", "articleSection": "Law and Order,Human Stories,Government", "image": { "@type": "ImageObject", "url": "https://prod.cdn.publicnext.com/s3fs-public/387839-1753772585-Untitled-design---2025-07-29T123706.274.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಛತ್ತೀಸ್‌ಗಢ: ಪೋಕ್ಸೋ ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಗಳ ಅಡಿಯಲ್ಲಿ ಆರೋಪಿಯಾಗಿದ್ದ ಯುವಕನಿಗೆ ಛತ್ತೀಸ್‌ಗಢ ಹೈಕೋರ್ಟ್ ನಿರ್ದೋಷ ತ...Read more" } ", "keywords": "POCSO case, High Court judgment, "I love you" statement, legal implications, Karnataka High Court, child protection laws, bail conditions, acquittal, legal controversy ", "url": "https://dashboard.publicnext.com/node" }
ಛತ್ತೀಸ್‌ಗಢ: ಪೋಕ್ಸೋ ಹಾಗೂ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಗಳ ಅಡಿಯಲ್ಲಿ ಆರೋಪಿಯಾಗಿದ್ದ ಯುವಕನಿಗೆ ಛತ್ತೀಸ್‌ಗಢ ಹೈಕೋರ್ಟ್ ನಿರ್ದೋಷ ತೀರ್ಪು ನೀಡಿದೆ.
‘ಐ ಲವ್ ಯೂ’ ಎನ್ನುವುದು ಸ್ಪಷ್ಟ ಲೈಂಗಿಕ ಉದ್ದೇಶವಿಲ್ಲದೆ ಹೇಳಿದರೆ, ಅದನ್ನು ಲೈಂಗಿಕ ಕಿರುಕುಳವೆಂದು ಪರಿಗಣಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಸಂಜಯ್ ಎಸ್. ಅಗರ್ವಾಲ್ ಅವರನ್ನೊಳಗೊಂಡ ಏಕಸದಸ್ಯ ಪೀಠವು ಕೆಳ ನ್ಯಾಯಾಲಯದ ನಿರ್ದೋಷ ತೀರ್ಪನ್ನು ಎತ್ತಿಹಿಡಿದಿದೆ.
ಪ್ರಾಸಿಕ್ಯೂಷನ್ ಕಡೆಯಿಂದ ಆರೋಪಿಯ ಉದ್ದೇಶ ಅಥವಾ ಬಾಲಕಿ ವಯಸ್ಸು ಸಾಬೀತುಪಡಿಸಲು ತಕ್ಕಷ್ಟು ಪುರಾವೆಗಳನ್ನು ಒದಗಿಸಲಾಗಿಲ್ಲ ಎಂಬುದನ್ನು ಪೀಠ ಗಮನಿಸಿ, ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಈ ಘಟನೆ ಧಮತರಿ ಜಿಲ್ಲೆಯ ಕುರುಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. 15 ವರ್ಷದ ಬಾಲಕಿ ಮನೆಗೆ ಹೋಗುತ್ತಿದ್ದ ವೇಳೆ, ಯುವಕನೋರ್ವ "ಐ ಲವ್ ಯೂ" ಎಂದಿದ್ದಾನೆ ಎಂಬ ದೂರನ್ನು ಆಕೆ ನೀಡಿದ್ದಳು. ಅಲ್ಲದೆ, ಈತನಿಂದ ಆಗಾಗ ಕಿರುಕುಳ ಎದುರಾಗಿದೆ ಎಂಬುದೂ ದೂರಿನಲ್ಲಿ ಹೇಳಲಾಗಿತ್ತು.
ಈ ದೂರಿನ ಮೇರೆಗೆ ಪೊಲೀಸರು ಸೆಕ್ಷನ್ 354 ಡಿ (ಹಿಂಬಾಲಿಸುವುದು), 509 (ಮಹಿಳೆಯ ಗೌರವಕ್ಕೆ ಧಕ್ಕೆ ತರುವ ಹೇಳಿಕೆ), ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಮತ್ತು ಎಸ್ಎಸ್ಎಲ್/ಎಸ್ಟಿ ಕಾಯ್ದೆಯ ಸೆಕ್ಷನ್ 3(2)(ವಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಸಾಕ್ಷ್ಯಗಳ ಕೊರತೆಯಿಂದ, ವಿಚಾರಣಾ ನ್ಯಾಯಾಲಯ ಆರೋಪಿಯನ್ನು ನಿರ್ದೋಷನೆಂದು ತೀರ್ಮಾನಿಸಿತ್ತು.
ಈ ತೀರ್ಪನ್ನು ಎತ್ತಿಹಿಡಿದ ಹೈಕೋರ್ಟ್, "ನಾನು ನಿನ್ನನ್ನು ಪ್ರೀತಿಸುತ್ತೇನೆ" ಎಂಬ ಹೇಳಿಕೆ ಮಾತ್ರದಿಂದ ಲೈಂಗಿಕ ಕಿರುಕುಳ ಎಂಬ ಅಂಶವನ್ನು ತೋರಿಸಲಾಗದು ಎಂದು ಹೇಳಿದೆ.
ಸುಪ್ರೀಂ ಕೋರ್ಟ್ ನೀಡಿರುವ ಅಟಾರ್ನಿ ಜನರಲ್ ಫಾರ್ ಇಂಡಿಯಾ ವಿ. ಸತೀಶ್ (2021) ಪ್ರಕರಣದ ತೀರ್ಪಿಗೆ ಉಲ್ಲೇಖ ನೀಡುತ್ತಾ, ಪೋಕ್ಸೋ ಕಾಯ್ದೆಯ ಸೆಕ್ಷನ್ 7ರಲ್ಲಿ ವ್ಯಾಖ್ಯಾನಿಸಲಾದಂತೆ ಲೈಂಗಿಕ ಕಿರುಕುಳ ಎನ್ನಲು ಅದು ಸ್ಪಷ್ಟ ಲೈಂಗಿಕ ಉದ್ದೇಶವನ್ನು ಹೊಂದಿರಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
PublicNext
29/07/2025 12:33 pm