ಬೆಂಗಳೂರು: ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿ ಎಸ್‍ಐಟಿ ರಚಿಸಿದ್ದನ್ನು ನಾನು ಸ್ವಾಗತಿಸುತ್ತೇನೆ. ಈ ಕುರಿತು
ನ್ಯಾಯಯುತ ತನಿಖೆ ಆಗಲಿ, ಏನಾಗಿದೆ ಎಂಬ ವಸ್ತುಸ್ಥಿತಿ ಹೊರಗೆ ಬರಲಿ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇದರ ಹಿಂದೆ ಇರುವವರು ತೀರ್ಮಾನಕ್ಕೆ ಬಂದು ಇಂಥವರೇ ಅಪರಾಧಿ ಎಂದು ತಾವೇ ತೀರ್ಪು ಕೊಡುತ್ತಿದ್ದಾರೆ. ಹಿಂದೂಗಳ ಶ್ರದ್ಧಾಕೇಂದ್ರವಾದ ಧರ್ಮಸ್ಥಳಕ್ಕೆ ಪ್ರತಿನಿತ್ಯ ಸಾವಿರಾರು ಜನ ಭಕ್ತರು ಹೋಗುತ್ತಾರೆ. ಅದಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆಯೇ ಅನಿಸುತ್ತಿದೆ. ಕೇರಳ ಸರಕಾರದ ಪ್ರವೇಶ, ನಗರ ನಕ್ಸಲರು ಇದರ ಹಿಂದೆ ಸಕ್ರಿಯರಾಗಿ ಕೆಲಸ ಮಾಡುತ್ತಿರುವುದನ್ನು ಗಮನಿಸಿದರೆ ಈ ತನಿಖೆ ಸರಿಯಾದ ರೀತಿ ಹೋಗಲು ಅಡಚಣೆ ಆಗುತ್ತದೆ ಎಂದು ನನಗೆ ಅನಿಸುತ್ತದೆ ಎಂದರು.
PublicNext
24/07/2025 07:07 am