", "articleSection": "Cinema", "image": { "@type": "ImageObject", "url": "https://prod.cdn.publicnext.com/s3fs-public/52563-1753182325-_(1280-x-720-px)-(33).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "nirmala.aralikatti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಯುವ ನಟ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅವರ ನಟನೆಯ ಸೈಯಾರಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಗೆಲುವು ಕಂಡಿದೆ. ಮೂರು ದಿನಗ...Read more" } ", "keywords": "Saiyaar movie success, Kannada film industry, 100 crore in 3 days, box office hit, trending now, Saiyaar film review, director's success story", "url": "https://dashboard.publicnext.com/node" } 3 ದಿನದಲ್ಲಿ 100 ಕೋಟಿ ಗಳಿಕೆ.. ‘ಸೈಯಾರ’.. ಕ್ರೇಜ್​​ಗೆ ಕಾರಣವೇನು?
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

3 ದಿನದಲ್ಲಿ 100 ಕೋಟಿ ಗಳಿಕೆ.. ‘ಸೈಯಾರ’.. ಕ್ರೇಜ್​​ಗೆ ಕಾರಣವೇನು?

ಯುವ ನಟ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಅವರ ನಟನೆಯ 'ಸೈಯಾರಾ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಗೆಲುವು ಕಂಡಿದೆ. ಮೂರು ದಿನಗಳಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಚಿತ್ರ ಆಶಿಕಿ 2 ಶೈಲಿಯಲ್ಲಿದೆ.

ಸ್ಟಾರ್ ಹೀರೋ ಸಿನಿಮಾ ನಿರ್ಮಾಪಕರೇ ಗಳಿಕೆ ಮಾಡಲು ಹೆಚ್ಚು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ‘ಸೈಯಾರ’ ಸಿನಿಮಾ ಹೊಸಬರ ಚಿತ್ರ. ಈ ಸಿನಿಮಾ ಮೂರು ದಿನಕ್ಕೆ ಕಲೆಕ್ಷನ್ ಮಾಡಿದ್ದು 108 ಕೋಟಿ ರೂಪಾಯಿ. ಯಶ್ ರಾಜ್ ಫಿಲ್ಮ್ಸ್ ಚಿತ್ರವನ್ನು ನಿರ್ಮಾಣ ಮಾಡಿದೆ. ‘ಅಶಿಕಿ 2’ ಖ್ಯಾತಿಯ ಮೋಹಿತ್ ಸೂರಿ ಇದನ್ನು ನಿರ್ದೇಶಿಸಿದ್ದಾರೆ.

ಹೊಸಬರ ಚಿತ್ರ ಎಂದಾಗ ಕ್ರೇಜ್ ಕಡಿಮೆ ಇರುತ್ತದೆ. ಆದರೆ, ಅಹಾನ್​ಗೆ ಅತಿ ದೊಡ್ಡ ಗೆಲುವು ಸಿಕ್ಕಿದೆ. ಲವ್ ಹಾಗೂ ಹಾರ್ಟ್​ಬ್ರೇಕ್​ಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇದು ಹೊಸ ಜನರೇಶನ್​ಗೆ ಹೆಚ್ಚು ಇಷ್ಟ ಆಗುತ್ತಿದೆ. ಸಿನಿಮಾ ನೋಡೋಕೆ ಹೋದವರು ಚಿತ್ರ-ವಿಚಿತ್ರವಾಗಿ ನಡೆದುಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ. ಸಿನಿಮಾ ನೋಡದೇ ಇರುವವರು ‘ಸೈಯಾರ ಸಿನಿಮಾದಲ್ಲಿ ಏನಿದೆ’ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ‘ಸೈಯಾರ’ ಬಗ್ಗೆ ಒಳ್ಳೆಯ ಕ್ರೇಜ್ ಶುರವಾಗಿದೆ. ಅನೇಕರು ಸಿನಿಮಾ ನೋಡಿದ ಬಳಿಕ ಥಿಯೇಟರ್​​ನಲ್ಲಿ ಕಣ್ಣೀರು ಹಾಕಿದ್ದಾರೆ. ಕೆಲವರು ಎದೆ ಒಡೆಯುವಂತೆ ಅತ್ತಿದ್ದಾರೆ. ತೆರೆ ಎದುರು ಡ್ಯಾನ್ಸ್ ಮಾಡಿದ್ದಾರೆ. ಇದೆಲ್ಲ ಕ್ಯೂರಿಯಾಸಿಟಿ ಹೆಚ್ಚಿಸಿದೆ. ಇದು ಕೂಡ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಲು ಕಾರಣ. ಹೊಸ ಮುಖಗಳ ಪರಿಚಯ ಮಾಡುವಾಗ ಹೆಚ್ಚೆಚ್ಚು ಸಂದರ್ಶನಗಳನ್ನು ಮಾಡಲಾಗುತ್ತದೆ. ಬೇರೆ ಬೇರೆ ರಾಜ್ಯಗಳಿಗೆ ಟೂರ್ ಮಾಡಿ ಕಲಾವಿದರ ಬಗ್ಗೆ ಹೇಳಲಾಗುತ್ತದೆ. ಆದರೆ, ಈ ಮೆಥಡ್​ನ ‘ಸೈಯಾರ’ ತಂಡ ಸ್ಕಿಪ್ ಮಾಡಿದೆ. ಹೀಗಾಗಿ, ಹೆಚ್ಚಿನ ವಿಚಾರ ಗುಟ್ಟಾಗಿಯೇ ಇದ್ದಿದ್ದರಿಂದ ಕುತೂಹಲ ಹಾಗೆಯೇ ಉಳಿದುಕೊಂಡಿತ್ತು ಇದು ಜನರನ್ನು ಸಿನಿಮಾ ನೋಡುವಂತೆ ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

Edited By : Nirmala Aralikatti
PublicNext

PublicNext

22/07/2025 04:35 pm

Cinque Terre

17.29 K

Cinque Terre

1