ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಬಳ್ಳಾಪುರ: ನಾವು ಕಷ್ಟ ಪಟ್ಟು ದುಡಿದ ಹಣ ನಮಗೆ ನೀಡಿ ಸ್ವಾಮಿ

ಭಾಗ್ಯನಗರ : ಕೆಲ ದಿನಗಳಿಂದ ನಮ್ಮನ್ನು ಗುಂಪು ಗುಂಪುಗಳಾಗಿ ಕೆಲಸದಿಂದ ತೆಗೆಯುತ್ತಿದ್ದಾರೆ. ಕಾರಣ ನಮಗೆ ತಿಳಿದು ಬಂದಿಲ್ಲ. ಅವರ ನಡೆ ನಮಗೆ ಅರ್ಥವಾಗದೆ, ನಮಗೆ ನೀಡಬೇಕಾದ ಪಿಎಫ್ ಹಣ, ಬೋನಸ್ ಹಣ ಜೊತೆಗೆ ಬಾಕಿ ಇರುವ ಎರಡು ತಿಂಗಳ ಸಂಬಳ ನೀಡುವಂತೆ ಗಾರ್ಮೆಂಟ್ಸ್ ಕಾರ್ಮಿಕರು ಒತ್ತಾಯಿಸಿ ಪ್ರತಿಭಟಿಸಿದರು.

ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಬಳಿ ಇರುವ ಚೌದರಿ ಗಾರ್ಮೆಂಟ್ಸ್ ಮುಂಭಾಗದಲ್ಲಿ ನೂರಾರು ಮಹಿಳಾ ಕಾರ್ಮಿಕರು ಬೆಳಗ್ಗೆಯಿಂದ ಇಲ್ಲೇ ಬೀಡು ಬಿಟ್ಟಿದ್ದೇವೆ. ಇವರ ನಡವಳಿಕೆ ನೋಡುತ್ತಿದ್ದರೆ ಕಾರ್ಮಿಕರಿಗೆ ದ್ರೋಹ ಮಾಡಿ ಗಾರ್ಮೆಂಟ್ಸ್ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೇನೋ ಅನ್ನುವ ಅನುಮಾನ ಕಾಡುತ್ತಿದೆ. ಹಾಗಾಗಿ ನಾವು ಚೌದರಿ ಗಾರ್ಮೆಂಟ್ಸ್ ಮುಂದೆ ಪ್ರತಿಭಟನೆ ಮಾಡುವ ಪರಸ್ಥಿತಿ ಎದುರಾಗಿದೆ. ಕೆಲ ದಿನಗಳಿಂದ ನಮ್ಮನ್ನು ಗುಂಪು ಗುಂಪುಗಳಾಗಿ ಕೆಲಸದಿಂದ ತೆಗೆಯುತ್ತಿದ್ದಾರೆ. ಕಾರಣ ನಮಗೆ ತಿಳಿದು ಬಂದಿಲ್ಲ. ಅವರ ನಡೆ ನಮಗೆ ಅರ್ಥವೂ ಆಗುತ್ತಿಲ್ಲ ಇದರ ಜೊತೆಗೆ ನಮಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ನೀಡುತ್ತಾರೆ ಎಂಬುವ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾರ್ಮೆಂಟ್ಸ್ ಆಡಳಿತ ವೈಖರಿ ಗಮನಿಸಿದರೆ ಕಾರ್ಮಿಕರಿಗೆ ದ್ರೋಹ ಮಾಡಿ ಗಾರ್ಮೆಂಟ್ಸ್ ಬೇರೆ ಅವರಿಗೆ ಮಾರಾಟ ಮಾಡುತ್ತಿದ್ದಾರೇನೋ ಅನ್ನುವ ಅನುಮಾನ ಕಾಡುತ್ತಿದೆ ಹಾಗಾಗಿ ನಮ್ಮ ನೂರಾರು ಕಾರ್ಮಿಕರಿಗೆ ನೀಡಬೇಕಾದ ಪಿಎಫ್ ಹಣ ಮತ್ತು ಬೋನಸ್ ಹಣ ಜೊತೆಗೆ ಬಾಕಿ ಇರುವ ಎರಡು ತಿಂಗಳ ಸಂಬಳ ನಮ್ಮ ಖಾತೆಗೆ ಜಮಾ ಮಾಡಿ ಎಂದು ಒತ್ತಾಯಿಸಿದರು.

ವರದಿ : ಚಿಕ್ಕತೇಕಹಳ್ಳಿ ಡಿ. ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ

Edited By :
PublicNext

PublicNext

03/09/2025 02:10 pm

Cinque Terre

18.09 K

Cinque Terre

0

ಸಂಬಂಧಿತ ಸುದ್ದಿ