ಸಿದ್ದಾಪುರ : ಚಮಗಾರ ಸಮಾಜದವರು ಪೂರ್ವಜರ ಕಾಲದಿಂದಲೂ ವೃತ್ತಿ ಪರವಾಗಿ ನಡೆಸಿಕೊಂಡು ಬಂದಿರುವ ಜಾಗವನ್ನು ಹಲವರು ಅತಿಕ್ರಮಣ ಮಾಡಿ ಬಳಸಿಕೊಳ್ಳುತ್ತಿದ್ದಾರೆ.
ಅತಿಕ್ರಮಣ ಮಾಡಿದ ಸಮಾಜಕ್ಕೆ ಮೀಸಲಿದ್ದ ಜಾಗ ತೆರವು ಮಾಡುವಂತೆ ಒತ್ತಾಯಿಸಿ ಕೆರೆಗುಂಡಿ ಮತ್ತು ಸ್ಮಶಾನ ಅಭಿವೃದ್ಧಿ ಸಮಿತಿ, ಅಂಬೇಡ್ಕರ್ ಶಕ್ತಿ ಸಂಘ ಹಾಗೂ ವಿವಿಧ ದಲಿತ ಸಂಘಟನೆಗಳಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಸಿದ್ದಾಪುರದ ಅಂಬೇಡ್ಕರ್ ಸರ್ಕಲ್ ನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೆರವಣಿಗೆ ಪ್ರಾರಂಭಿಸಿದರು. ವಿವಿಧ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ಹೊಸ ಬಸ್ ನಿಲ್ದಾಣ ಮೂಲಕ ಸಾಗಿ ತಹಶೀಲ್ದಾರ್ ಕಚೇರಿಗೆ ಮೆರವಣಿಗೆ ತಲುಪಿತು
ಸಿದ್ದಾಪುರ ತಾಲೂಕಿನ ಕೊಂಡ್ಲಿ ಗ್ರಾಮದ ಶಿರಳಗಿ ಪಂಚಾಯತಕ್ಕೆ ಸಂಬಂಧಿಸಿದ ಮುಗದೂರು ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸೊರಬ ರಸ್ತೆ ಪಕ್ಕದಲ್ಲಿರುವ ಅರಣ್ಯ ಸ.ನಂ. 292 ರಲ್ಲಿ ಆದ ಅತಿಕ್ರಮಣ ಹಾಗೂ ಜಿಪಿಎಸ್ ರದ್ದುಪಡಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿದರು. ತಾಲೂಕಿನಲ್ಲಿ ದಲಿತ ಸಮುದಾಯವಿರುವ ಊರಿನಲ್ಲಿ ಸ್ಮಶಾನದ ಜಾಗವನ್ನು ಹಲವರು ಅತಿಕ್ರಮ ಮಾಡಿದ್ದಾರೆ. ನಮ್ಮ ಸಮಾಜದವರು ಅಂತ್ಯಕ್ರಿಯೆ ನಡೆಸಲು ಪರದಾಡುವಂತಾಗಿದೆ ಕೂಡಲೇ ಜಾಗವನ್ನು ತೆರವು ಮಾಡಿಕೊಡಬೇಕೆಂದು ಮನವಿ ಮಾಡಿದರು.
ಅರಣ್ಯ ಇಲಾಖೆಯವರು ಸ್ಥಳಕ್ಕೆ ಬರುವವರೆಗೆ ಇಲ್ಲಿಂದ ಹೋಗುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು, ಸ್ಥಳಕ್ಕೆ ಆರ್ ಎಫ್ ಒ ಅಜಯ್ ಕುಮಾರ್ ಬಂದು ಪ್ರತಿಭಾ ನಕಾರ ಸಮಸ್ಯೆಯನ್ನು ಆಲಿಸಿದರು. ತಾಸಿಲ್ದಾರರು ಹಾಗೂ ಆರ್ ಎಫ್ ರವರು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಕಿರಣ್ ಕಾನಡೆ, ಕಮಲಾಕರ್ ಜೋಗುಳೇಕರ್, ಚಂದ್ರಶೇಖರ್ ಕಾನಡೆ, ಗಜಾನನ್ ಜೋಗುಳೇಕರ್ ಲಕ್ಷ್ಮಣ್ ಬೋರ್ಕರ್, ವೀಣಾ ಕಾನಡೆ, ಸವಿತಾ ಕಾನಡೆ, ಸುಮಾ ಜೋಗಳೇಕರ್, ಟಿ ಕೇಶವ, ಸೊರಬ ಚಂದ್ರಪ್ಪ ಹೊಳೆ ಮರುರ್ ನಾಗವೇಣಿ ಬೋರ್ಕರ್, ಶಾರದಾ ಬೋರ್ಕರ್, ದೇವರಾಜ, ರಾಧಾ ಜೋಗಳೆಕರ, ಜೀವಪ್ಪ ವಡಗೇರಿ, ವಿನಾಯಕ ಹೆಚ್ಚೆ, ಅರ್ಜುನ್ ಮಿಂಟಿ ಶಿರಸಿ, ದಿಲೀಪ, ವಿಗ್ನೇಶ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/09/2025 02:56 pm