", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/474799-1756719996-17-08-2025.02_43_02_09.Still187.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SugandaRajuNajangud" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ನಂಜನಗೂಡು: ಶ್ರೀಭಗೀರಥ ಜಯಂತೋತ್ಸವ ಹಾಗೂ ಉಪ್ಪಾರ ಸಮುದಾಯ ಭವನದ ಶಂಕುಸ್ಥಾಪನೆಯನ್ನು ನಂಜನಗೂಡಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೆರವೇರಿಸಿದ...Read more" } ", "keywords": "Nanjangudu, Bhageeratha Jayanthi, Uppara community hall, foundation stone, Chief Minister, community development, Karnataka politics, cultural celebration, CM event, Nanjangudu news ", "url": "https://dashboard.publicnext.com/node" } ನಂಜನಗೂಡು: ಭಗೀರಥ ಜಯಂತೋತ್ಸವ- ಉಪ್ಪಾರ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿದ ಸಿಎಂ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ಭಗೀರಥ ಜಯಂತೋತ್ಸವ- ಉಪ್ಪಾರ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

ನಂಜನಗೂಡು: ಶ್ರೀಭಗೀರಥ ಜಯಂತೋತ್ಸವ ಹಾಗೂ ಉಪ್ಪಾರ ಸಮುದಾಯ ಭವನದ ಶಂಕುಸ್ಥಾಪನೆಯನ್ನು ನಂಜನಗೂಡಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೆರವೇರಿಸಿದರು.

ಬಳಿಕ ಸಿಎಂ ಮಾತನಾಡಿ, ನಾವು ಜಾತಿ ಮಾಡಿದವರಲ್ಲ. ಎಲ್ಲ ಜಾತಿ, ಎಲ್ಲ ಧರ್ಮದವರಿಗೆ ಸಮಾನ ಅವಕಾಶ ಸಿಗಬೇಕು. ಸಮಾಜದಲ್ಲಿರುವ ಅಸಮಾನತೆ ಹೋಗಬೇಕು. ಎಲ್ಲರೂ ಕೂಡ ಮುಖ್ಯ ವಾಹಿನಿಗೆ ಬರಬೇಕು. ಸಮಾಜದಲ್ಲಿ ಸಮಾನತೆಯ ಸಮಾಜ ನಿರ್ಮಾಣವಾಗಬೇಕು ಎಂಬುದು ನಮ್ಮ ಆಶಯ. ಬಾಬಾ ಸಾಹೇಬ್ ಅಂಬೇಡ್ಕರ್ ನಮ್ಮ ದೇಶಕ್ಕೆ ಸಂವಿಧಾನ ಕೊಟ್ಟಿದ್ದಾರೆ. ಆ ಸಂವಿಧಾನದಿಂದ ಎಲ್ಲರಿಗೂ ಸಮಾನ ಅವಕಾಶಗಳು ಇರಬೇಕು ಎಂದಿದ್ದಾರೆ.

ಇದರಿಂದ ಸಮಾಜದಲ್ಲಿ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ನಾನು ಸಿಎಂ ಆದ ಮೇಲೆ ಭಗೀರಥ ಜಯಂತೋತ್ಸವ ಆಚರಣೆ ಮಾಡಿದ್ದೇವೆ. ಭಗೀರಥ ಉಪ್ಪಾರ ಸಮಾಜಕ್ಕೆ ಸೀಮಿತವಲ್ಲ, ಇಡೀ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಹಾಗಾಗಿ ಜಯಂತಿಯನ್ನು ಆಚರಿಸಲಾಯಿತು. ಭಗೀರಥನ ಹೆಸರಿನಲ್ಲಿ ಶಿಕ್ಷಣ ಪಡೆದುಕೊಳ್ಳಬೇಕು, ಸಂಘಟನೆ ಮಾಡಬೇಕು.

ಶಿಕ್ಷಣ ಇಲ್ಲದಿದ್ದರೆ ಸ್ವಾಭಿಮಾನ ಬರಲು ಸಾಧ್ಯವಿಲ್ಲ.

