", "articleSection": "Sports,Cinema", "image": { "@type": "ImageObject", "url": "https://prod.cdn.publicnext.com/s3fs-public/222042-1754109461-WhatsApp-Image-2025-08-02-at-9.24.37-AM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Vijay.Kumar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ನವದೆಹಲಿ: ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾರಿಂದ ವಿಚ್ಛೇದನ ಪಡೆದ ನಂತರ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ಯುಜ್ವೇಂದ್ರ ಚಾಹಲ್ ಮೊದಲ ಬಾರಿಗೆ...Read more" } ", "keywords": "Yuzvendra Chahal, depression, divorce, cricket news, mental health, Indian cricketer, suicidal thoughts, Chahal interview, cricket updates, sports news, mental health awareness.", "url": "https://dashboard.publicnext.com/node" }
ನವದೆಹಲಿ: ನೃತ್ಯ ನಿರ್ದೇಶಕಿ ಧನಶ್ರೀ ವರ್ಮಾರಿಂದ ವಿಚ್ಛೇದನ ಪಡೆದ ನಂತರ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ಯುಜ್ವೇಂದ್ರ ಚಾಹಲ್ ಮೊದಲ ಬಾರಿಗೆ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ರಾಜ್ ಶಮಾನಿ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಚಾಹಲ್, 'ನಾವಿಬ್ಬರೂ ವಿಚ್ಛೇದನಗೊಂಡ ಸಂದರ್ಭದಲ್ಲಿ ಖಿನ್ನತೆಗೊಳಗಾಗಿ, ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದೆ' ಎಂದು ಬಹಿರಂಗಗೊಳಿಸಿದ್ದಾರೆ.
ನಮ್ಮ ಬೇರ್ಪಡುವ ನಿರ್ಧಾರ ಬದಲಾಗಬಹುದು ಮತ್ತು ಇಬ್ಬರೂ ಮತ್ತೆ ಸಂತೋಷದಿಂದ ಒಟ್ಟಿಗೆ ಇರಬಹುದು ಎಂದು ನನ್ನ ಅಂತರಂಗದಲ್ಲಿ ಆಳವಾಗಿ ಭಾವಿಸಿದ್ದೆ. ಆದರೆ ಅದು ಸುಳ್ಳಾಯಿತು. ವಿಚ್ಛೇದನದ ನಂತರ ನನ್ನನ್ನು ಮೋಸಗಾರ ಎಂದು ಕರೆಯಲಾಯಿತು. ಆದರೆ ನಾನು ಜೀವನದಲ್ಲಿ ಎಂದಿಗೂ ಮೋಸ ಮಾಡಿಲ್ಲ. ನಾನು ನಿಷ್ಠಾವಂತ ವ್ಯಕ್ತಿ. ನನ್ನಂತಹ ನಿಷ್ಠಾವಂತ ವ್ಯಕ್ತಿಯನ್ನು ನೀವು ಹುಡುಕಲು ಸಾಧ್ಯವಿಲ್ಲ. ನಾನು ನನ್ನ ಜನರ ಬಗ್ಗೆ ಕಾಳಜಿ ವಹಿಸುತ್ತೇನೆ. ನಮ್ಮ ಇಡೀ ಕಥೆಯನ್ನ ತಿಳಿಯದೆ ಜನರು ತಮ್ಮದೇ ತೀರ್ಮಾನಕ್ಕೆ ಬಂದಾಗ ನನಗೆ ತುಂಬಾ ನೋವಾಯಿತು. ಈ ಎಲ್ಲಾ ವಿಷಯಗಳಿಂದಲೂ ನನಗೆ ತುಂಬಾ ದುಃಖ ಉಂಟಾಯಿತು. ಆ ಸಮಯದಲ್ಲಿ ಮಾನಸಿಕ ಕಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು' ಎಂದು ಚಾಹಲ್ ಹೇಳಿದ್ದಾರೆ.
ನಾವು ವಿಚ್ಛೇದನದ ಹಂತ ತಲುಪುವ ಹೊತ್ತಿಗೆ ನಮ್ಮಲ್ಲಿ ಸೌಹಾರ್ದ ಬಾಂಧವ್ಯವಿರಲಿಲ್ಲ. ನಾವಿಬ್ಬರೂ ವಿಭಿನ್ನ ನಿರೀಕ್ಷೆಗಳಿಂದ ದಾಂಪತ್ಯ ಸಂಬಂಧಕ್ಕೆ ಒಳಗಾಗಿದ್ದೆವು. ಆದರೆ, ನನ್ನ ಕ್ರಿಕೆಟ್ ಜೀವನದಿಂದಾಗಿ ನಾನು ನನ್ನ ಪತ್ನಿಗೆ ಸಾಕಷ್ಟು ಸಮಯ ಮೀಸಲಿಸಲು ಸಾಧ್ಯವಾಗದೆ ಹೋಗಿದ್ದರಿಂದ ನಮ್ಮ ದಾಂಪತ್ಯ ಜೀವನ ಬಿರುಕು ಬಿಟ್ಟಿತು ಎಂದು ಚಾಹಲ್ ತಿಳಿಸಿದ್ದಾರೆ.
ಐದು ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಯಜುವೇಂದ್ರ ಚಾಹಲ್ ಹಾಗೂ ಧರ್ಮಶ್ರೀ ವರ್ಮ ದಂಪತಿಗಳಿಗೆ ಮಾರ್ಚ್ 20ರಂದು ಬಾಂಬೆ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿತ್ತು.
PublicNext
02/08/2025 10:07 am