", "articleSection": "Business,Government,International", "image": { "@type": "ImageObject", "url": "https://prod.cdn.publicnext.com/s3fs-public/387839-1753341432-Untitled-design---2025-07-24T125108.500.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ: ಕಳೆದ ಆರು ತಿಂಗಳಲ್ಲಿ ಭಾರತವು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭರ್ಜರಿ ಏರಿಕೆಯನ್ನು ದಾಖಲಿಸಿದೆ. 85 ನೇ ಸ್ಥಾನದಿಂದ 77ನೇ ಸ್ಥ...Read more" } ", "keywords": "Indian passport, Passport Power Index, visa-free access, 59 countries, global mobility, Henley Passport Index, travel freedom, diplomatic relations. ", "url": "https://dashboard.publicnext.com/node" } ಪಾಸ್‌ಪೋರ್ಟ್ ಪವರ್ ಇಂಡೆಕ್ಸ್‌ನಲ್ಲಿ ಭಾರತ ಭರ್ಜರಿ ಸಾಧನೆ : ವೀಸಾ ಇಲ್ಲದೇ 59 ದೇಶಗಳಿಗೆ ಪ್ರವೇಶ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಸ್‌ಪೋರ್ಟ್ ಪವರ್ ಇಂಡೆಕ್ಸ್‌ನಲ್ಲಿ ಭಾರತ ಭರ್ಜರಿ ಸಾಧನೆ : ವೀಸಾ ಇಲ್ಲದೇ 59 ದೇಶಗಳಿಗೆ ಪ್ರವೇಶ

ನವದೆಹಲಿ: ಕಳೆದ ಆರು ತಿಂಗಳಲ್ಲಿ ಭಾರತವು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದಲ್ಲಿ ಭರ್ಜರಿ ಏರಿಕೆಯನ್ನು ದಾಖಲಿಸಿದೆ. 85 ನೇ ಸ್ಥಾನದಿಂದ 77ನೇ ಸ್ಥಾನಕ್ಕೆ ತಲುಪಿದೆ. ಈ ಸೂಚ್ಯಂಕವು ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳನ್ನು, ಅವುಗಳ ಮಾಲೀಕರು ವೀಸಾ ಇಲ್ಲದೆ ಪ್ರವೇಶಿಸಬಹುದಾದ ತಾಣಗಳ ಆಧಾರದ ಮೇಲೆ ಶ್ರೇಣೀಕರಿಸುತ್ತದೆ.

ಇತ್ತೀಚಿನ ನವೀಕರಣದ ಪ್ರಕಾರ, ಭಾರತವು ವೀಸಾ ಮುಕ್ತ ಪ್ರವೇಶ ನೀಡುವ ದೇಶಗಳ ಪಟ್ಟಿಗೆ ಕೇವಲ ಎರಡು ಹೊಸ ತಾಣಗಳನ್ನು ಸೇರಿಸಿಕೊಂಡರೂ, ಒಟ್ಟು 59 ದೇಶಗಳ ವರೆಗೆ ಈ ಸಂಖ್ಯೆಯನ್ನು ಏರಿಸಿ, ಶ್ರೇಯಾಂಕದಲ್ಲಿ ಅತ್ಯಂತ ದೊಡ್ಡ ಸುಧಾರಣೆಯನ್ನು ದಾಖಲಿಸಿದೆ.

ಈ ಬೆಳವಣಿಗೆ ವಿಶಾಲ ಪ್ರವೃತ್ತಿಯ ಭಾಗವಾಗಿದ್ದು, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ ನಂತಹ ಸಾಂಪ್ರದಾಯಿಕವಾಗಿ ಪ್ರಬಲ ರಾಷ್ಟ್ರಗಳು ಶ್ರೇಯಾಂಕದಲ್ಲಿ ಕ್ರಮೇಣ ಕುಸಿತವನ್ನು ಕಾಣುತ್ತಿವೆ. ಆದರೆ ಭಾರತ ಮತ್ತು ಸೌದಿ ಅರೇಬಿಯಾದಂತಹ ದೇಶಗಳು ಸ್ಥಿರವಾಗಿ ಏರುತ್ತಿವೆ.

