", "articleSection": "Politics,Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/392696_1757403067_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "8904774317" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ : ತಾಲೂಕಿನ ಮಚ್ಚೆ ಪಟ್ಟಣ ಪಂಚಾಯತಿಯ ಟಿಪ್ಪು ಸುಲ್ತಾನ್ ನಗರದಲ್ಲಿ ಮತಗಟ್ಟೆ ಸ್ಥಾಪಿಸುವಂತೆ ಆಗ್ರಹಿಸಿ ಎಎಪಿ ವತಿಯಿಂದ ಪ್ರತಿಭಟಿಸಲಾಯಿ...Read more" } ", "keywords": "Protest demanding polling station in Belagavi"", "url": "https://dashboard.publicnext.com/node" }
ಬೆಳಗಾವಿ : ತಾಲೂಕಿನ ಮಚ್ಚೆ ಪಟ್ಟಣ ಪಂಚಾಯತಿಯ ಟಿಪ್ಪು ಸುಲ್ತಾನ್ ನಗರದಲ್ಲಿ ಮತಗಟ್ಟೆ ಸ್ಥಾಪಿಸುವಂತೆ ಆಗ್ರಹಿಸಿ ಎಎಪಿ ವತಿಯಿಂದ ಪ್ರತಿಭಟಿಸಲಾಯಿತು.
ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಆಮ್ ಆದ್ಮಿ ಪಕ್ಷದ ಮುಖಂಡರು. ಪ್ರತಿಭಟಿಸುವ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಮಚ್ಚೆ, ಪಟ್ಟಣ ಪಂಚಾಯತಿಯ ಟಿಪ್ಪು ಸುಲ್ತಾನ್ ನಗರದಲ್ಲಿ ಸುಮಾರು 3000 ರಿಂದ 4000 ನಿವಾಸಿಗಳಿದ್ದರೂ, ಪ್ರಸ್ತುತ ಯಾವುದೇ ಮತಗಟ್ಟೆ ಲಭ್ಯವಿಲ್ಲ. ಸದ್ಯಕ್ಕೆ, ಮತದಾರರು ಹತ್ತಿರದ ಮತಗಟ್ಟೆಗೆ ಹೋಗಲು 2-3 ಕಿಲೋಮೀಟರ್ ಪ್ರಯಾಣಿಸಬೇಕಾಗಿದೆ. ಇದರಿಂದಾಗಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ವಿಶೇಷ ಚೇತನ ಮತದಾರರಿಗೆ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ, ಟಿಪ್ಪು ಸುಲ್ತಾನ್ ನಗರದ ನಿವಾಸಿಗಳು ಸುಲಭವಾಗಿ ಮತ ಚಲಾಯಿಸಲು ಮತ್ತು ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗವು ಟಿಪ್ಪು ಸುಲ್ತಾನ್ ನಗರದಲ್ಲಿ ಹೊಸ ಮತಗಟ್ಟೆಯನ್ನು ಸ್ಥಾಪಿಸಲು ದಯವಿಟ್ಟು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
PublicNext
09/09/2025 01:01 pm