ಬೆಂಗಳೂರು : ರಾಜ್ಯ ಸರ್ಕಾರ ವಾಣಿಜ್ಯ ತೆರಿಗೆ ಇಲಾಖೆಯಿಂದ ಬೀದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಡ್ತಿರೋದು ಬಹಳ ಚರ್ಚೆಗೆ ಗ್ರಾಸವಾಗಿದೆ ಇದರಿಂದ ವ್ಯಾಪಾರಿಗಳು ಬಹಳ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇಲ್ಲಿ ಸಿಎಂ ಸೇರಿದಂತೆ ಸಚಿವರುಗಳು ಕೇಂದ್ರ ಸರ್ಕಾರವನ್ನ ದೂರುವ ಕೆಲಸ ಮಾಡ್ತಿದ್ದಾರೆ.
ಆದ್ರೆ ಹಿಂದೆ ಸಿಎಂ ಸಿದ್ದರಾಮಯ್ಯನವರೇ ಬಹಿರಂಗವಾಗಿ ಹೇಳಿದ್ರು ಜಿಎಸ್ಟಿ ಸಂಗ್ರಹದಲ್ಲಿ ಮೊದಲ ಸ್ಥಾನಕ್ಕೆ ಕರ್ನಾಟಕ ಬರಬೇಕು ಎಂದು,ಅದೂ ಅಲ್ಲದೇ ಅಧಿಕಾರಿಗಳಿಗೆ ಟಾರ್ಗೆಟ್ ನೀಡಿದ್ರು, ಅದರಿಂದ ರಾಜ್ಯ ಸರ್ಕಾರದ ಖಜಾನೆ ಖಾಲಿ ಆಗ್ತಿರೋ ಸಂದರ್ಭದಲ್ಲಿ ನೋಟಿಸ್ ಮೂಲಕ ಸರ್ಕಾರ ವಸೂಲಿಗೆ ಇಳಿದಿದೆ ಎಂದು ಆರೋಪಿಸಿದರು.
ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಡ್ತಿರೋದು ಅಕ್ರಮ, ನೋಟಿಸ್ ಕೊಡ್ತಿರೋದನ್ನ ಕೂಡಲೇ ನಿಲ್ಲಿಸಬೇಕು,ಅದೇ ರೀತಿ ನೋಟಿಸ್ ಕೊಟ್ಟಿರೋದನ್ನ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು. ಇನ್ನೂ ಬೀದಿ ವ್ಯಾಪಾರಿಗಳು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ, ಹಾಲು, ತರಕಾರಿ ಸೇರಿದಂತೆ ಕೆಲವುದಕ್ಕೆ ಜಿಎಸ್‌ಟಿ ಇಲ್ಲ, ಕೆಲವು ಜಿಎಸ್‌ಟಿಯಿಂದ ವಿನಾಯಿತಿ ಇದೆ ಆದ್ರೂ ಸರ್ಕಾರದ ಖಜಾನೆ ಖಾಲಿ ಆಗಿರೋದ್ರಿಂದ ನೋಟಿಸ್ ಕೊಡ್ತಿದ್ದಾರೆ. ಇದರಿಂದ ವ್ಯಾಪಾರಿಗಳು ಭಯ ಭೀತರಾಗಿದ್ದಾರೆ. ಕೂಡಲೇ ನೋಟಿಸ್ ಕೋಡೋದನ್ನ ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
PublicNext
23/07/2025 02:50 pm