ನವದೆಹಲಿ : ಪ್ರಸ್ತುತ ಯಾವುದೇ ಬೆದರಿಕೆಗಳು ಇಲ್ಲದ ಕಾರಣ ಕಾಂಗ್ರೆಸ್ ಸಂಸದ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ನೀಡಲಾಗಿದ್ದ ವೈ ಪ್ಲಸ್ ಭದ್ರತೆಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಆದರೆ ಸುರ್ಜೇವಾಲಾ ಪರ ವಕೀಲರು ಇದನ್ನು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, 'ನಾಯಕರಿಗೆ ಬೆದರಿಕೆ ಕರೆ ಇವೆ. ಹೀಗಾಗಿ ಭದ್ರತೆ ಕೊಡಬೇಕು' ಎಂದು ಮನವಿ ಮಾಡಿದ್ದಾರೆ. ಸುರ್ಜೇವಾಲಾ ಪಂಜಾಬ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.
PublicNext
23/07/2025 07:55 am