", "articleSection": "Religion", "image": { "@type": "ImageObject", "url": "https://prod.cdn.publicnext.com/s3fs-public/454738-1757342067-New-(1280-x-720-px)-(55).jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "Harish.K" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮೂಡುಬಿದಿರೆ: ಕ್ರೈಸ್ತರ ಪವಿತ್ರ ಹಬ್ಬವಾದ ತೆನೆಹಬ್ಬವನ್ನು (ಮೊಂತಿ ಹಬ್ಬ) ಮೂಡುಬಿದಿರೆ ನಗರದ ಕೋರ್ಪುಸ್ ಕ್ರಿಸ್ತಿ ಚರ್ಚ್‌ನಲ್ಲಿ ಸೋಮವಾರ ಬೆಳಿ...Read more" } ", "keywords": "Monti Fest celebrations in Moodbidri"", "url": "https://dashboard.publicnext.com/node" }
ಮೂಡುಬಿದಿರೆ: ಕ್ರೈಸ್ತರ ಪವಿತ್ರ ಹಬ್ಬವಾದ ತೆನೆಹಬ್ಬವನ್ನು (ಮೊಂತಿ ಹಬ್ಬ) ಮೂಡುಬಿದಿರೆ ನಗರದ ಕೋರ್ಪುಸ್ ಕ್ರಿಸ್ತಿ ಚರ್ಚ್‌ನಲ್ಲಿ ಸೋಮವಾರ ಬೆಳಿಗ್ಗೆ ಭಕ್ತಿಭಾವದಿಂದ ಆಚರಿಸಲಾಯಿತು.
ಮೂಡುಬಿದಿರೆ ಪೇಟೆಯ ಸಮಾಜಮಂದಿರ ವಾಣಿಜ್ಯ ಸಂಕೀರ್ಣದ ಎದುರು ತೆನೆಗೆ ಪೂಜೆ ಸಲ್ಲಿಸಲಾಯಿತು. ನಂತರ ಮೂಡುಬಿದಿರೆ ಚರ್ಚ್‌ನ ಧರ್ಮಗುರು ಪ್ರಾರ್ಥನೆ ಸಲ್ಲಿಸಿ, ಮುಖ್ಯರಸ್ತೆಯಲ್ಲಿ ಮೆರವಣಿಗೆಯಾಗಿ ಚರ್ಚ್‌ಗೆ ತೆನೆಗಳನ್ನು ತೆಗೆದುಕೊಂಡು ಸಾಗಿದರು. ಚರ್ಚ್‌ನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಕಾರ್ಯದರ್ಶಿ ನೋಬರ್ಟ್ ಮಾರ್ಟಿಸ್, ಪುರಸಭೆ ಸದಸ್ಯ ಜೊಸ್ಸಿ ಮೆನೇಜಸ್ ಸೇರಿದಂತೆ ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Kshetra Samachara
08/09/2025 08:04 pm