ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರ: ಬೀದಿನಾಯಿಗಳ ಹಾವಳಿಗೆ ಜನರು ಹೈರಾಣು

ಸಿದ್ದಾಪುರ : ಪಟ್ಟಣ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಭಯದಲ್ಲೇ ಓಡಾಡುವಂತ ಸ್ಥಿತಿ ನಿರ್ಮಾಣ ವಾಗಿದೆ.

ಮುಖ್ಯ ರಸ್ತೆ, ಪ್ರಮುಖ ಸರ್ಕಲ್, ಆಸ್ಪತ್ರೆ ಹೀಗೆ ಸಾರ್ವಜನಿಕರು ಹೆಚ್ಚಾಗಿ ಸೇರುವ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಸೇರಿಕೊಂಡು ಪರಸ್ಪರ ಕಚ್ಚಿಕೊಳ್ಳುತ್ತ ಸಾರ್ವಜನಿಕರಿಗೆ ವಾಹನ ಸವಾರರಿಗೆ ಓಡಾಡಲು ಆಗದಂತ ಪರಿಸ್ಥಿತಿ ಉಂಟಾಗಿದೆ.

ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ನಾಯಿಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಪ್ರತಿ ದಿನ ಸರಕಾರಿ ಆಸ್ಪತ್ರೆಗೆ 10 ಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

ಇವುಗಳ ಹಾವಳಿ ಹೀಗೆ ಮುಂದುವರೆದರೆ ಶಾಲಾ ಮಕ್ಕಳ ಮೇಲೆ ಎರಗಿ ದಾಳಿ ಮಾಡಿ ಅಪಾಯಗಳಾಗುವ ಮೊದಲು ಎಚ್ಛೆತ್ತುಕೊಂಡು ಆಗುವ ಅನಾಹುತ ತಡೆಯಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಬೆಳಿಗ್ಗೆ ಹಾಗೂ ನಸುಕಿನಲ್ಲಿ ಸಂಜೆಯ ವೇಳೆ ಜನರು ಕೈಲಿ ಕೋಲು ಹಿಡಿದುಕೊಂಡು ಓಡಾಡುವ ಸನ್ನಿವೇಶ ಕಂಡುಬರುತ್ತಿದೆ.

Edited By : PublicNext Desk
Kshetra Samachara

Kshetra Samachara

06/09/2025 08:34 pm

Cinque Terre

2.24 K

Cinque Terre

0