", "articleSection": "International", "image": { "@type": "ImageObject", "url": "https://prod.cdn.publicnext.com/s3fs-public/463655-1753322749-manjunath-(30).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "manjunath.lagoti" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ (ಯುಕೆ) ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಎರಡು ದೇಶಗಳು ಲಂಡನ್‌ನಲ್ಲಿ ...Read more" } ", "keywords": "India UK Free Trade Agreement, UK FTA, bilateral trade, economic partnership, trade deal, Narendra Modi UK visit, India UK trade pact, free trade agreement benefits, UK India investment, trade cooperation, economic cooperation, India UK relations, trade agreement signing, London meeting, UK Prime Minister Keir Starmer, Piyush Goyal, Jonathan Reynolds, bilateral trade benefits, tariff elimination, trade growth, economic ties, India UK trade partnership. ", "url": "https://dashboard.publicnext.com/node" } ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಲಂಡನ್‌ನಲ್ಲಿ ಐತಿಹಾಸಿಕ ಸಹಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ–ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಲಂಡನ್‌ನಲ್ಲಿ ಐತಿಹಾಸಿಕ ಸಹಿ

ನವದೆಹಲಿ: ಭಾರತ ಮತ್ತು ಯುನೈಟೆಡ್ ಕಿಂಗ್ಡಮ್ (ಯುಕೆ) ನಡುವಿನ ಬಹುನಿರೀಕ್ಷಿತ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಇಂದು ಎರಡು ದೇಶಗಳು ಲಂಡನ್‌ನಲ್ಲಿ ಸಹಿ ಹಾಕಲಿವೆ. ಈ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಸಮ್ಮುಖದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮತ್ತು ಬ್ರಿಟನ್‌ನ ವ್ಯಾಪಾರ ಸಚಿವ ಜೊನಾಥನ್ ರೆನಾಲ್ಡ್ಸ್ ಸಹಿ ಹಾಕಲಿದ್ದಾರೆ.

ಒಪ್ಪಂದಕ್ಕೆ ಸಹಿ ಬಳಿಕ, ಇದಕ್ಕೆ ಬ್ರಿಟಿಷ್ ಸಂಸತ್ತಿನ ಅನುಮೋದನೆ ಅಗತ್ಯವಾಗಲಿದೆ. ಒಪ್ಪಂದದ ಜಾರಿಗೆ ಚರ್ಮ, ಪಾದರಕ್ಷೆಗಳು, ಬಟ್ಟೆ ಮುಂತಾದ ಭಾರತೀಯ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ರಫ್ತು ಮಾಡಬಹುದಾಗುತ್ತದೆ. ಬ್ರಿಟನ್‌ನಿಂದ ವಿಸ್ಕಿ ಮತ್ತು ಕಾರುಗಳ ಆಮದು ಸುಂಕವೂ ಕಡಿಮೆಯಾಗಲಿದೆ.

2030ರ ವೇಳೆಗೆ ಈ ಒಪ್ಪಂದದಿಂದ ಭಾರತ–ಬ್ರಿಟನ್ ನಡುವಿನ ವ್ಯಾಪಾರವನ್ನು 120 ಶತಕೋಟಿ ಡಾಲರ್‌ಗಳಿಗೆ ವಿಸ್ತರಿಸುವ ಗುರಿ ಇದೆ. ಒಪ್ಪಂದದಡಿ ಭಾರತದ ಶೇಕಡಾ 99ರಷ್ಟು ರಫ್ತುಗಳು ಯುಕೆ ಮಾರುಕಟ್ಟೆಯಲ್ಲಿ ಶೂನ್ಯ ಸುಂಕದ ಲಾಭ ಪಡೆಯಲಿವೆ.

ಬ್ರಿಟಿಷ್ ವಿಸ್ಕಿ, ಜಿನ್, ಆಟೋಮೊಟಿವ್, ಕಾಸ್ಮೆಟಿಕ್ಸ್, ಏರೋಸ್ಪೇಸ್, ವೈದ್ಯಕೀಯ ಉಪಕರಣಗಳು, ಸಾಲ್ಮನ್ ಮೀನು, ವಿದ್ಯುತ್‌ ಉಪಕರಣಗಳು, ಸಾಫ್ಟ್ ಡ್ರಿಂಕ್ಸ್, ಚಾಕೊಲೇಟ್, ಬಿಸ್ಕೆಟ್ ಮುಂತಾದ ಉತ್ಪನ್ನಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗುವುದು.

ಭಾರತದಿಂದ ಜವಳಿ, ಸಮುದ್ರ ಉತ್ಪನ್ನ, ಚರ್ಮ, ಪಾದರಕ್ಷೆ, ಆಟಿಕೆ, ಕ್ರೀಡಾ ಸಾಮಗ್ರಿ, ರತ್ನಾಭರಣ, ಇಂಜಿನಿಯರಿಂಗ್ ಸರಕು, ಆಟೋ ಭಾಗಗಳು, ಎಂಜಿನ್‌ಗಳು, ಸಾವಯವ ರಾಸಾಯನಿಕಗಳು ಮುಂತಾದ ವಲಯಗಳಲ್ಲಿ ರಫ್ತುಗೆ ಹೊಸ ಅವಕಾಶ ಸಿಗಲಿದೆ. ಜೊತೆಗೆ ಯೋಗ ಗುರುಗಳು, ಶೆಫ್ಫುಗಳು, ಸಂಗೀತಗಾರರಂತಹ ಸ್ವತಂತ್ರ ವೃತ್ತಿಪರರಿಗೂ ಈ ಒಪ್ಪಂದದಿಂದ ಲಾಭವಾಗಲಿದೆ.

Edited By :
PublicNext

PublicNext

24/07/2025 07:36 am

Cinque Terre

35.23 K

Cinque Terre

0

ಸಂಬಂಧಿತ ಸುದ್ದಿ