", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/52563-1753172176-_(1280-x-720-px)-(32).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ChaitanyaKothari" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ನೀನಾಸಂ ಕಿಟ್ಟಿ ನಿರ್ದೇಶಿಸಿ ಹಾಗೂ ನಾಯಕನಾಗಿ ನಟಿಸಿರುವ “ಹಿಕೋರಾ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ಭವ್ಯವಾಗಿ ನ...Read more" } ", "keywords": "Hikora movie songs release, Kannada film industry, Neenasam Kitty, Poornachandra Tejaswi S.V., Ratna Shreedhar, Spandana Prasad, Krishna Poorna", "url": "https://dashboard.publicnext.com/node" } ಚಿತ್ರರಂಗದ ಪ್ರಮುಖರಿಂದ ಬಿಡುಗಡೆಗೊಂಡಿತು “ಹಿಕೋರಾ” ಚಿತ್ರದ ಹಾಡುಗಳು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರರಂಗದ ಪ್ರಮುಖರಿಂದ ಬಿಡುಗಡೆಗೊಂಡಿತು “ಹಿಕೋರಾ” ಚಿತ್ರದ ಹಾಡುಗಳು

ಬೆಂಗಳೂರು : ನೀನಾಸಂ ಕಿಟ್ಟಿ ನಿರ್ದೇಶಿಸಿ ಹಾಗೂ ನಾಯಕನಾಗಿ ನಟಿಸಿರುವ “ಹಿಕೋರಾ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗಷ್ಟೇ ಭವ್ಯವಾಗಿ ನಡೆಯಿತು. ಈ ಚಿತ್ರವನ್ನು ರತ್ನ ಶ್ರೀಧರ್ ನಿರ್ಮಿಸಿದ್ದಾರೆ.

ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ನೀನಾಸಂ ಕಿಟ್ಟಿಯವರೇ ಬರೆದು ನಿರ್ದೇಶನ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕರ ಸಂಘದ ಅಧ್ಯಕ್ಷ ಎನ್.ಆರ್.ಕೆ. ವಿಶ್ವನಾಥ್, ಗೀತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್, ನಿರ್ಮಾಪಕರಾದ ನರಸಿಂಹ, ನಾಗೇಶ್ ಕುಮಾರ್, ನಿರ್ದೇಶಕ ಟಿ.ಶಿ.ವೆಂಕಟೇಶ್, ಗೋಪಾಲ್ ಹಾಗೂ ನಟ ದೀಪಕ್ ಸೇರಿದಂತೆ ಹಲವರು ಭಾಗವಹಿಸಿ ಹಾಡುಗಳನ್ನು ಲೋಕಾರ್ಪಣೆ ಮಾಡಿದರು. ಬಳಿಕ ಅವರು ಚಿತ್ರತಂಡಕ್ಕೆ ಶುಭಕೋರಿದರು.

ನಟ ಹಾಗೂ ನಿರ್ದೇಶಕ ನೀನಾಸಂ ಕಿಟ್ಟಿ ಮಾತನಾಡುತ್ತಾ, “ನಾನು ನೀನಾಸಂನ ವಿದ್ಯಾರ್ಥಿ. ಅಲ್ಲೇ ನಟನೆ ಕಲಿತೆ. ನಿರ್ಮಾಪಕಿ ರತ್ನ ಹಾಗೂ ಅವರ ಪತಿ ಶ್ರೀಧರ್ ನೀನಾಸಂನಲ್ಲಿ ಮೆಸ್ ನಡೆಸುತ್ತಿದ್ದರು. ಅವರ ಕೈತುತ್ತು ತಿಂದು ಬೆಳೆದವನು ನಾನು. ಅವರು ಕೊರೋನಾ ಹಿಂದೆಯೇ ಚಿತ್ರ ನಿರ್ಮಾಣಕ್ಕೆ ಮುಂದಾದರು. ಅನೇಕ ತೊಂದರೆಗಳನ್ನು ಎದುರಿಸಿ, ಇಂದು ಹಾಡುಗಳನ್ನು ಬಿಡುಗಡೆ ಮಾಡುವ ಹಂತಕ್ಕೆ ಬಂದಿದ್ದಾರೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ‘ಹಿಕೋರಾ’ ಒಂದು ಆಂಟಿ ವೈರಸ್ ಚಲನಚಿತ್ರ. ಆದರೆ ಈ ವೈರಸ್ ಏನು ಎನ್ನುವುದನ್ನು ತಿಳಿಯಲು ಚಿತ್ರ ನೋಡಬೇಕು,” ಎಂದು ಹಿಗ್ಗೆ ವಿವರಿಸಿದರು.ಚಿತ್ರದ ಮುಹೂರ್ತಕ್ಕೆ ನಟ ದರ್ಶನ್ ಚಾಲನೆ ನೀಡಿದ್ದರು.

Edited By : Nirmala Aralikatti
PublicNext

PublicNext

22/07/2025 01:46 pm

Cinque Terre

10.08 K

Cinque Terre

0