ಅಮುರ್ ಪ್ರದೇಶ: ನಾಪತ್ತೆಯಾಗಿತ್ತು ಎನ್ನಲಾದ ರಷ್ಯಾ ಪ್ಯಾಸೆಂಜರ್ ವಿಮಾನ An-24 ಇದೀಗ ಪತನಗೊಂಡಿರುವುದು ದೃಢಪಟ್ಟಿದೆ.
ಚೀನಾದ ಗಡಿಗೆ ಸಮೀಪ ಟಿಂಡಾ ಪಟ್ಟಣದ ಬಳಿ ಈ ದುರಂತ ಸಂಭವಿಸಿದ್ದು, ವಿಮಾನದಲ್ಲಿದ್ದ 43 ಪ್ರಯಾಣಿಕರು ಸೇರಿದಂತೆ ಎಲ್ಲರೂ ಸಾವಿಗೀಡಾಗಿದ್ದಾರೆ ಎಂಬುದಾಗಿ ರಾಯಿಟರ್ಸ್ ವರದಿ ಮಾಡಿದೆ. ಮೃತರಲ್ಲಿ ಐದು ಮಕ್ಕಳು ಮತ್ತು ಆರು ಸಿಬ್ಬಂದಿ ಇದ್ದರು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಹೇಳಿದ್ದಾರೆ.
ವಿಮಾನ ಹಾರಾಟದ ನಡುವೆ, ವಾಯು ಸಂಚಾರ ನಿಯಂತ್ರಣ ಕೇಂದ್ರದ ಜೊತೆ ಸಂಪರ್ಕ ಕಡಿದು ಹೋಗಿತ್ತು. ಕೆಲವು ನಿಮಿಷಗಳ ಬಳಿಕ, ರಕ್ಷಣಾ ಸಿಬ್ಬಂದಿ ಬೆಂಕಿಯ ಅವಶೇಷಗಳನ್ನು ಪತ್ತೆಹಚ್ಚಿದ್ದಾರೆ. ವಿಮಾನ ಪತನದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪತನವಾದ An-24 ಪ್ರಯಾಣಿಕ ವಿಮಾನವನ್ನು ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸುತ್ತಿತ್ತು.
ಟಿಂಡಾ ವಿಮಾನ ನಿಲ್ದಾಣಕ್ಕೆ ಆರಂಭಿಕ ಲ್ಯಾಂಡಿಂಗ್ ವಿಫಲವಾದ ನಂತರ ಎರಡನೇ ಲ್ಯಾಂಡಿಂಗ್‌ಗೆ ಪ್ರಯತ್ನಿಸುವಾಗ ವಿಮಾನ ರಾಡಾರ್‌ನಿಂದ ಕಣ್ಮರೆಯಾಯಿತು ಎಂದು ಸ್ಥಳೀಯ ತುರ್ತು ಸಚಿವಾಲಯ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಆರು ಸಿಬ್ಬಂದಿ ಮತ್ತು ಐದು ಮಕ್ಕಳು ಸೇರಿದಂತೆ 43 ಪ್ರಯಾಣಿಕರು ವಿಮಾನದಲ್ಲಿದ್ದರು ಎಂದು ರಷ್ಯಾದ ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಈ ಮೊದಲು ಹೇಳಿಕೆ ನೀಡಿದ್ದರು.
PublicNext
24/07/2025 02:45 pm