ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಪಟ್ಟ ಸಿಗುವುದಾದರೆ ನಾನು ಆರ್ ಎಸ್‌ಎಸ್ ಹಾಡು ಹಾಡುತ್ತೇನೆ .. ಸಚಿವ ಸತೀಶ್ ಜಾರಕಿಹೊಳಿ

ಯಾದಗಿರಿ: ಸದನದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ ಆರ್‌ಎಸ್‌ಎಸ್‌ ಗೀತೆ ಹೇಳಿದ ಬಳಿಕ ರಾಜಕೀಯ ವಲಯದಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಯಾಗುತ್ತಿದೆ. ಸದ್ಯ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಸ್ಕೃತ ಬಲ್ಲವರು ಹಾಗಾಗಿ ಅಧಿವೇಶನದಲ್ಲಿ ಸಮಯಕ್ಕೆ ತಕ್ಕಂತೆ ಉತ್ತರಿಸುವ ಬದಲು ಆರ್.ಎಸ್.ಎಸ್ ಗೀತೆ ಹಾಡಿದ್ದಾರೆ ಎಂದು ಹೇಳಿದರು.

ಯಾದಗಿರಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್ ಎಸ್‌ಎಸ್ ಗೀತೆ ಹಾಡಿದರೆ ಮುಖ್ಯಮಂತ್ರಿ ಸ್ಥಾನ ಸಿಗುವುದಾದರೆ ನಾನು ಶಾಸಕ ಚನ್ನಾರಡ್ಡಿ ಪಾಟೀಲ್ ಇಬ್ಬರು ಹಾಡುತ್ತೆವೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ನಾಯಕ ಬಿ.ಎಲ್. ಸಂತೋಷ ಅವರನ್ನು ಟೀಕಿಸಿದ ಮಹೇಶ ತಿಮರೋಡಿ ಅವರನ್ನು ಒದ್ದು ಒಳಗೆ ಹಾಕಿದ್ದೇವೆ ಎಂಬ ಮಾತು ಕೂಡಾ ದೂರು ಬಂದ ಹಿನ್ನಲೆಯಲ್ಲಿ ಹೇಳಿದ್ದಾಗಿದೆ. ಈ ಎರಡನ್ನೂ ಬೇರೆ ರೀತಿಯಲ್ಲಿ ಹೊಲಿಕೆ ಮಾಡುವುದು ಸರಿಯಲ್ಲ ಎಂದರು. ರಾಜ್ಯ ರಾಜಕಾರಣದಲ್ಲಿ ಏನೇ ಬದಲಾವಣೆಯಾದರೂ ಅದಕ್ಕೆ ಹೈಕಮಾಂಡ್ ನೇರ ಕಾರಣ ಹೊರತು ರಾಜ್ಯದ ಬೇರೆ ಯಾರೂ ಅಲ್ಲ ಎಂದರು.

ಮಾಜಿ ಸಚಿವ ರಾಜಣ್ಣ ಅವರು ದೆಹಲಿಗೆ ಹೋಗಿ ನಾಯಕರನ್ನು ಭೇಟಿ ಮಾಡಿ ಆಗಿರುವ ಘಟನೆ ವಿವರಿಸುತ್ತಾರೆ, ಮುಂದಿನದು ಹೈಕಮಾಂಡ್‌ ಗೆ ಬಿಟ್ಟಿದ್ದು, ವಾಲ್ಮೀಕಿ ಸಮುದಾಯವನ್ನು ತುಳಿಯುವ ಕೆಲಸ ಈ ಸರ್ಕಾರ ಮತ್ತು ಪಕ್ಷದಿಂದ ನಡೆಯುತ್ತಿದೆ ಎಂಬುವುದು ಶುದ್ಧ ಸುಳ್ಳು, ಹಿಂದುಳಿದ ವರ್ಗಗಳ‌ ಕಲ್ಯಾಣ ಆಗುವುದು ಕಾಂಗ್ರೆಸ್ ಸರಕಾರದಿಂದ ಎಂದು ಹೇಳಿದರು.

ಇದೇ ವೇಳೆ ಧರ್ಮಸ್ಥಳ ಅದೊಂದು ರಾಜ್ಯ, ರಾಷ್ಟ್ರದ ಸಮಸ್ಯೆ ಅಲ್ಲ. ಅದೊಂದು ಧಾರ್ಮಿಕ ಕ್ಷೇತ್ರ, ಕೋರ್ಟ್ ಆದೇಶದಂತೆ ಸರ್ಕಾರ ತನಿಖೆ ನಡೆಸಿದೆ. ಅದರಿಂದ ಏನೇನು ಹೊರಬರಬೇಕು ಅದು ಬರುತ್ತದೆ. ನೀವೇ ಅದು ದೊಡ್ಡದಾಗಿ ನಿತ್ಯ ಬಿಂಬಿಸುತ್ತಿದ್ದಿರಿ ಎಂದು ಮಾಧ್ಯಮದವರ ಕಡೆ ಸಚಿವರು‌ ಬೊಟ್ಟು ಮಾಡಿದರು. ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಇದ್ದರು.

Edited By : Manjunath H D
PublicNext

PublicNext

24/08/2025 09:04 pm

Cinque Terre

25.9 K

Cinque Terre

0

ಸಂಬಂಧಿತ ಸುದ್ದಿ