", "articleSection": "Infrastructure,Government,News", "image": { "@type": "ImageObject", "url": "https://prod.cdn.publicnext.com/s3fs-public/421698-1757144750-08~1.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShivakumarChikkaballapur" }, "editor": { "@type": "Person", "name": "suman.k" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಚಿಕ್ಕಬಳ್ಳಾಪುರ: ರಸ್ತೆಯನ್ನು ದುರಸ್ತಿ ಮಾಡದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕರವೇ ಹೋರಾಟಗಾರ ಬಾಬಾಜಾನ್ ಮತ್ತು ಸಾರ್ವಜನಿಕರು ಕೊತ...Read more" } ", "keywords": "Chikkaballapur,road repair protest,sowing paddy on road,unique protest,bad roads,potholes,civic issues,local news,Karnataka,symbolic protest", "url": "https://dashboard.publicnext.com/node" }
ಚಿಕ್ಕಬಳ್ಳಾಪುರ: ರಸ್ತೆಯನ್ನು ದುರಸ್ತಿ ಮಾಡದ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕರವೇ ಹೋರಾಟಗಾರ ಬಾಬಾಜಾನ್ ಮತ್ತು ಸಾರ್ವಜನಿಕರು ಕೊತ್ತಪಲ್ಲಿ ಅವರು ರಸ್ತೆಯಲ್ಲಿ ಪೈರು ನಾಟುವ ಮೂಲಕ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾಗ್ಯನಗರ ಪಟ್ಟಣದ 7ನೇ ವಾರ್ಡಿನ ಕೊತ್ತಪಲ್ಲಿ ಮಾರ್ಗದ ರಸ್ತೆ ಮತ್ತು ಚರಂಡಿಯನ್ನು ಕಳೆದ ಇಪ್ಪತ್ತು ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಆದರೆ ಈಗ ರಸ್ತೆ ಕೆರೆ ಕುಂಟೆಗಳಾಗಿ ನಿರ್ಮಾಣವಾಗಿವೆ. ಚರಂಡಿಗಳು ಎಲ್ಲಾ ಕಡೆ ಬ್ಲಾಕ್ ಆಗಿವೆ. ಇದರಿಂದಾಗಿ ಮಳೆ ನೀರು ಮನೆಯೊಳಗೆ ನುಗ್ಗುತ್ತಿವೆ. ಆದರೂ ಸಹ ಇತ್ತ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಗಾಲಿ ತಿರುಗಿ ನೋಡುತ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊತ್ತಪಲ್ಲಿ ಮಾರ್ಗದ ರಸ್ತೆಯು ಕೆಸರಿನಂತಿದ್ದು, ರಸ್ತೆಯಲ್ಲಿ ಪೈರು ನಾಟು ಮಾಡುವ ಮೂಲಕ ಪ್ರತಿಭಟನೆ ನಡೆಸಿ ವಿಭಿನ್ನ ರೀತಿಯಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಳೆ ಬಂದರೆ ಸಾಕು ಹಳ್ಳಕೊಳ್ಳದಂತಿರುವ ಈ ಕೆಸರಿನಂತಹ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಸಾಕಷ್ಟು ಮಂದಿ ಸ್ಥಳೀಯರು ಪುರಸಭೆ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಪಟ್ಟಣದ ಡಿವಿಜಿ ಮುಖ್ಯ ರಸ್ತೆ ಮಾರ್ಗದಿಂದ ಕೊತ್ತಪಲ್ಲಿ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿನಿತ್ಯ ನೂರಾರು ಜನರು ಓಡಾಡುವ ರಸ್ತೆ ಇದಾಗಿದ್ದು ಸಂಚರಿಸಲು ನರಕಯಾತನೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ ಸ್ಥಳೀಯ ಸಾರ್ವಜನಿಕರೊಂದಿಗೆ ಕರವೇ ಹೋರಾಟಗಾರರು ಒಗ್ಗೂಡಿ ಪುರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಪಬ್ಲಿಕ್ ನೆಕ್ಸ್ಟ್ ಚಿಕ್ಕಬಳ್ಳಾಪುರ
Kshetra Samachara
06/09/2025 01:15 pm