಲುದಾರರೊಂದಿಗೆ ಇನ್ನೂ ಒಪ್ಪಂದಗಳನ್ನು ಅಂತಿಮಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯ ಕುಸಿಯುತ್ತಿರುವುದರಿಂದ ಚಿನ್ನದ ಬೆಲೆಗಳು ಏರಿಕೆಯಾಗುತ್ತಿವೆ.
ಬೆಂಗಳೂರಲ್ಲಿ ಚಿನ್ನ- ಬೆಳ್ಳಿ ಬೆಲೆ
ಬೆಂಗಳೂರಲ್ಲಿ ನಿನ್ನೆ ಸೋಮವಾರ ಚಿನ್ನದ ದರಗಳು ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಹಿಂದಿನ ದಿನ ಸ್ಥಿರವಾಗಿದ್ದ ದರಗಳು ಈಗ ಹೆಚ್ಚಳವಾಗಿವೆ. ಪ್ರಸ್ತುತ 22 ಕ್ಯಾರೆಟ್ ಚಿನ್ನದ ದರ ₹100 ಏರಿಕೆಯೊಂದಿಗೆ ಪ್ರತಿ 10 ಗ್ರಾಂಗೆ ₹91,800 ರಷ್ಟಿದೆ. ಇನ್ನು 24 ಕ್ಯಾರೆಟ್ ಅಪರಂಜಿ ಚಿನ್ನದ ದರ ₹110 ಏರಿಕೆಯಾಗಿ 10 ಗ್ರಾಂಗೆ ₹1,00,150 ರಲ್ಲಿ ವಹಿವಾಟು ನಡೆಸುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನೋಡಿದರೆ, ಹಿಂದಿನ ದಿನ ಸ್ಪಾಟ್ ಗೋಲ್ಡ್ ದರ ಪ್ರತಿ ಔನ್ಸ್‌ಗೆ 3350 ಡಾಲರ್‌ನ ಕೆಳಗಿತ್ತು. ಆದರೆ, ಈಗ ಅದು 3400 ಡಾಲರ್ ಮಟ್ಟಕ್ಕೆ ಏರಿದೆ. ಇದೇ ಸಮಯದಲ್ಲಿ ಬೆಳ್ಳಿ ದರ 38.89 ಡಾಲರ್‌ನಲ್ಲಿದೆ.
PublicNext
22/07/2025 12:50 pm