ಶಿಕ್ಷಣ ಇದ್ದಿದಕ್ಕೆ ಲಾಯರಾದೆ, ಶಾಸಕನಾದೆ, ಮುಖ್ಯಮಂತ್ರಿಯೂ ಆದೆ. ಆದ್ದರಿಂದ ವಿದ್ಯಾವಂತರಾಗಬೇಕು. ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ವೈರುಧ್ಯ ಸಮಾಜಕ್ಕೆ ಕಾಲಿಡುತ್ತೇವೆ ಎಂದು ಅಂಬೇಡ್ಕರ್ ಹೇಳಿದ್ದರು. ನಿಮ್ಮ ಮಕ್ಕಳು ಮಾತ್ರ ವಿದ್ಯೆಯಿಂದ ವಂಚಿತರಾಗಬಾರದು. ಪ್ರತಿ ಹೋಬಳಿಗೂ ವಸತಿ ಶಾಲೆ ಇರಬೇಕು.

ದೇವನೂರು ಮಹಾದೇವ ರವರ ನೇತೃತ್ವದಲ್ಲಿ ಡಿಎಸ್ ಎಸ್ (ದಲಿತ ಸಂಘರ್ಷ ಸಮಿತಿ) ಹೋರಾಟ ಮಾಡುತ್ತಿದ್ದರು. ನಮಗೆ ಹೆಂಡ ಬೇಡ, ಶಿಕ್ಷಣ ಬೇಕು ಎಂದು.

ನಾನು ಅಧಿಕಾರಕ್ಕೆ ಬಂದಾಗ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಪ್ರಾರಂಭಿಸಿದೆವು. ಹಳ್ಳಿಗಾಡಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಸಿಗಬೇಕು ಎಂದು ಶಾಲೆಗಳನ್ನು ತೆರೆದೆವು. 850 ವಸತಿ ಶಾಲೆಗಳು ಆಗಿವೆ. ಉಪ್ಪಾರ ಜನಾಂಗವನ್ನು ಎಸ್ಟಿ ಜನಾಂಗಕ್ಕೆ ಸೇರಿಸಬೇಕು ಎಂದು ಒತ್ತಾಯವಿದೆ. ಉಪ್ಪಾರ ಸಮುದಾಯದ ಕುಲಶಾಸ್ತ್ರವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತೇವೆ.

ಮೂರು ಬಾರಿ ವರುಣಾ ಕ್ಷೇತ್ರದಲ್ಲಿ ನಾನು ಗೆದ್ದಿದ್ದೇನೆ. ವರುಣಾ ಕ್ಷೇತ್ರದಲ್ಲಿ ಉಪ್ಪಾರ ಜನಾಂಗ ಇದೆ. ನಂಜನಗೂಡು ಕ್ಷೇತ್ರದಲ್ಲಿಯೂ ಇದ್ದಾರೆ.

ಒಟ್ಟಾರೆ ಉಪ್ಪಾರ ಜನಾಂಗದವರು ನನಗೆ ಮತ್ತು ಕಾಂಗ್ರೆಸ್ ಗೆ ಬೆಂಬಲವನ್ನು ಕೊಡುತ್ತಿದ್ದೀರಿ. ಮಕ್ಕಳಿಗೆ ಶಿಕ್ಷಣ ಕೊಡುತ್ತೇವೆ ಎಂದು ಶಪಥ ಮಾಡಿ. ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆದು ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿ. ನಾನು ನಿಮ್ಮ ಜೊತೆ ಇದ್ದೇನೆ.

ನೀವು ಮೇಲೆ ಬಂದರೆ ಸಂತೋಷ, ತೃಪ್ತಿ ನನಗೆ ಆಗಲಿದೆ. ನಿಮ್ಮಲ್ಲಿ ಸಂಘಟನೆ, ಶಿಕ್ಷಣ ಹೆಚ್ಚಾಗಬೇಕು. ಹೋರಾಟ ಮಾಡಬೇಕು ಎಂದು ನಂಜನಗೂಡಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

Edited By :
Kshetra Samachara

Kshetra Samachara

01/09/2025 03:16 pm

Cinque Terre

2.6 K

Cinque Terre

0

ಸಂಬಂಧಿತ ಸುದ್ದಿ