ಸ್ಕಾಟ್ಲೆಂಡ್: ಯುನೈಟೆಡ್ ಸ್ಟೇಟ್ಸ್ ಯುರೋಪಿಯನ್ ಒಕ್ಕೂಟ (EU)ನೊಂದಿಗೆ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಘೋಷಿಸಿದ್ದಾರೆ.
ಈ ಒಪ್ಪಂದವು ಅಮೆರಿಕಕ್ಕೆ ಪ್ರವೇಶಿಸುವ EU ಸರಕುಗಳ ಮೇಲೆ 15% ಸುಂಕ ಮತ್ತು US ಇಂಧನ ಮತ್ತು ಮಿಲಿಟರಿ ಉಪಕರಣಗಳ ಗಮನಾರ್ಹ EU ಖರೀದಿಗಳನ್ನು ಒಳಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಪಶ್ಚಿಮ ಸ್ಕಾಟ್ಲೆಂಡ್‌ನಲ್ಲಿರುವ ಟ್ರಂಪ್ ಅವರ ಐಷಾರಾಮಿ ಗಾಲ್ಫ್ ಕೋರ್ಸ್‌ನಲ್ಲಿ ಒಂದು ಗಂಟೆಯ ಸಭೆಯ ನಂತರ ಒಪ್ಪಂದವನ್ನು ಘೋಷಿಸಿದರು.
PublicNext
28/07/2025 01:30 pm