", "articleSection": "Infrastructure,Education", "image": { "@type": "ImageObject", "url": "https://prod.cdn.publicnext.com/s3fs-public/286525-1756906576-WhatsApp-Image-2025-09-03-at-7.05.59-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "RuderegowdaGadag" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಗದಗ: ತಾಲೂಕಿನ ಹೊಂಬಳ ಗ್ರಾಮದ ಎಲ್. ಎಸ್ ಮೈಲಾರ ಸರ್ಕಾರಿ ಪ್ರೌಢ ಶಾಲೆ ಇದೆ. 8 ರಿಂದ 10ನೇ ತರಗತಿ ವರೆಗೆ 200ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯ...Read more" } ", "keywords": "Government school toilets, lack of sanitation facilities, open defecation in schools, Homblin school, boys' school hygiene, school infrastructure issues, Karnataka education system, basic amenities in schools, student health and safety, government schools' challenges.", "url": "https://dashboard.publicnext.com/node" } ಗದಗ: ಸರ್ಕಾರಿ ಪ್ರೌಢ ಶಾಲೆಯುಂಟು ಆದ್ರೆ ಶೌಚಾಲಯ ಇಲ್ಲ : ಬಯಲು ಶೌಚ ಮೊರೆ ಹೋದ ಹೊಂಬಳ ಶಾಲೆ ಗಂಡು ಮಕ್ಕಳು
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಸರ್ಕಾರಿ ಪ್ರೌಢ ಶಾಲೆಯುಂಟು ಆದ್ರೆ ಶೌಚಾಲಯ ಇಲ್ಲ : ಬಯಲು ಶೌಚ ಮೊರೆ ಹೋದ ಹೊಂಬಳ ಶಾಲೆ ಗಂಡು ಮಕ್ಕಳು

ಗದಗ: ತಾಲೂಕಿನ ಹೊಂಬಳ ಗ್ರಾಮದ ಎಲ್. ಎಸ್ ಮೈಲಾರ ಸರ್ಕಾರಿ ಪ್ರೌಢ ಶಾಲೆ ಇದೆ. 8 ರಿಂದ 10ನೇ ತರಗತಿ ವರೆಗೆ 200ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಾರೆ. ಅದರಲ್ಲಿ 103 ಗಂಡು ಮಕ್ಕಳಿದ್ದಾರೆ. ಅವರಿಗೆ ಬಹುಮುಖ್ಯವಾದ ಶೌಚಾಲಯ ಇಲ್ಲ. ಈ ಸರ್ಕಾರಿ ಶಾಲೆ 1998 ರಲ್ಲಿ ಆರಂಭವಾಯಿತು. ಮೊದಲಿಗೆ ಚಿಕ್ಕ ಶೌಚಾಲಯ ನಿರ್ಮಿಸಲಾಗಿತ್ತು.

ಅದು ಕಳಪೆ ಆದ್ದರಿಂದ ಎರಡೇ ವರ್ಷದಲ್ಲಿ ಹಾಳಾಯಿತು. ತಗಡುಗಳು ಮಳೆ ಗಾಳಿಗೆ ಹಾರಿಹೋದವು. ಗೋಡೆಗಳು ಬಿದ್ದು ಹೋದವು. ಅಲ್ಲಿಂದ ಇಲ್ಲಿಯ ವರೆಗೆ ಈ ಪ್ರೌಢ ಶಾಲೆ ನೂರಾರು ಮಕ್ಕಳಿಗೆ ಬಯಲೇ ಅನಿವಾರ್ಯವಾಗಿದೆ. ಸ್ಕೂಲ್ ಎದುರು ರಾಜ್ಯ ಹೆದ್ದಾರಿ ಇರುವುದರಿಂದ ರಸ್ತೆ ದಾಟಿಕೊಂಡು ಶೌಚಕ್ಕೆ ಹೋಗಬೇಕು. ಮಲ-ಮೂತ್ರಕ್ಕಾಗಿ ಮಕ್ಕಳು ರಸ್ತೆ ದಾಟುವ ವೇಳೆ ಏನಾದ್ರೂ ಅನಾಹುತ ಘಟನೆ ನಡೆದ್ರೆ ಯಾರು ಹೋಣೆ ಅನ್ನುವಂತಾಗಿದೆ.

ಈ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಶಿಕ್ಷಣ ಇಲಾಖೆ ಹಾಗೂ ಸ್ಥಳಿಯ ಗ್ರಾಮ ಪಂಚಾಯತಗೆ ಸಾಕಷ್ಟು ಮನವಿ ನೀಡಲಾಗಿದೆ. ಆದ್ರೂ ಯಾರೂ ಕಣ್ ತೆರೆದು ನೋಡ್ತಿಲ್ಲ. ಗ್ರಾಮ ಪಂಚಾಯತನವರು ತಾಂತ್ರಿಕ ದೋಷದ ನೆಪ ಹೇಳುತ್ತಿದ್ದಾರೆ.

Edited By : Shivu K
PublicNext

PublicNext

03/09/2025 07:06 pm

Cinque Terre

21 K

Cinque Terre

0

ಸಂಬಂಧಿತ ಸುದ್ದಿ