", "articleSection": "Sports", "image": { "@type": "ImageObject", "url": "https://prod.cdn.publicnext.com/s3fs-public/222042-1754106001-WhatsApp-Image-2025-08-02-at-8.50.20-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಅಂಪೈರ್ ಕುಮಾರ್ ಧರ್ಮಸೇನ ಅವರೊಂದ...Read more" } ", "keywords": "KL Rahul, Virat Kohli support, cricket news, Indian cricket team, cricket controversy, umpiring decision, KL Rahul news, cricket updates, BCCI, Indian Premier League, cricket highlights, ", "url": "https://dashboard.publicnext.com/node" }
ಓವಲ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಅಂಪೈರ್ ಕುಮಾರ್ ಧರ್ಮಸೇನ ಅವರೊಂದಿಗಿನ ಕೆಎಲ್ ರಾಹುಲ್ ಬಿಸಿ ಮಾತಿನ ಚಕಮಕಿಗೆ ಇಳಿದ ಪ್ರಸಂಗ ನಡೆಯಿತು.
ಇಂಗ್ಲೆಂಡ್ ಇನ್ನಿಂಗ್ಸ್‌ನಾದ್ಯಂತ ಎರಡೂ ತಂಡಗಳ ನಡುವೆ ಕಿಡಿಗಳು ಹಾರುತ್ತಿವೆ. ರಾಹುಲ್ ಸ್ವತಃ ಆಕಾಶ್ ದೀಪ್ ಅವರನ್ನು ಬೆನ್ ಡಕೆಟ್‌ನಿಂದ ದೂರ ಎಳೆದೊಯ್ದರು. ಆದರೆ ದಿನದ ಆರಂಭದಲ್ಲಿ ಎರಡನೇ ಸೆಷನ್‌ನಲ್ಲಿ ಧರ್ಮಸೇನ ಅವರೊಂದಿಗೆ ವಾಗ್ವಾದಕ್ಕೆ ಇಳಿದರು.
ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್‌ನ 22ನೇ ಓವರ್‌ನಲ್ಲಿ ಈ ಘಟನೆ ನಡೆಯಿತು. ಪ್ರಸಿದ್ಧ್, ಆ ಓವರ್‌ನ ಮೊದಲ ಎಸೆತದಲ್ಲಿ ಜ್ಯಾಕ್ ಕ್ರಾಲಿಯನ್ನು ಔಟ್ ಮಾಡಿದ್ದರು ಮತ್ತು ಉಳಿದ ಎಸೆತದಲ್ಲಿ ರೂಟ್‌ರನ್ನು ನಡಗುವಂತೆ ಮಾಡಿದ್ದರು. ರೂಟ್ ಕೊನೆಯ ಎಸೆತವನ್ನು ಬೌಂಡರಿ ಬಾರಿಸಿದರು. ನಂತರ ಪ್ರಸಿದ್ಧ್ ಮತ್ತೆ ಏನೋ ಹೇಳಿದರು. ಈ ಬಾರಿ ರೂಟ್ ಪ್ರತಿದಾಳಿ ನಡೆಸಿದರು.
ನಂತರ ಧರ್ಮಸೇನ ಪ್ರಸಿದ್ಧ್ ಮತ್ತು ಭಾರತದ ನಾಯಕ ಶುಭ್‌ಮನ್ ಗಿಲ್ ಅವರೊಂದಿಗೆ ದೀರ್ಘ ಮಾತುಕತೆ ನಡೆಸಿದರು. ರಾಹುಲ್ ಅದರ ಕೊನೆಯಲ್ಲಿ ಎಂಟ್ರಿ ಕೊಟ್ಟು ಅಂಪೈರ್ ವಿರುದ್ಧ ಆಕ್ರೋಶ ಹೊರ ಹಾಕಿದರು. "ಏನು, ನಾವು ಸುಮ್ಮನಿರಬೇಕೆಂದು ನೀವು ಬಯಸುತ್ತೀರಾ?" ಎಂದು ರಾಹುಲ್ ಧರ್ಮಸೇನ ಅವರನ್ನು ಪ್ರಶ್ನಿಸಿದರು. ಶ್ರೀಲಂಕಾದ ಅಂಪೈರ್ ಅವರೊಂದಿಗೆ ತರ್ಕಿಸಲು ಪ್ರಯತ್ನಿಸಿದರು: "ಯಾವುದೇ ಬೌಲರ್ ಬಂದು ನಿಮ್ಮೊಂದಿಗೆ ಹಾಗೆ ಮಾತನಾಡಲು ನೀವು ಬಯಸುತ್ತೀರಾ? ಇಲ್ಲ, ನೀವು ಹಾಗೆ ಮಾಡಲು ಸಾಧ್ಯವಿಲ್ಲ. ಇಲ್ಲ ರಾಹುಲ್, ನಾವು ಆ ದಾರಿಯಲ್ಲಿ ಹೋಗಬಾರದು" ಎಂದು ಉತ್ತರಿಸಿದರು.
ಇದಕ್ಕೆ ಸುಮ್ಮನಾಗದ ಕೆ.ಎಲ್ ರಾಹುಲ್, "ನಾವು ಏನು ಮಾಡಬೇಕೆಂದು ನೀವು ಬಯಸುತ್ತೀರಿ? ಬ್ಯಾಟ್ ಮಾಡಿ, ಬೌಲಿಂಗ್ ಮಾಡಿ, ಮನೆಗೆ ಹೋಗಿ ಎನ್ನುತ್ತೀರಾ?" ಎಂದು ಮರು ಪ್ರಶ್ನೆ ಹಾಕಿದರು. ಧರ್ಮಸೇನರಿಗೆ ಅದು ನಿಜಕ್ಕೂ ಇಷ್ಟವಾಗಲಿಲ್ಲ. "ಪಂದ್ಯದ ಕೊನೆಯಲ್ಲಿ ನಾವು ಅದರ ಬಗ್ಗೆ ಚರ್ಚಿಸುತ್ತೇವೆ. ನೀವು ಹಾಗೆ ಮಾತನಾಡಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
PublicNext
02/08/2025 09:10 am