", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1753526112-WhatsApp-Image-2025-07-26-at-4.05.05-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು : ಮಹದಾಯಿ ವಿಚಾರದಲ್ಲಿ ನಮ್ಮ ಸಂಸದರು ನ್ಯಾಯ ಕೊಡಿಸಲು ಹೋರಾಟ ಮಾಡ್ತಿಲ್ಲ ಎಂದು ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಆರೋಪಿಸಿ...Read more" } ", "keywords": "Bengaluru DK Suresh statement, Prahlad Joshi criticism, Union Minister Prahlad Joshi, BJP Karnataka, Congress party, political controversy, Prahlad Joshi performance, DK Suresh Congress ", "url": "https://dashboard.publicnext.com/node" }
ಬೆಂಗಳೂರು : ಮಹದಾಯಿ ವಿಚಾರದಲ್ಲಿ ನಮ್ಮ ಸಂಸದರು ನ್ಯಾಯ ಕೊಡಿಸಲು ಹೋರಾಟ ಮಾಡ್ತಿಲ್ಲ ಎಂದು ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೂರು ಬಾರಿ ಅಧಿಕಾರಕ್ಕೆ ಬರಲು ಕರ್ನಾಟಕದ ಕೊಡುಗೆ ದೊಡ್ಡದು. ಆದ್ರೆ ನಮ್ಮ ಸಂಸದರು ನ್ಯಾಯ ಕೊಡಿಸಲು ಹೋರಾಟ ಮಾಡ್ತಿಲ್ಲ, ಕೇಂದ್ರ ಸರ್ಕಾರ ಗೋವಾ ಕರ್ನಾಟಕ ಇಬ್ಬರನ್ನೂ ಕರೆದು ಸರಿಪಡಿಸಲಿ. ಅದಕ್ಕೆ ನಮ್ಮ ಕೇಂದ್ರ ಮಂತ್ರಿಗಳು ಒತ್ತಾಯ ಮಾಡಲಿ ಎಂದರು.
ಪ್ರಹ್ಲಾದ್ ಜೋಷಿಯವರು ಕಳೆದ ೧೦ ವರ್ಷಗಳಿಂದ ಮಂತ್ರಿಯಾಗಿದ್ದಾರೆ. ಅವರೇ ಅವರ ಕ್ಷೇತ್ರಕ್ಕೆ ಏನೂ ಮಾಡಲಿಲ್ಲ ಅಂದ್ರೆ ಅವರನ್ನು ಯಾರು ನಂಬ್ತಾರೆ? ಅವರು ಪ್ರಧಾನಿಗೆ ಬಹಳ ಹತ್ತಿರದವರು. ಅವರು ಮನಸ್ಸು ಮಾಡಿದೇ ಮಹದಾಯಿ ಯೋಜನೆ ದೊಡ್ಡದಲ್ಲ. ಆದರೆ ಪ್ರಹ್ಲಾದ ಜೋಷಿಯವರಿಗೆ ಯೋಜನೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಗೋವಾ ನಮ್ಮ ನೆರೆ ರಾಜ್ಯ. ಎರಡೂ ರಾಜ್ಯಗಳು ಅನ್ಯೋನ್ಯವಾಗಿ ಇವೆ. ಆದರೆ ಬಹಳಷ್ಟು ವರ್ಷಗಳಿಂದ ಇಲ್ಲಸಲ್ಲದ ಕ್ಯಾತೆ ತೆಗೆದುಕೊಂಡು ತೊಂದರೆ ಕೊಡ್ತಿದ್ದಾರೆ. ಸುಪ್ರೀಮ್ ಕೋರ್ಟ್ ಸ್ಪಷ್ಟ ತೀರ್ಪು ಕೊಟ್ಟ ಮೇಲೂ ನೀರಾವರಿ ಯೋಜನೆ ಆಗುತ್ತಿಲ್ಲ. ಗೋವಾ
ಬಿಜೆಪಿಯವರು ಕೇಂದ್ರ ಸರ್ಕಾರವನ್ನು ಬಳಸಿಕೊಂಡು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವುದು ಎದ್ದು ಕಾಣುತ್ತದೆ. ಕೇಂದ್ರಕ್ಕೆ ನಾನು ಒತ್ತಾಯ ಮಾಡುವುದೇನಂದರೆ ಆದಷ್ಟು ಬೇಗ ಕುಡಿಯುವ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸಲಿ ಎಂದು ಆಗ್ರಹಿಸಿದರು.
PublicNext
26/07/2025 04:05 pm