", "articleSection": "Politics,Cultural Activity,News,Religion", "image": { "@type": "ImageObject", "url": "https://prod.cdn.publicnext.com/s3fs-public/421698-1756819518-018~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಬೆಳಗಾವಿ ನಗದಲ್ಲಿ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. 400 ಕ್ಕೂ ಅಧಿಕ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು, ವಿಸರ್ಜನೆಗೆ...Read more" } ", "keywords": "Belagavi,Ganesha immersion route,MLA,officials,inspection,local news,Karnataka,Ganeshotsav", "url": "https://dashboard.publicnext.com/node" }
ಬೆಳಗಾವಿ: ಬೆಳಗಾವಿ ನಗದಲ್ಲಿ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದೆ. 400 ಕ್ಕೂ ಅಧಿಕ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದ್ದು, ವಿಸರ್ಜನೆಗೆ ತಯಾರಿ ನಡೆಸಲಾಗುತ್ತಿದೆ.
ಕಳೆದ ವರ್ಷ ಗಣೇಶನ ವಿಸರ್ಜನೆಗೆ 35 ಗಂಟೆಗೂ ಅಧಿಕ ಸಮಯ ಆಗಿದೆ. ಹಾಗಾಗಿ ಈ ವರ್ಷ ಆದಷ್ಟು ಬೇಗ ವಿಸರ್ಜನೆ ಮಾಡಬೇಕು ಎಂಬುದು ನಗರ ಆಡಳಿತದ ಪ್ಲ್ಯಾನ್ ಆಗಿದೆ.
ಬೆಳಗಾವಿಯ ಗಣೇಶ ವಿಸರ್ಜನಾ ಮಾರ್ಗಕ್ಕಿಳಿದ ಉತ್ತರ ಶಾಸಕ ಆಸೀಫ್ ಸೇಠ್ ಅವರು ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು. ಅವರೊಂದಿಗೆ ಮಹಾಪೌರ ಮಂಗೇಶ್ ಪವಾರ್, ಮಹಾಪಾಲಿಕ ಆಯುಕ್ತರಾದ ಶುಭಾ ಬಿ. ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ, ಅಭಿಯಂತರರು ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.
ಮೆರವಣಿಗೆ ಮಾರ್ಗದಲ್ಲಿನ ರಸ್ತೆ ಅಭಿವೃದ್ಧಿ, ಬೀದಿ ದೀಪಗಳು ,ಬೆಳಕಿನ ವ್ಯವಸ್ಥೆ, ವಿಸರ್ಜನಾ ಹೊಂಡಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ಮಹಾಮಂಡಳದೊಂದಿಗೆ ಚರ್ಚಿಸಿ ಯೋಗ್ಯ ಸಲಹೆ ಸೂಚನೆಗಳನ್ನು ನೀಡಿದರು.
Kshetra Samachara
02/09/2025 06:55 pm