", "articleSection": "Education", "image": { "@type": "ImageObject", "url": "https://prod.cdn.publicnext.com/s3fs-public/38633520250830051044filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Suresh Gadag" }, "editor": { "@type": "Person", "name": "9113093241" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ಗಜೇಂದ್ರಗಡ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ, ಕಂದಕೂರು ಅವರು ರಾಜೂರು ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶ...Read more" } ", "keywords": "Chandrashekhar B Kandakoor, Taluka Panchayat CEO, Mathematics teacher, Karnataka government officials, Gandhiji's vision, Rural development initiatives, Panchayat Raj institutions, Gandhiji's legacy ", "url": "https://dashboard.publicnext.com/node" }
ಗದಗ: ಗಜೇಂದ್ರಗಡ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ, ಕಂದಕೂರು ಅವರು ರಾಜೂರು ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ಶಾಲಾ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲಿಸಿದರು. ಶಾಲೆಯಲ್ಲಿ ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವಂತೆ ಶಿಕ್ಷಕರಿಗೆ ತಾಕೀತು ಮಾಡಿದರು.
ರಾಜೂರು ಗ್ರಾಮದ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಇಒ ಅವರು, ೭ ನೇ ತರಗತಿಯ ಮಕ್ಕಳಿಗೆ ಗಣಿತ ವಿಷಯದ ಸಂಕಲನ, ವ್ಯವಕಲನ, ಸರಳೀಕರಣ ಮತ್ತು ಏಕೀಕರಣ ಕುರಿತು ಪಾಠ ಬೋಧನೆ ಮಾಡಿದರು. ಗಣಿತ ವಿಷಯದಲ್ಲಿ ಶಾಲಾ ಮಕ್ಕಳು ಹೊಂದಿರುವ ಗುಣಮಟ್ಟ ಪರಿಶೀಲಿಸಿದರು. ಖುದ್ದು ಮಕ್ಕಳನ್ನು ಕರೆದು ಬ್ಲಾಕಬೋರ್ಡ್ ನಲ್ಲಿ ಸಂಖ್ಯೆಗಳ ಸಂಕಲನ ಮಾಡುವಂತೆ ತಿಳಿಸಿ ಮಕ್ಕಳಿಗೆ ಇರುವ ಗಣಿತ ವಿಷಯದ ಆಸಕ್ತಿ ಪರಿಶೀಲಿಸಿದರು. ಅಲ್ಲದೆ ಖುದ್ದು ಕೆಲವೊಂದು ಗಣಿತದ ಸಮಸ್ಯೆಗಳನ್ನು ಬ್ಲಾಕಬೋರ್ಡ್ ನಲ್ಲಿ ಬಗೆಹರಿಸಿದ ಇಒ ಕಂದಕೂರು ಅವರು ಮಕ್ಕಳಿಗೆ ಗಣಿತದ ಮೇಷ್ಟ್ರಾಗಿ ಗಮನ ಸೆಳೆದರು.
ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ಜೊತೆ ಸಮಾಲೋಚನೆ ನಡೆಸಿದ ಇಒ ಅವರು, ಶಾಲಾ ಯೋಜನೆಯಂತೆ ಕೇವಲ ಪಾಠ ಮುಕ್ತಾಯಗೊಳಿಸುವ ಕಾರ್ಯವನ್ನು ಅಷ್ಟೇ ಮಾಡದೇ ಶಾಲಾ ಶಿಕ್ಷಕರು ಮಕ್ಕಳ ಕಲಿಕಾ ಗುಣಮಟ್ಟಕ್ಕೆ ಅನುಗುಣವಾಗಿ ಪಾಠ ಬೋಧನೆ ಮಾಡಬೇಕು. ವಿಶೇಷ ತರಗತಿ ಆಯೋಜಿಸಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬುದ್ದಿಮಟ್ಟ ಹೆಚ್ಚಿಸವ ಕೆಲಸವನ್ನು ಶಾಲಾ ವಿಷಯ ಶಿಕ್ಷಕರು ಮಾಡಬೇಕೆಂದು ಸೂಚಿಸಿದರು.
ಶಾಲೆಯ ಅಡುಗೆ ಕೋಣೆಗೆ ಭೇಟಿ ನೀಡಿ ಮಕ್ಕಳಿಗೆ ಕೊಡುವ ಆಹಾರದ ಗುಣಮಟ್ಟ ಪರಿಶೀಲಿಸಿದರು. ಆಹಾರದ ಮೆನ್ಯೂವಿನಂತೆ ಪ್ರತಿದಿನ ಸರಿಯಾದ ಸಮಯಕ್ಕೆ ಮಕ್ಕಳಿಗೆ ಆಹಾರ ಸಿದ್ಧಪಡಿಸಬೇಕೆಂದು ಅಡುಗೆ ಸಿಬ್ಬಂದಿ ಅವರಿಗೆ ತಾಕೀತು ಮಾಡಿದರು. ಇದೇ ವೇಳೆ ಶಾಲೆಯ ಮೂಲಭೂತ ಅವಶ್ಯಕತೆಗಳ ಪೂರೈಕೆ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರು ಇಒ ಅವರಿಗೆ ಮನವಿ ಮಾಡಿಕೊಂಡರು. ಆದ್ಯತೆ ಮೇರೆಗೆ ಪೂರೈಸುವುದಾಗಿ ಇಒ ಅವರು ಭರವಸೆ ನೀಡಿದರು.
ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕ ಓದಿಗೆ ಸೂಕ್ತ ವಾತಾವರಣ ನಿರ್ಮಿಸಿರುವ ಕುರಿತು ಪರೀಕ್ಷಿಸಿದರು. ಗ್ರಂಥಾಲಯಕ್ಕೆ ಗ್ರಾಮದ ಸಾರ್ವಜನಿಕರು ಮತ್ತು ಯುವಕರು ಆಸಕ್ತಿಯಿಂದ ಬಂದು ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ವಾತಾವರಣ ನಿರ್ಮಿಸಿ ಅಂತ ಗ್ರಂಥಪಾಲಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ರಾಜೂರು ಗ್ರಾಪಂ ಕಾರ್ಯದರ್ಶಿ ರಾಜು ಗಾರಗಿ, ನರೇಗಾ ಸಿಬ್ಬಂದಿ ವರ್ಗ ಮತ್ತು ಗ್ರಾಪಂ ಸಿಬ್ಬಂದಿ ವರ್ಗ ಹಾಜರಿದ್ದರು.
Kshetra Samachara
30/08/2025 05:10 pm