ಉದಾಹರಣೆಗೆ, ಸೌದಿ ಅರೇಬಿಯಾದು ಈ ವರ್ಷದ ಆರಂಭದಲ್ಲಿ ತನ್ನ ವೀಸಾ ಮುಕ್ತ ಪಟ್ಟಿಗೆ ನಾಲ್ಕು ಹೊಸ ತಾಣಗಳನ್ನು ಸೇರಿಸಿಕೊಂಡಿದ್ದು, ಇದೀಗ ಒಟ್ಟು 91 ದೇಶಗಳಿಗೆ ಪ್ರವೇಶ ಹೊಂದಿದೆ.

ಸಿಂಗಾಪುರವು 227 ತಾಣಗಳಲ್ಲಿ 193 ಗೆ ವೀಸಾ ಮುಕ್ತ ಪ್ರವೇಶವನ್ನು ನೀಡುವ ಮೂಲಕ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಅಫ್ಘಾನಿಸ್ತಾನ ಮಾತ್ರ 25 ತಾಣಗಳಿಗೆ ಪ್ರವೇಶ ಹೊಂದಿರುವ ಮೂಲಕ ಪಟ್ಟಿ ಕೊನೆಯಲ್ಲಿದೆ.

ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್ ತಲಾ ಒಂದು ಸ್ಥಾನ ಕುಸಿದಿದ್ದು, ಇದೀಗ ಯುಕೆ 6ನೇ ಮತ್ತು ಯುಎಸ್ 10ನೇ ಸ್ಥಾನದಲ್ಲಿದೆ. ಹೆನ್ಲಿ & ಪಾರ್ಟ್‌ನರ್ಸ್ ಸಿಇಒ ಡಾ. ಜುರ್ಗ್ ಸ್ಟೆಫೆನ್ ಹೇಳುವಂತೆ, ಯುಎಸ್ ಮೊದಲ ಬಾರಿಗೆ ಟಾಪ್ 10ರ ಹೊರಗಡೆ ಹೋಗುವ ಅಪಾಯದಲ್ಲಿದೆ.

"ನಿಮ್ಮ ಪಾಸ್‌ಪೋರ್ಟ್ ಈಗ ಕೇವಲ ಪ್ರಯಾಣ ದಾಖಲೆ ಅಲ್ಲ. ಇದು ನಿಮ್ಮ ದೇಶದ ರಾಜತಾಂತ್ರಿಕ ಶಕ್ತಿ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಪ್ರತಿಬಿಂಬ," ಎಂದು ಡಾ. ಸ್ಟೆಫೆನ್ ಹೇಳಿದ್ದಾರೆ.

ಸಿಂಗಾಪುರದ ನಂತರ, ಜಪಾನ್ ಮತ್ತು ದಕ್ಷಿಣ ಕೊರಿಯಾ 190 ತಾಣಗಳಿಗೆ ವೀಸಾ ಮುಕ್ತ ಪ್ರವೇಶ ನೀಡುವ ಮೂಲಕ ಎರಡನೇ ಸ್ಥಾನವನ್ನು ಹಂಚಿಕೊಂಡಿವೆ. ಮೂರನೇ ಸ್ಥಾನವನ್ನು ಡೆನ್ಮಾರ್ಕ್, ಫಿನ್‌ಲ್ಯಾಂಡ್, ಫ್ರಾನ್ಸ್, ಜರ್ಮನಿ, ಐರ್ಲೆಂಡ್, ಇಟಲಿ ಮತ್ತು ಸ್ಪೇನ್‌ ಸೇರಿ ಏಳು ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ಹಂಚಿಕೊಂಡಿವೆ.

Edited By : Abhishek Kamoji
PublicNext

PublicNext

24/07/2025 12:47 pm

Cinque Terre

30.62 K

Cinque Terre

1

ಸಂಬಂಧಿತ ಸುದ್ದಿ