ಹೆಸರಾಂತ ಹೊಂಬಾಳೆ ಫಿಲಂಸ್ ಪ್ರಸ್ತುತ ಪಡಿಸಿರುವ, ಕ್ಲೀಮ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣದ ಹಾಗೂ ಖ್ಯಾತ ನಿರ್ದೇಶಕ ಅಶ್ವಿನ್ ಕುಮಾರ್ ಅವರ ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ (3D) ಚಿತ್ರ “ಮಹಾವತಾರ್ ನರಸಿಂಹ” ಈಗಾಗಲೇ ಚಿತ್ರೋದ್ಯಮದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಭಾರತೀಯ ಪೌರಾಣಿಕತೆ ಹಾಗೂ ಆತ್ಮಶಕ್ತಿ ಮೇಲೆ ಆಧಾರಿತ ಈ ಚಿತ್ರ, ತಾಂತ್ರಿಕವಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ನಿರ್ಮಿತಿಯಾಗುತ್ತಿದೆ. ವಿಷುವಲ್ ಎಫೆಕ್ಟ್ಸ್, 3D ತಂತ್ರಜ್ಞಾನ ಮತ್ತು ವಿಶಿಷ್ಟ ಕಥಾ ಹಂದರವನ್ನು ಹೊಂದಿರುವ ಈ ಚಿತ್ರ, ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯವೊಂದನ್ನು ಬರೆಯುವ ನಿರೀಕ್ಷೆಯಿದೆ. ಹಲವಾರು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿರುವ ಈ ಪ್ಯಾನ್ ಇಂಡಿಯಾ ಚಿತ್ರವು ಭಾರತೀಯ ಸಂಸ್ಕೃತಿಯ ಮಹತ್ವವನ್ನು ಜಾಗೃತಗೊಳಿಸುವ ಅಪೂರ್ವ ಪ್ರಯತ್ನವಾಗಿದೆ. ‘ಮಹಾವತಾರ್ ನರಸಿಂಹ’ ಚಿತ್ರ ಕೇವಲ ಮನರಂಜನೆಯಲ್ಲ, ಪರಿಪೂರ್ಣ ಆಧ್ಯಾತ್ಮಿಕ ಅನುಭವವನ್ನು ನೀಡಲಿರುವ ಸಂಕಲ್ಪದಿಂದ ರೂಪುಗೊಳ್ಳುತ್ತಿದೆ. ಚಿತ್ರತಂಡದ ಶ್ರಮ ಹಾಗೂ ದೃಷ್ಟಿಕೋನವು ಈ ಚಿತ್ರವನ್ನು ವಿಶ್ವಮಟ್ಟದ ಕಲಾತ್ಮಕ ಕೃತಿ ಮಾಡಲಿದೆ.
PublicNext
23/07/2025 04:12 pm