", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/463655-1753428588-manjunath-(50).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಾರ್ಫೋಕ್: ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಭಾರತದ (India) ನಡುವಿನ ಸಮಗ್ರ ವ್ಯಾಪಾರ ಒಪ್ಪಂದ (FTA) ಅಂತಿಮಗೊಳಿಸುವ ಉದ್ದೇಶದಿಂದ ಲಂಡನ್ ಪ...Read more" } ", "keywords": "Narendra Modi gift to King Charles, Modi tree gift, Ek Ped Maa Ke Naam campaign, Modi UK visit, King Charles special gift, Modi environmental gift, tree gift to King Charles, Modi meets King Charles, India UK relations, symbolic tree gift, Ek Ped Maa Ke Naam, Modi green initiative, Modi London visit, King Charles Modi meeting, tree planting campaign India ", "url": "https://dashboard.publicnext.com/node" }
ನಾರ್ಫೋಕ್: ಯುನೈಟೆಡ್ ಕಿಂಗ್‌ಡಮ್ (UK) ಮತ್ತು ಭಾರತದ (India) ನಡುವಿನ ಸಮಗ್ರ ವ್ಯಾಪಾರ ಒಪ್ಪಂದ (FTA) ಅಂತಿಮಗೊಳಿಸುವ ಉದ್ದೇಶದಿಂದ ಲಂಡನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ ನಾರ್ಫೋಕ್‌ನ ಸ್ಯಾಂಡ್ರಿಂಗ್‌ಹ್ಯಾಮ್‌ನಲ್ಲಿ ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ಮೋದಿ ಅವರು ಕಿಂಗ್ ಚಾರ್ಲ್ಸ್ ಅವರಿಗೆ ವಿಶಿಷ್ಟವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ತಾಯಿಯ ಹೆಸರಲ್ಲಿ ಹುರಿದುಂಬಿಸಿರುವ "ಏಕ್ ಪೆಡ್ ಮಾ ಕೆ ನಾಮ್" ಅಭಿಯಾನದಿಂದ ಪ್ರೇರಿತವಾಗಿ ಒಂದು ಮರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಅರ್ಥಪೂರ್ಣ ಉಡುಗೊರೆಗೆ ಕಿಂಗ್ ಚಾರ್ಲ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಕಿಂಗ್ ಚಾರ್ಲ್ಸ್ ಅವರು ಭಾರತ-ಯುಕೆ ದ್ವಿಪಕ್ಷೀಯ ಸಂಬಂಧಗಳ ಪ್ರಗತಿ, ಪರಿಸರ, ಆಯುರ್ವೇದ, ಯೋಗ ಮತ್ತು ಶ್ರೇಷ್ಠ ಜೀವನಶೈಲಿಗೆ ಉತ್ತೇಜನ ನೀಡುವ ಚಟುವಟಿಕೆಗಳ ಕುರಿತು ಚರ್ಚಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಈ ಭೇಟಿಯ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ರಾಜಮನೆತನವು ಈ ಭೇಟಿಯ ಛಾಯಾಚಿತ್ರಗಳನ್ನು ಸಹ ಪ್ರಕಟಿಸಿದೆ. ರಾಜಮನೆತನದ ಪ್ರಕಾರ, ಈ ಮರ ಉಡುಗೊರೆ ಪರಿಸರ ಸಂರಕ್ಷಣೆಗೆ ಪ್ರಧಾನಿ ಮೋದಿ ಅವರು ನೀಡಿದ ಒತ್ತಿನ ಉಲ್ಲೇಖವಾಗಿದೆ.
PublicNext
25/07/2025 01:01 pm