", "articleSection": "Business,Government", "image": { "@type": "ImageObject", "url": "https://prod.cdn.publicnext.com/s3fs-public/387839-1754119617-Untitled-design---2025-08-02T125859.310.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನವದೆಹಲಿ : ದೇಶದ ಜಿಎಸ್‌ಟಿ ಸಂಗ್ರಹದಲ್ಲಿ ಬಂಪರ್ ಏರಿಕೆ ಕಂಡುಬಂದಿದೆ. ಜುಲೈ 2025ರ ತಿಂಗಳಿನಲ್ಲಿ ಜಿಎಸ್‌ಟಿ ಆದಾಯವು 7.5% ಹೆಚ್ಚಾಗಿದ್ದು, 1....Read more" } ", "keywords": "India's GST collection for July 2025 has reached a significant milestone, with a 7.5% year-over-year increase to ₹1.96 lakh crore. This growth is attributed to improved compliance, increased imports, and stable consumption. Let's break down the key highlights ¹ ²: ", "url": "https://dashboard.publicnext.com/node" }
ನವದೆಹಲಿ : ದೇಶದ ಜಿಎಸ್‌ಟಿ ಸಂಗ್ರಹದಲ್ಲಿ ಬಂಪರ್ ಏರಿಕೆ ಕಂಡುಬಂದಿದೆ. ಜುಲೈ 2025ರ ತಿಂಗಳಿನಲ್ಲಿ ಜಿಎಸ್‌ಟಿ ಆದಾಯವು 7.5% ಹೆಚ್ಚಾಗಿದ್ದು, 1.96 ಲಕ್ಷ ಕೋಟಿ ರೂಪಾಯಿ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ, ಜಿಎಸ್‌ಟಿ ಆದಾಯದಲ್ಲಿ ಉತ್ತಮ ಹೆಚ್ಚಳ ದಾಖಲಾಗಿದ್ದು, ದೇಶೀಯ ಆದಾಯ ಸಂಗ್ರಹವು ಮತ್ತಷ್ಟು ಹೆಚ್ಚಿದೆ.
ಕೇಂದ್ರ ಸರ್ಕಾರವು ಆಗಸ್ಟ್ 1ರಂದು ಬಿಡುಗಡೆ ಮಾಡಿದ ಇತ್ತೀಚಿನ ಡೇಟಾ ಪ್ರಕಾರ, ಜಿಎಸ್‌ಟಿ ಸಂಗ್ರಹವು ಜಿಗಿತ ಸಾಧಿಸಿದೆ. ಈ ಮೂಲಕ ಸತತ 7ನೇ ತಿಂಗಳು ಜಿಎಸ್‌ಟಿ ಆದಾಯ ಸಂಗ್ರಹವು 1.8 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದೆ.
ಏಪ್ರಿಲ್-ಜುಲೈ 2025 ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಜಿಎಸ್‌ಟಿ ಕಲೆಕ್ಷನ್ 10.7% ಏರಿಕೆಗೊಂಡು 8,18,009 ಕೋಟಿ ರೂಪಾಯಿ ವರದಿಯಾಗಿದೆ. ಇದೇ ವರ್ಷ ಏಪ್ರಿಲ್ ತಿಂಗಳಿನಲ್ಲಿ ಜಿಎಸ್‌ಟಿ ಆದಾಯ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದು, 2.37 ಲಕ್ಷ ಕೋಟಿ ರೂಪಾಯಿ ದಾಖಲಾಗಿತ್ತು.
ಜುಲೈ 2024ರಲ್ಲಿ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) 1.82 ಲಕ್ಷ ಕೋಟಿ ರೂಪಾಯಿ ವರದಿಯಾಗಿತ್ತು. ಕಳೆದ ತಿಂಗಳು 1.84 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹವಾಗಿದೆ.
ದೇಶೀಯ ಆದಾಯವು ಶೇಕಡಾ 6.7ರಷ್ಟು ಹೆಚ್ಚಾಗಿ 1.43 ಲಕ್ಷ ಕೋಟಿ ರೂಪಾಯಿ ವರದಿಯಾಗಿದ್ದು, ಆಮದುಗಳಿಂದ ತೆರಿಗೆ ಸಂಗ್ರಹವು 9.5% ರಷ್ಟು ಹೆಚ್ಚಾಗಿ 52,712 ಕೋಟಿ ರೂಪಾಯಿ ದಾಖಲಾಗಿದೆ.
PublicNext
02/08/2025 01:02 pm