", "articleSection": "Politics,Religion", "image": { "@type": "ImageObject", "url": "https://prod.cdn.publicnext.com/s3fs-public/474799-1756981555-17-08-2025.01_14_47_02.Still253.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Shivaram Bramhavar" }, "editor": { "@type": "Person", "name": "Pavan.Badiger" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬ್ರಹ್ಮಾವರ: ದೇಶದ ಇತಿಹಾಸದಲ್ಲಿ ಅತೀ ಸುದೀರ್ಘ ಕಾಲ ಆಳ್ವಿಕೆ ಮಾಡಿದ ಅಳುಪರಾಜ ವಂಶದವರಿಂದ ಪೂಜೆ ಉತ್ಸವ ಕಂಡ ತುಳುನಾಡ ರಾಜಧಾನಿ ಎನಿಸಿದ ಬಾರಕೂರ...Read more" } ", "keywords": "kantara first scene, barkur, sri panchalingeshwara temple, renovation awaited, temple restoration, cultural heritage, karnataka news, barkur temple, kantara movie location, kannada news ", "url": "https://dashboard.publicnext.com/node" } ಕಾಂತಾರ ಪ್ರಥಮ ಸನ್ನಿವೇಶದ ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮಗ್ರ ಜೀರ್ಣೋದ್ಧಾರದ ನಿರೀಕ್ಷೆಯಲ್ಲಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂತಾರ ಪ್ರಥಮ ಸನ್ನಿವೇಶದ ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮಗ್ರ ಜೀರ್ಣೋದ್ಧಾರದ ನಿರೀಕ್ಷೆಯಲ್ಲಿ

ಬ್ರಹ್ಮಾವರ: ದೇಶದ ಇತಿಹಾಸದಲ್ಲಿ ಅತೀ ಸುದೀರ್ಘ ಕಾಲ ಆಳ್ವಿಕೆ ಮಾಡಿದ ಅಳುಪರಾಜ ವಂಶದವರಿಂದ ಪೂಜೆ ಉತ್ಸವ ಕಂಡ ತುಳುನಾಡ ರಾಜಧಾನಿ ಎನಿಸಿದ ಬಾರಕೂರು ಶ್ರೀಪಂಚಲಿಂಗೇಶ್ವರ ದೇವಸ್ಥಾನ ಯಶಸ್ವಿ ಕನ್ನಡ ಚಿತ್ರ ಕಾಂತಾರ ಚಿತ್ರದಲ್ಲಿ ರಾಜನೊಬ್ಬ ಅತೀ ಸಂಕಷ್ಟದಲ್ಲಿದ್ದು, ಮನಶಾಂತಿಗಾಗಿ ದೇವಸ್ಥಾನ ಒಂದಕ್ಕೆ ಹೋಗಿ ಹೋಮ ಹವನ ಮಾಡುವ ಪ್ರಥಮ ದೃಷ್ಯದಲ್ಲಿರುವುದೇ ಬಾರಕೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ.

ತೀರಾ ಜೀರ್ಣಾವಸ್ಥೆಯಲ್ಲಿ ಇರುವ ದೇವಸ್ಥಾನವನ್ನು ಸಮಗ್ರ ಜೀರ್ಣೋದ್ಧಾರಗೊಳಿಸಲು, ಬಾರಕೂರು ಶಾಂತಾರಾಮ ಶೆಟ್ಟಿಯವರ ನೇತೃತ್ವದಲ್ಲಿ, ಮೂಲತಃ ಬಾರಕೂರಿನವರಾದ ಸುಗ್ಗಿ ಸುಧಾಕರ ಶೆಟ್ಟಿಯವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿ ಚಿಂತನೆ ನಡೆಸಲಾಗಿದೆ. ಅನೇಕ ಪ್ರಾಯಶ್ಚಿತ್ತ ದೋಷ ನಿವಾರಣೆ ಮಾಡಿ, ದೇವಸ್ಥಾನದ ನೀಲನಕ್ಷೆ ತಯಾರಿಸಲಾಗಿದ್ದು ಹಂತಹಂತವಾಗಿ ಜೀರ್ಣೋದ್ಧಾರ ಕಾರ್ಯಗಳಿಗೆ ಚಾಲನೆ ದೊರಕಲಿದೆ.

ಈಗಾಗಲೆ ದೇಶ ವಿದೇಶದಲ್ಲಿರುವ ಭಕ್ತಾಧಿಗಳನ್ನು ಸಂಪರ್ಕಿಸಿದ ಕಾರಣ ದೇವಸ್ಥಾನದ ಒಂದೊಂದು ಗುಡಿಗಳನ್ನು ಪರಿವಾರ ದೇವರ ಗುಡಿಯನ್ನು ಮಾಡುವ ಬರವಸೆ ನೀಡಲಾಗಿದ್ದು, ಉಡುಪಿಯ ಬೆಂಗಳೂರಿನ ಉದ್ಯಮಿ ಮಹಾದಾನಿ ಎಂ. ಆರ್. ಜೆ ಸಮೂಹ ಸಂಸ್ಥೆಯ ಡಾ. ಕೆ. ಪ್ರಕಾಶ್ ಶೆಟ್ಟಿ ಯವರು ದೇವಸ್ಥಾನಕ್ಕೆ ಬೇಟಿ ನೀಡಿದ್ದಾರೆ. ಈ ಸಂದರ್ಭ ದೇವಸ್ಥಾನದ ವತಿಯಿಂದ ಆದರ ಪೂರ್ವಕವಾಗಿ ಆಮಂತ್ರಿಸಿ ಅವರನ್ನು ಗೌರವಿಸಲಾಯಿತು.

Edited By :
PublicNext

PublicNext

04/09/2025 03:56 pm

Cinque Terre

15.7 K

Cinque Terre

0

ಸಂಬಂಧಿತ ಸುದ್ದಿ