ಬೆಂಗಳೂರು : ಮತಗಳ್ಳತನವಾಗಿದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ವಿಧಾನಪರಿಷತ್ ಸದಸ್ಯ ಸಿಟಿ ರವಿ ಕಿಡಿ ಕಾರಿದ್ದಾರೆ. ಈ ಕುರಿತು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನವರಿಗೆ ಮಾನಸಿಕ ರೋಗ ಇದೆ. ನಾವು ಗೆದ್ರೆ ಮಾತ್ರ ಸಕ್ರಮ, ಬೇರೆಯವರು ಗೆದ್ರೆ ಅಕ್ರಮ ಅಂತ ವರ್ತಿಸುತ್ತಿದ್ದಾರೆ, EVM ಹ್ಯಾಕ್ ಬಗ್ಗೆ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳು ಆರೋಪ ಮಾಡ್ತಿದ್ದವು ಚುನಾವಣಾ ಆಯೋಗ ಹ್ಯಾಕ್ ಮಾಡಿ ತೋರಿಸಿ ಅಂತ ಚಾಲೆಂಜ್ ಮಾಡಿ ಅಂತ ಕೇಳಿತು. ಇದು ವಯರ್ ಲೆಸ್ ಮತ್ತು ಇಂಟರ್ನೆಟ್ ಆಧಾರಿತ ಮೆಶಿನ್. ಆರೋಪ ಮಾಡಿದವರು ಹ್ಯಾಕ್ ಮಾಡೋದ್ರ ಬಳಿಯೂ ಸುಳಿಯಲಿಲ್ಲ, ಕೋರ್ಟ್ ಕೂಡ ಹ್ಯಾಕ್ ಇಲ್ಲ ಅಂತ ಸ್ಪಷ್ಟಪಡಿಸಿತು. ಈಗ EVM ಜೊತೆ VV PAT ಕೂಡ ತರಲಾಗಿದೆ, ಅದು ಪಾರದರ್ಶಕವಾಗಿದೆ. ಬುದ್ದಿ ಇರೋರು ಯಾರೂ ಕೂಡ ಈ ರೀತಿ ಆರೋಪ ಮಾಡಲ್ಲ, ಮಾನಸಿಕ ಆರೋಗ್ಯ ಕೆಟ್ಟವರು ಮಾತ್ರ ಹೀಗೆ ಆರೋಪ ಮಾಡ್ತಾರೆ ಎಂದು ಕಿಡಿ ಕಾರಿದರು.
ಈ ಕಾಂಗ್ರೆಸ್ ನವರದ್ದು ಮೂರ್ಖ ನಾಯಕ, ಮರುಳ ಹಿಂಬಾಲಕರು ಅನ್ನುವಂತಾಗಿದೆ, ಸಿದ್ದರಾಮಯ್ಯ ಅವರೇ ನಿಮಗೆ ಏನಾಗಿದೆ, ಮೂರ್ಖ ನಾಯಕನ ಹಿಂದೆ, ನೀವೇಕೆ ಮರುಳರಾಗ್ತಿದ್ದೀರಿ.? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಆರೋಪ ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ, ಮಹದೇವಪುರದಲ್ಲಿ ಒಂದು ವರ್ಷದ ಅವಧಿಯಲ್ಲಿ ಮತದಾರರ ಸಂಖ್ಯೆ ಹೆಚ್ಚು ಆಗಿದೆ, ಕಡಿಮೆ ಆಗಿಲ್ಲ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕೂಡ ಹೆಚ್ಚುವರಿ ಮತದಾರರು ಸೇರ್ಪಡೆಯಾಗಿದ್ದಾರೆ, ಇಲ್ಲಿ ಎಲ್ಲೂ ಮತಗಳ್ಳತನ ಆಗಿಲ್ಲ ನಾವು ಹುಟ್ಟಿರೋದೇ ಆಡಳಿತ ನಡೆಸಲು ಎಂಬ ಅಹಂ ಭಾವ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಗೆ ಇದೆ ಎಂದು ಕಿಡಿ ಕಾರಿದರು.
PublicNext
02/08/2025 03:45 pm