", "articleSection": "Politics,Entertainment,Crime,Cinema,News", "image": { "@type": "ImageObject", "url": "https://prod.cdn.publicnext.com/s3fs-public/421698-1753868524-7~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SrinivasCrimeBng" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ಸ್ಯಾಂಡಲ್ ವುಡ್ ನಟಿ ಮಾಜಿ ಸಂಸದೆ ರಮ್ಯಾ ಧ್ವನಿ ಎತ್ತಿದ್ರು. ಈ ವಿಚಾರಕ್ಕೆ ದರ್ಶನ್ ಫ್...Read more" } ", "keywords": " ಬೆಂಗಳೂರು: ನಟಿ ರಮ್ಯಾಗೆ ಕಾಮೆಂಟ್ ಮಾಡಿದೋರಿಗೆ ಕಾದಿದೆ ಕಂಟಕ..! ಅಕೌಂಟ್ ಡಿಲೀಟ್ ಮಾಡಿದ್ರೂ ನಿಮ್ಮನ್ನ ಖಾಕಿ ಬಿಡಲ್ಲ Ramya online harassment police action Cyberbullying laws India Karnataka Online threats consequences India Ramya Darshan controversy online comments Karnataka police cyber cell Digital footprint tracking police Online defamation legal repercussions Trolling crackdown Karnataka Ramya comments controversy legal action Karnataka cybercrime social media Actress Ramya online abuse investigation Deleting social media accounts won't save you", "url": "https://dashboard.publicnext.com/node" } ಬೆಂಗಳೂರು: ನಟಿ ರಮ್ಯಾಗೆ ಕಾಮೆಂಟ್ ಮಾಡಿದೋರಿಗೆ ಕಾದಿದೆ ಕಂಟಕ..! ಅಕೌಂಟ್ ಡಿಲೀಟ್ ಮಾಡಿದ್ರೂ ನಿಮ್ಮನ್ನ ಖಾಕಿ ಬಿಡಲ್ಲ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಟಿ ರಮ್ಯಾಗೆ ಕಾಮೆಂಟ್ ಮಾಡಿದೋರಿಗೆ ಕಾದಿದೆ ಕಂಟಕ..! ಅಕೌಂಟ್ ಡಿಲೀಟ್ ಮಾಡಿದ್ರೂ ನಿಮ್ಮನ್ನ ಖಾಕಿ ಬಿಡಲ್ಲ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ಸ್ಯಾಂಡಲ್ ವುಡ್ ನಟಿ ಮಾಜಿ ಸಂಸದೆ ರಮ್ಯಾ ಧ್ವನಿ ಎತ್ತಿದ್ರು. ಈ ವಿಚಾರಕ್ಕೆ ದರ್ಶನ್ ಫ್ಯಾನ್ಸ್ ಹೆಸ್ರಲ್ಲಿ ರಮ್ಯಾಗೆ ಆಡಬಾರದ ಮಾತುಗಳನ್ನ ಆಡಿ ಅತ್ಯಂತ ಅಶ್ಲೀಲವಾಗಿ ಕೆಲವರು ಮೆಸೇಜ್ ಮತ್ತು ಕಾಮೆಂಟ್ ಮಾಡಿದ್ರು. ಈ ಕಾಮೆಂಟ್ ಮತ್ತು ಮೆಸೇಜ್ ಮಾಡಿದವರ ವಿರುದ್ಧ ರಮ್ಯ ತಿರುಗಿ ಬಿದ್ದು ಸೈಬರ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.

ರಮ್ಯಾ ದೂರು ದಾಖಲಿಸುತ್ತಿದ್ದಂತೆ ಕೆಲವರು ತಾವು ಮಾಡಿದ್ದ ಕಮೆಂಟ್ ಜೊತೆಗೆ ಅಕೌಂಟ್ ಗಳನ್ನ ಡಿಲೀಟ್ ಮಾಡಿದ್ದಾರೆ. ಆದ್ರೆ ವಿಕೃತಿ ಮನಸ್ಥಿತಿಯವರು ಖಾತೆ ಡಿಲೀಟ್ ಮಾಡೋ ಮುನ್ನವೇ ಸೈಬರ್ ಕ್ರೈಮ್ ಪೊಲೀಸ್ರು ಆ ಅಕೌಂಟ್ ಗಳ URL ಐಡಿ ಪಡೆದು ಅಕೌಂಟ್ ಯಾರ ಹೆಸ್ರಲ್ಲಿದೆ ಅನ್ನೋದನ್ನ ಪತ್ತೆ ಮಾಡಿದ್ದಾರೆ. ಹೀಗಾಗಿ ಕಾಮೆಂಟ್ ಮಾಡಿದ ಕೈಗಳಿಗೆ ಕೋಳ ತೊಡಿಸಲು ಸೈಬರ್ ಕ್ರೈಮ್ ರೆಡಿಯಾಗಿದ್ದಾರೆ.

ಇನ್ನೂ ರಮ್ಯಾಗೆ ಕೆಲವರು ಕಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಆ ಕಾಮೆಂಟ್ ನಲ್ಲಿ ಮಿಡಲ್ ಫಿಂಗರ್ ಎಮೋಜಿ ಕಳುಹಿಸಿದ್ದಾರೆ. ಇನ್ನೂ ಕೆಲವರು ಪೋರ್ನ್ ವಿಡಿಯೋ ಕಳುಹಿಸಿದ್ದಾರೆ. ಇದ್ರಲ್ಲಿ ಕಾಮೆಂಟ್ ಮಾಡಿದವರಿಗೆ ಮೂರು ವರ್ಷಕ್ಕಿಂತ ಕಡಿಮೆ ಪ್ರಮಾಣದ ಶಿಕ್ಷೆಯಿದ್ದು, ಇವರಿಗೆ ಪೊಲೀಸ್ರ ತನಿಖಾ ಬಿಸಿ ಅಷ್ಟೇ ತಟ್ಟಲಿದೆ. ಆದ್ರೆ ಮಿಡಲ್ ಫಿಂಗರ್ ಮತ್ತು ಪೋರ್ನ್ ವಿಡಿಯೋ ಕಳುಹಿಸಿರೋ ಕಿಡಿಗೇಡಿಗಳಿಗೆ ಜೈಲೂಟ ಫಿಕ್ಸ್ ಆಗಲಿದೆ. ಈ ರೀತಿ ಮೊಬೈಲ್ ನಲ್ಲಿ ನೆಟ್ ಇದೆ‌. ಕೈಖಾಲಿ ಇದೆ ಅಂತ ಬೇಕಾಬಿಟ್ಟಿ ಮೆಸೇಜ್ ಕಾಮೆಂಟ್ ಮಾಡೋರಿಗೆ ರಮ್ಯಾ ಪ್ರಕರಣದಿಂದ ತಕ್ಕ ಶಾಸ್ತಿಯಾಗಲಿದೆ‌.

Edited By : Suman K
PublicNext

PublicNext

30/07/2025 03:12 pm

Cinque Terre

85.77 K

Cinque Terre

9

ಸಂಬಂಧಿತ ಸುದ್ದಿ